ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾಯ್ತು ಬಾಡಿ ಶೇಮಿಂಗ್? ಅಭಿಪ್ರಾಯ ಹೊರ ಹಾಕಿದ ಸಾನ್ಯಾ ಅಯ್ಯರ್

TV9kannada Web Team

TV9kannada Web Team | Edited By: Rajesh Duggumane

Updated on: Aug 25, 2022 | 10:23 PM

ಈ ಬಾರಿಯೂ ನಾನಾ ಮನಸ್ಥಿಯ ಮಂದಿ ಮನೆ ಒಳಗೆ ಸೇರಿದ್ದಾರೆ. ಆದರೆ, ಕೆಲವರು ಬಾಡಿ ಶೇಮಿಂಗ್ ಎದುರಿಸುತ್ತಿದ್ದಾರೆ. ಅದರಲ್ಲೂ ಗುರೂಜಿ ಹೊಟ್ಟೆ ನೋಡಿ ಅನೇಕರು ಟೀಕೆ ಮಾಡಿದ್ದಾರೆ. ಈ ಬಗ್ಗೆ ಸಾನ್ಯಾ ಅಯ್ಯರ್ ಮಾತನಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾಯ್ತು ಬಾಡಿ ಶೇಮಿಂಗ್? ಅಭಿಪ್ರಾಯ ಹೊರ ಹಾಕಿದ ಸಾನ್ಯಾ ಅಯ್ಯರ್
ಸಾನ್ಯಾ

‘ಬಿಗ್ ಬಾಸ್ ಒಟಿಟಿ’ (Bigg Boss OTT) ಮೂರನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಸೀಸನ್ ಪೂರ್ಣಗೊಳ್ಳಿದೆ. ಅದಾದ ಬಳಿಕ ಟಿವಿ ಸೀಸನ್ ಆರಂಭ ಆಗಲಿದೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 12 ಮಂದಿ ಇದ್ದಾರೆ. ಇವರ ನಡುವೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ. ಮನೆಯಲ್ಲಿ ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿಕೊಳ್ಳೋದು ಸರ್ವೇ ಸಾಮಾನ್ಯ. ಈ ಮಧ್ಯೆ ಕೆಲ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಈ ವಿಚಾರದ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಅದುವೇ ಬಾಡಿ ಶೇಮಿಂಗ್.

ಬಿಗ್ ಬಾಸ್​ನಲ್ಲಿ ಪ್ರತಿ ಬಾರಿ ವಿವಿಧ ರೀತಿಯ ಸ್ಪರ್ಧಿಗಳು ಎಂಟ್ರಿ ಕೊಡುತ್ತಾರೆ. ಎಲ್ಲರ ಮನಸ್ಥಿತಿಯೂ ಬೇರೆ ಬೇರೆ ಇರುತ್ತದೆ. ಅದೇ ರೀತಿ ದೇಹದ ಆಕಾರ ಕೂಡ ಒಬ್ಬರಿಗಿಂತ ಒಬ್ಬರು ಭಿನ್ನವಾಗಿರುತ್ತಾರೆ. ಈ ಬಾರಿಯೂ ನಾನಾ ಮನಸ್ಥಿತಿಯ ಮಂದಿ ಮನೆ ಒಳಗೆ ಸೇರಿದ್ದಾರೆ. ಆದರೆ, ಕೆಲವರು ಬಾಡಿ ಶೇಮಿಂಗ್ ಎದುರಿಸುತ್ತಿದ್ದಾರೆ. ಅದರಲ್ಲೂ ಗುರೂಜಿ ಹೊಟ್ಟೆ ನೋಡಿ ಅನೇಕರು ಟೀಕೆ ಮಾಡಿದ್ದಾರೆ. ಈ ಬಗ್ಗೆ ಸಾನ್ಯಾ ಅಯ್ಯರ್ ಮಾತನಾಡಿದ್ದಾರೆ.

ಗುರೂಜಿ ಅವರ ಹೊಟ್ಟೆ ನೋಡಿ ಕೆಲವರು ನಕ್ಕಿದ್ದರು. ಅವರು ನೋಡಲು ಸುಂದರವಾಗಿಲ್ಲ ಎಂಬ ಕಾರಣಕ್ಕೆ ಅನೇಕರು ಅವರನ್ನು ಟೀಕೆ ಮಾಡಿದ್ದರು. ಹೀಗಾಗಿ, ತಾವು ಹೊಟ್ಟೆ ಕರಗಿಸಿಕೊಳ್ಳುತ್ತೇವೆ ಎಂಬುದನ್ನು ಆರ್ಯವರ್ಧನ್ ಒತ್ತಿ ಹೇಳಿದ್ದರು. ‘ನನ್ನನ್ನು ನನಗೆ ನೋಡಿಕೊಳ್ಳಲು ಆಗುತ್ತಿಲ್ಲ. ಹೊಟ್ಟೆ ತುಂಬಾ ದೊಡ್ದಾಗಿದೆ. ನನಗೆ ನನ್ನ ಮೇಲೆ ಅಸಹ್ಯ ಹುಟ್ಟುತ್ತಿದೆ. ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಹೊಟ್ಟೆ ಕರಗಿಸುತ್ತೇನೆ’ ಎಂದಿದ್ದರು ಆರ್ಯವರ್ಧನ್​.

ಇದನ್ನೂ ಓದಿ: ಸಾನ್ಯಾ ಅಯ್ಯರ್ ಜತೆ ಜಶ್ವಂತ್ ಫ್ಲರ್ಟ್​? ವೈರಲ್ ಆಯ್ತು ವಿಡಿಯೋ

ಇದನ್ನೂ ಓದಿ

ಆರ್ಯವರ್ಧನ್ ಹೊಟ್ಟೆ ವಿಚಾರ, ಅವರ ದೇಹದ ಆಕೃತಿ ಪದೇಪದೇ ಚರ್ಚೆ ಆಗುತ್ತಲೇ ಇತ್ತು. ಸಾನ್ಯಾ ಅಯ್ಯರ್ ಎದುರು ಬಂದ ಆರ್ಯವರ್ಧನ್ ಅವರು, ಹೊಟ್ಟೆ ಬಗ್ಗೆ ಮಾತನಾಡಿದರು. ತಮ್ಮ ಬಗ್ಗೆ ತಾವು ಕೆಟ್ಟದಾಗಿ ಮಾತನಾಡಿಕೊಂಡರು. ಇದಕ್ಕೆ ಸಾನ್ಯಾ ಅಯ್ಯರ್ ಪ್ರತಿಕ್ರಿಯೆ ನೀಡಿದ್ದಾರೆ. ‘ನಿಮ್ಮ ಬಗ್ಗೆ ನೀವು ಕೆಟ್ಟದಾಗಿ ಮಾತನಾಡಿಕೊಳ್ಳಬೇಡಿ. ಮೊದಲೇ ಬಿಗ್ ಬಾಸ್ ಮನೆಯಲ್ಲಿ ಬಾಡಿ ಶೇಮಿಂಗ್ ಜಾಸ್ತಿ ಆಗಿದೆ. ನನಗೂ ಆ ಬಗ್ಗೆ ಅನುಭವ ಆಗಿದೆ’ ಎಂದರು ಸಾನ್ಯಾ ಅಯ್ಯರ್.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada