AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲೈಗರ್’ ಸಿನಿಮಾದ ಖಳನಟ ವಿಶ್​ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಇಂಟರೆಸ್ಟಿಂಗ್​ ಮಾಹಿತಿ

Liger Villain Vish: ‘ಲೈಗರ್​’ ಚಿತ್ರದಲ್ಲಿ ನಟ ವಿಶ್​ ಅವರು ವಿಲನ್​ ಪಾತ್ರ ಮಾಡಿದ್ದಾರೆ. ಬಾಕ್ಸಿಂಗ್ ರಿಂಗ್​ನಲ್ಲಿ ವಿಜಯ್ ದೇವರಕೊಂಡ ವರ್ಸಸ್ ವಿಶ್ ನಡುವಿನ ಫೈಟ್​ ನೋಡಲು ಸಿನಿಪ್ರಿಯರು ಕಾದಿದ್ದಾರೆ.

TV9 Web
| Edited By: |

Updated on:Aug 23, 2022 | 9:33 AM

Share
ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಸಿನಿಮಾ ಆಗಸ್ಟ್​ 25ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಮೂಲಕ ಖಳನಟನಾಗಿ ವಿಶ್ ಅವರು ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಮಾಡೆಲ್​ ಆಗಿದ್ದ ಅವರೀಗ ವಿಲನ್​ ಆಗಿ ಅಬ್ಬರಿಸಲಿದ್ದಾರೆ.

Vijay Deverakonda starrer Liger movie villain Vish profile

1 / 5
ನಟ ಆಗಬೇಕು ಎಂಬುದು ವಿಶ್​ ಅವರ ಹಲವು ವರ್ಷಗಳ ಕನಸು. ಅದು ‘ಲೈಗರ್’ ಮೂಲಕ ನನಸಾಗುತ್ತಿದೆ. ಮಾಡೆಲ್ ಆಗಿ ವೃತ್ತಿ ಬದುಕು ಆರಂಭಿಸಿದ ಅವರು ನಂತರ ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು.

Vijay Deverakonda starrer Liger movie villain Vish profile

2 / 5
ಆ ನಂತರ Puri Connects ಸಂಸ್ಥೆಯಲ್ಲಿ ಸಿಇಒ ವಿಶ್ ಕಾರ್ಯನಿರ್ವಹಿಸಿದರು. ಯಾವುದೇ ಗಾಡ್ ಫಾದರ್ ಇಲ್ಲದೇ ಬಣ್ಣದ ಲೋಕಕ್ಕೆ ಬಂದ ಅವರು ‘ಲೈಗರ್​’ ಚಿತ್ರದ ಮೂಲಕ ಮಿಂಚಲಿದ್ದಾರೆ.

ಆ ನಂತರ Puri Connects ಸಂಸ್ಥೆಯಲ್ಲಿ ಸಿಇಒ ವಿಶ್ ಕಾರ್ಯನಿರ್ವಹಿಸಿದರು. ಯಾವುದೇ ಗಾಡ್ ಫಾದರ್ ಇಲ್ಲದೇ ಬಣ್ಣದ ಲೋಕಕ್ಕೆ ಬಂದ ಅವರು ‘ಲೈಗರ್​’ ಚಿತ್ರದ ಮೂಲಕ ಮಿಂಚಲಿದ್ದಾರೆ.

3 / 5
‘ನಿರ್ದೇಶಕ ಪುರಿ ಜಗನ್ನಾಥ್ ಅವರೇ ನನ್ನ ಗುರು, ಬೆಸ್ಟ್ ಫ್ರೆಂಡ್, ಮೆಂಟರ್’ ಎಂದು ವಿಶ್​ ಹೇಳಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್​ನಲ್ಲಿ ಅವರು ಗಮನ ಸೆಳೆದಿದ್ದಾರೆ. ಬಾಕ್ಸರ್​ ಆಗಿ ಅವರು ಕಾಣಿಸಿಕೊಳ್ಳಲಿದ್ದಾರೆ.

‘ನಿರ್ದೇಶಕ ಪುರಿ ಜಗನ್ನಾಥ್ ಅವರೇ ನನ್ನ ಗುರು, ಬೆಸ್ಟ್ ಫ್ರೆಂಡ್, ಮೆಂಟರ್’ ಎಂದು ವಿಶ್​ ಹೇಳಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್​ನಲ್ಲಿ ಅವರು ಗಮನ ಸೆಳೆದಿದ್ದಾರೆ. ಬಾಕ್ಸರ್​ ಆಗಿ ಅವರು ಕಾಣಿಸಿಕೊಳ್ಳಲಿದ್ದಾರೆ.

4 / 5
ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ‘ಲೈಗರ್’ ಬಿಡುಗಡೆ ಆಗಲಿದೆ. ಮೊದಲ ಸಿನಿಮಾದಲ್ಲೇ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅಬ್ಬರಿಸುವ ಅವಕಾಶ ವಿಶ್​ ಅವರಿಗೆ ಸಿಕ್ಕಿದೆ.

ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ‘ಲೈಗರ್’ ಬಿಡುಗಡೆ ಆಗಲಿದೆ. ಮೊದಲ ಸಿನಿಮಾದಲ್ಲೇ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅಬ್ಬರಿಸುವ ಅವಕಾಶ ವಿಶ್​ ಅವರಿಗೆ ಸಿಕ್ಕಿದೆ.

5 / 5

Published On - 9:33 am, Tue, 23 August 22