ಟಿವಿ9 ನೆಟ್ವರ್ಕ್ ಸಿಇಒ ಬರುಣ್ ದಾಸ್ ಜತೆ ವಿಜಯ್ ದೇವರಕೊಂಡ ವಿಶೇಷ ಸಂದರ್ಶನ: ‘ನ್ಯೂಸ್ 9 ಪ್ಲಸ್’ನಲ್ಲಿ ವೀಕ್ಷಿಸಿ
Vijay Deverakonda | News 9 Plus OTT: ‘ಟಿವಿ9 ನೆಟ್ವರ್ಕ್’ ಸಿಇಒ ಬರುಣ್ ದಾಸ್ ಅವರು ಸೌತ್ ಸೆನ್ಸೇಷನ್ ಸ್ಟಾರ್ ವಿಜಯ್ ದೇವರಕೊಂಡ ಅವರ ವಿಶೇಷ ಸಂದರ್ಶನ ಮಾಡಿದ್ದಾರೆ. ‘ನ್ಯೂಸ್ 9 ಪ್ಲಸ್’ ಒಟಿಟಿಯಲ್ಲಿ ಇದು ಲಭ್ಯವಿದೆ.
ಚಿತ್ರರಂಗದಲ್ಲಿ ನಟ ವಿಜಯ್ ದೇವರಕೊಂಡ (Vijay Deverakonda) ಅವರು ಅಪಾರ ಸಾಧನೆ ಮಾಡಿದ್ದಾರೆ. ದಿನದಿಂದ ದಿನಕ್ಕೆ ಅವರ ಖ್ಯಾತಿ ಹೆಚ್ಚುತ್ತಿದೆ. ಅವರು ನಟಿಸಿದ ‘ಲೈಗರ್’ ಸಿನಿಮಾ ಆಗಸ್ಟ್ 25ರಂದು ಅದ್ದೂರಿಯಾಗಿ ಬಿಡುಗಡೆ ಆಗಿದೆ. ಈ ಪ್ರಯುಕ್ತ ಅವರು ಒಂದು ವಿಶೇಷ ಸಂದರ್ಶನ (Vijay Deverakonda Interview) ನೀಡಿದ್ದಾರೆ. ‘ಟಿವಿ9 ನೆಟ್ವರ್ಕ್’ ಸಿಇಒ ಬರುಣ್ ದಾಸ್ ಅವರು ನಡೆಸಿದ ಈ ಸಂದರ್ಶನದಲ್ಲಿ ವಿಜಯ್ ದೇವರಕೊಂಡ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದರ ನಾಲ್ಕು ಎಪಿಸೋಡ್ಗಳು ‘ನ್ಯೂಸ್ 9 ಪ್ಲಸ್’ (News 9 Plus) ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಿವೆ. ಸಿನಿಮಾ, ಫಿಲಾಸಫಿ, ಜೀವನ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ದೇವರಕೊಂಡ ಮಾತನಾಡಿದ್ದಾರೆ. ಅದೆಲ್ಲವನ್ನೂ ತಿಳಿಯಲು ‘ನ್ಯೂಸ್ 9 ಪ್ಲಸ್’ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಸಂದರ್ಶನ ವೀಕ್ಷಿಸಿ.
ವಿಜಯ್ ದೇವರಕೊಂಡ ಅವರು ವೃತ್ತಿಜೀವನ ಆರಂಭಿಸಿದ್ದು ತೆಲುಗು ಚಿತ್ರರಂಗದಿಂದ. ಆದರೆ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಾ ಬಂದ ಅವರು ಇಂದು ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಹಿಂದಿ ಚಿತ್ರರಂಗದಲ್ಲೂ ಸ್ಟಾರ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇಡೀ ಭಾರತದಲ್ಲಿ ಅವರ ಹೆಸರು ಶೈನ್ ಆಗುತ್ತಿದೆ. ಈ ಕುರಿತು ಕೇಳಿದ ಪ್ರಶ್ನೆಗಳಿಗೆ ವಿಜಯ್ ದೇವರಕೊಂಡ ಉತ್ತರಿಸಿದ್ದಾರೆ.
‘ಲೈಗರ್’ ಸಿನಿಮಾದ ಹಿಂದೆ ಸಾಕಷ್ಟು ಪರಿಶ್ರಮ ಇದೆ. ಮೂರು ವರ್ಷಗಳ ಕಾಲ ಸತತವಾಗಿ ವಿಜಯ್ ದೇವರಕೊಂಡ ಅವರು ಈ ಚಿತ್ರಕ್ಕಾಗಿ ಶ್ರಮಿಸಿದ್ದಾರೆ. ಬಾಡಿ ಟ್ರಾನ್ಸ್ಫಾರ್ಮೇಷನ್ ಮಾಡಿಕೊಂಡಿದ್ದಾರೆ. ಬಾಕ್ಸಿಂಗ್, ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಕಲಿತು ಕ್ಯಾಮೆರಾ ಎದುರಿಸಿದ್ದಾರೆ. ನಟನೆಯಲ್ಲೂ ಮಾಗಿದ್ದಾರೆ. ಅದ್ದೂರಿಯಾಗಿ ಚಿತ್ರೀಕರಣ ಮಾಡಲಾಗಿದೆ. ವಿದೇಶದಲ್ಲೂ ಹಲವು ದೃಶ್ಯಗಳನ್ನು ಚಿತ್ರಿಸಲಾಗಿದೆ. ಈ ಎಲ್ಲ ಪ್ರಕ್ರಿಯೆಗಳ ಹಿಂದಿರುವ ಅನುಭವ ಅಪಾರ. ಆ ಬಗ್ಗೆ ವಿಜಯ್ ದೇವರಕೊಂಡ ಮನಸಾರೆ ಮಾತನಾಡಿದ್ದಾರೆ.
ಚಿತ್ರರಂಗ ಎಂಬುದೊಂದು ಸಾಗರ. ಸಾಧನೆಗೆ ಅಂತ್ಯವೇ ಇಲ್ಲ. ವಿಜಯ್ ದೇವರಕೊಂಡ ಸಾಗಬೇಕಿರುವ ಹಾದಿ ಇನ್ನೂ ದೊಡ್ಡದಿದೆ. ಮುಂದಿನ ಯೋಜನೆಗಳ ಕುರಿತಾಗಿಯೂ ಅವರು ಬೆಳಕು ಚೆಲ್ಲಿದ್ದಾರೆ. ವಿಜಯ್ ದೇವರಕೊಂಡ ಅಭಿಮಾನಿಗಳು ನೋಡಿ ತಿಳಿಯಲೇಬೇಕಾದ ಅನೇಕ ಸಂಗತಿಗಳ ಬಗ್ಗೆ ಈ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಒಟ್ಟು ನಾಲ್ಕು ಎಪಿಸೋಡ್ಗಳಲ್ಲಿ ಸಂದರ್ಶನ ಲಭ್ಯವಾಗಿದೆ.
The real ‘Liger’ @TheDeverakonda opens up to MD & CEO of TV9 Network, @justbarundas about films, philosophy, and life in this exclusive #Duologue, premiering tomorrow on #News9Plus. #Liger
Download the app https://t.co/A2Rhlo2u7c pic.twitter.com/FJD9FpPklU
— News9 Plus (@News9Plus) August 24, 2022
ಲೈಗರ್ ಸಿನಿಮಾ ಕುರಿತು:
ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರಿಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಲೆಜೆಂಡರಿ ಬಾಕ್ಸರ್ ಮೈಕ್ ಟೈಸನ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ರಮ್ಯಾ ಕೃಷ್ಣ ಮತ್ತು ವಿಜಯ್ ದೇವರಕೊಂಡ ಅವರು ತಾಯಿ-ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಘಟಾನುಘಟಿ ತಂತ್ರಜ್ಞರು ಈ ಚಿತ್ರದ ತೆರೆಹಿಂದೆ ಕೆಲಸ ಮಾಡಿದ್ದಾರೆ. ನಿರ್ಮಾಣದಲ್ಲಿ ಪುರಿ ಜಗನ್ನಾಥ್, ಚಾರ್ಮಿ ಕೌರ್, ಕರಣ್ ಜೋಹರ್ ಕೈ ಜೋಡಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.