ನಿಮ್ಮನ್ನು ಲಘುವಾಗಿ ಮತ್ತು ತಿರಸ್ಕಾರ ಭಾವದಿಂದ ಕಾಣುವವರು ನಿಮ್ಮನ್ನು ಕಂಡು ಅಸೂಯೆ ಪಡುವುದು ಹೇಗೆ
ನಿಮ್ಮನ್ನು ಲಘುವಾಗಿ ಮತ್ತು ತಿರಸ್ಕಾರ ಭಾವದಿಂದ ಕಾಣುವವರು ನಿಮ್ಮನ್ನು ಕಂಡು ಅಸೂಯೆ ಪಡಲು ಇಲ್ಲಿದೆ ಕೆಲವು ಸಲಹೆಗಳು.
Updated on: Aug 22, 2022 | 9:34 PM

Tips On How To Make Your Man Jealous

Tips On How To Make Your Man Jealous

ನಿಮ್ಮ ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯಿರಿ, ನಿಮ್ಮ ಆಪ್ತರಿದ್ದಾಗಲೂ ನಿಮ್ಮ ಸ್ನೇಹಿತರಿಗೆ ಹೆಚ್ಚಿನ ಪ್ರಶಸ್ತ್ಯ ನೀಡಿ

ನಿಮ್ಮನ್ನು ಲಘುವಾಗಿ ಕಾಣುವರು ಅಥವಾ ತಿರಸ್ಕರಿಸುವವರ ಮುಂದೆ ನೀವು ಸದಾ ಬ್ಯುಸಿಯಾಗಿರಿ. ಮತ್ತು ಅವರನ್ನು ಎಲ್ಲರಂತೆ ಕಾಣಿ. ಅವರಿಗೆ ಪ್ರತ್ಯೇಕ ಸ್ಥಾನಮಾನ ನೀಡುವುದು ಬೇಡ. ನಿಮಗೆ ಅನ್ನಿಸಿದರೇ ಅವರ ಕರೆಗಳಿಗೆ ಮತ್ತು ಸಂದೇಶಗಳಿಗೆ ಕೂಡಲೆ ಪ್ರತಿಕ್ರಿಯೆ ನೀಡಬೇಡಿ. ಅವರಿಗಿಂತ ಉನ್ನತ ಮಟ್ಟದಲ್ಲಿ ಜೀವನ ಸಾಗಿಸಲು ಪ್ರಯತ್ನಿಸಿ. ಯಾವುದೇ ಕಾರಣಕ್ಕೆ ಅವರ ಪೋನ್ ನಂಬರ್ ಮತ್ತು ಸಾಮಾಜಿಕ ಜಾಲತಾಣದ ಅಕೌಂಟ್ಗಳನ್ನು ಬ್ಲಾಕ್ ಮಾಡಬೇಡಿ.

ನೀವು ನಿಮ್ಮ ಕೆಲಸದಲ್ಲಿ ಬ್ಯಸಿಯಾಗಿ ಇರಿ. ಅವರಿಗೆ ನಿಮ್ಮ ಸಮಯ ನೀಡಬೇಡಿ. ಅವರಿಗೆ ನಾನು ಬ್ಯುಸಿಯಾಗಿದ್ದೇನೆ ಕೆಲಸ ಬಹಳ ಇದೆ ಎಂಬ ಕಾರಣಗಳನ್ನು ಹೇಳಲು ಪ್ರಾರಂಭಿಸಿ. ನೀವು ಮಾಡುತ್ತಿರುವ ಕೆಲಸದಲ್ಲಿ ಉನ್ನತ ಹಂತವನ್ನು ತಲುಪಲು ಪ್ರಯತ್ನಿಸಿ ಇದರಿಂದ ನೀವು ಯಶಸ್ಸು ಕಾಣುತ್ತೀರಿ. ಇದರಿಂದ ಅವರು ಅಸೂಯೆ ಪಟ್ಟುಕೊಳ್ಳುವ ಸಾಧ್ಯತೆ ಇರುತ್ತದೆ.

ನಿಮ್ಮನ್ನು ಲಘುವಾಗಿ ಕಾಣುವ ಅಥವಾ ತಿರಸ್ಕರಿಸುವ ವ್ಯಕ್ತಿಯ ಸ್ನೇಹಿತರೊಂದಿಗೆ ನೀವು ಆಪ್ತರಾಗಿ. ನೀವು ಇವರಿಗೆ ಕೆಲವೊಂದು ಸಮಯದಲ್ಲಿ ಅವಶ್ಯವಾದ ಸಹಾಯ ಮಾಡಿ. ಇವರೊಂದಿಗೆ ಹೆಚ್ಚಿನ ಒಡನಾಟ ಬೆಳೆಸಿ. ಇದರಿಂದ ನಿಮ್ಮನ್ನು ಲಘುವಾಗಿ ಕಾಣುವರು ನಿಮ್ಮ ಕಡೆ ಅವರು ಗಮನ ಹರಿಸಬಹುದು ಮತ್ತು ಅಸೂಯೆ ಪಡಬಹುದು



















