Liger Movie: ಪುನೀತ್​ ಸಮಾಧಿಗೆ ವಿಜಯ್​ ದೇವರಕೊಂಡ ಭೇಟಿ; ‘ಲೈಗರ್​’ ಪ್ರಚಾರಕ್ಕೆ ಬೆಂಗಳೂರಿಗೆ ಬಂದ ನಟ

Vijay Deverakonda | Puneeth Rajkumar: ‘ಲೈಗರ್’ ಸಿನಿಮಾ ಪ್ರಮೋಷನ್​ ಸಲುವಾಗಿ ವಿಜಯ್​ ದೇವರಕೊಂಡ ಬೆಂಗಳೂರಿಗೆ ಬಂದಿದ್ದಾರೆ. ಈ ವೇಳೆ ಅವರು ಪುನೀತ್​ ರಾಜ್​ಕುಮಾರ್​ ಸಮಾಧಿಗೆ ಭೇಟಿ ನೀಡಿದ್ದಾರೆ.

Liger Movie: ಪುನೀತ್​ ಸಮಾಧಿಗೆ ವಿಜಯ್​ ದೇವರಕೊಂಡ ಭೇಟಿ; ‘ಲೈಗರ್​’ ಪ್ರಚಾರಕ್ಕೆ ಬೆಂಗಳೂರಿಗೆ ಬಂದ ನಟ
ವಿಜಯ್​ ದೇವರಕೊಂಡ, ಪುನೀತ್​ ರಾಜ್​ಕುಮಾರ್
Follow us
TV9 Web
| Updated By: ಮದನ್​ ಕುಮಾರ್​

Updated on:Aug 19, 2022 | 1:36 PM

ಟಾಲಿವುಡ್​ನ ಖ್ಯಾತ ನಟ ವಿಜಯ್​ ದೇವರಕೊಂಡ (Vijay Deverakonda) ಅವರು ಇಂದು (ಆಗಸ್ಟ್​ 19) ಬೆಂಗಳೂರಿಗೆ ಆಗಮಿಸಿದ್ದಾರೆ. ಬಹುನಿರೀಕ್ಷಿತ ‘ಲೈಗರ್​’ (Liger Movie) ಸಿನಿಮಾದ ಪ್ರಚಾರದ ಸಲುವಾಗಿ ಅವರು ಬಂದಿದ್ದಾರೆ. ಈ ವೇಳೆ ಅವರು ಪುನೀತ್​ ರಾಜ್​ಕುಮಾರ್​ ಸಮಾಧಿಗೆ ಭೇಟಿ ನೀಡಿದ್ದಾರೆ. ಅಪ್ಪು ನಿಧನರಾಗಿ ಹಲವು ತಿಂಗಳು ಕಳೆದಿದೆ. ಪರಭಾಷೆಯ ಯಾವುದೇ ಸ್ಟಾರ್​ ನಟರು ಬೆಂಗಳೂರಿಗೆ ಬಂದಾಗ ಅಪ್ಪು ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸುತ್ತಾರೆ. ಅದೇ ರೀತಿ, ವಿಜಯ್​ ದೇವರಕೊಂಡ ಕೂಡ ಕಂಠೀರವ ಸ್ಟುಡಿಯೋದಲ್ಲಿ ಇರುವ ಪುನೀತ್​ ರಾಜ್​ಕುಮಾರ್​ ಸಮಾಧಿಗೆ (Puneeth Rajkumar Samadhi) ಭೇಟಿ ನೀಡಿದ್ದಾರೆ. ಎಲ್ಲ ಭಾಷೆಯ ಚಿತ್ರರಂಗದ ಜೊತೆಗೆ ಪುನೀತ್​ ಉತ್ತಮ ಒಡನಾಟ ಹೊಂದಿದ್ದರು. ಹಾಗಾಗಿ ಅವರನ್ನು ಕಂಡರೆ ಎಲ್ಲರಿಗೂ ಅಪಾರ ಗೌರವ. ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲ ಎಂಬ ನೋವು ಎಲ್ಲರನ್ನೂ ಕಾಡುತ್ತಿದೆ.

‘ಲೈಗರ್​’ ಸಿನಿಮಾ ಆಗಸ್ಟ್​ 25ರಂದು ಅದ್ದೂರಿಯಾಗಿ ತೆರೆಗೆ ಬರಲಿದೆ. ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಪುನೀತ್​ ರಾಜ್​ಕುಮಾರ್​ ಅವರು ಮೊದಲ ಬಾರಿ ಹೀರೋ ಆಗಿ ನಟಿಸಿದ ‘ಅಪ್ಪು’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದು ಕೂಡ ಪುರಿ ಜಗನ್ನಾಥ್​. ಅವರಿಗೆ ಡಾ. ರಾಜ್​ಕುಮಾರ್​ ಕುಟುಂಬದ ಜೊತೆಗೆ ಒಡನಾಟ ಇದೆ. ಈಗ ಅವರು ನಿರ್ದೇಶನ ಮಾಡಿರುವ ‘ಲೈಗರ್​’ ಚಿತ್ರದ ಬಗ್ಗೆ ಬೆಂಗಳೂರಿನಲ್ಲಿ ಪ್ರಚಾರ ಮಾಡಲಾಗುತ್ತಿದೆ.

ಬಹುಕೋಟಿ ರೂಪಾಯಿ ಬಜೆಟ್​ನಲ್ಲಿ ಮೂಡಿಬಂದಿರುವ ‘ಲೈಗರ್​’ ಚಿತ್ರದಲ್ಲಿ ವಿಜಯ್​ ದೇವರಕೊಂಡ ಅವರಿಗೆ ಜೋಡಿಯಾಗಿ ಅನನ್ಯಾ ಪಾಂಡೆ ನಟಿಸಿದ್ದಾರೆ. ಬಾಕ್ಸರ್​ ಪಾತ್ರದಲ್ಲಿ ವಿಜಯ್​ ದೇವರಕೊಂಡ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅವರ ತಾಯಿ ಪಾತ್ರಕ್ಕೆ ರಮ್ಯಾ ಕೃಷ್ಣ ಬಣ್ಣ ಹಚ್ಚಿದ್ದಾರೆ. ವಿಶ್ವ ವಿಖ್ಯಾತ ಬಾಕ್ಸರ್​ ಮೈಕ್​ ಟೈಸನ್​ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಟ್ರೇಲರ್​ ಮತ್ತು ಹಾಡುಗಳು ಧೂಳೆಬ್ಬಿಸಿವೆ.

ಇದನ್ನೂ ಓದಿ
Image
Liger: ‘ಲೈಗರ್ ಸಿನಿಮಾ ಬ್ಲಾಕ್​ ಬಸ್ಟರ್​’: ರಿಲೀಸ್​ಗೂ ಮುನ್ನ ಘೋಷಿಸಿದ ವಿಜಯ್​ ದೇವರಕೊಂಡ
Image
Liger: ವಡೋದರದಲ್ಲಿ ವಿಜಯ್​ ದೇವರಕೊಂಡ, ಅನನ್ಯಾ ಪಾಂಡೆಗೆ ಅದ್ದೂರಿ ಸ್ವಾಗತ
Image
Liger Movie: ಅಹಮದಾಬಾದ್​ನಲ್ಲಿ ವಿಜಯ್​ ದೇವರಕೊಂಡ ನೋಡಲು ಜನಸಾಗರ; ಜೋರಾಗಿದೆ ‘ಲೈಗರ್​’ ಹವಾ
Image
Sini Shetty: ಮಿಸ್​ ಇಂಡಿಯಾ ಸಿನಿ ಶೆಟ್ಟಿಗೂ ಇಷ್ಟ ವಿಜಯ್​ ದೇವರಕೊಂಡ; ಮನದ ಮಾತು ತೆರೆದಿಟ್ಟ ಸುಂದರಿ

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ. ತೆಲುಗು, ಕನ್ನಡ, ಹಿಂದಿ, ಮಲಯಾಳಂ, ತಮಿಳು ಭಾಷೆಗಳಲ್ಲಿ ತೆರೆಕಾಣಲಿದೆ. ಹಾಗಾಗಿ ದೇಶದ ವಿವಿಧ ನಗರಗಳಿಗೆ ತೆರಳಿ ಭರ್ಜರಿಯಾಗಿ ಪ್ರಮೋಷನ್​ ಮಾಡಲಾಗುತ್ತಿದೆ. ಹೋದಲ್ಲೆಲ್ಲ ಅವರಿಗೆ ಭರ್ಜರಿ ಸ್ವಾಗತ ಸಿಗುತ್ತಿದೆ. ಈ ಸಿನಿಮಾ ಮೇಲೆ ವಿಜಯ್​ ದೇವರಕೊಂಡ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಬಾಲಿವುಡ್​ ಬಾಕ್ಸ್​ ಆಫೀಸ್​ ಮೇಲೆ ವಿಜಯ್​​ ದೇವರಕೊಂಡ ಕಣ್ಣಿಟ್ಟಿದ್ದಾರೆ. ಈ ಚಿತ್ರಕ್ಕೆ ಪುರಿ ಜಗನ್ನಾಥ್​, ಚಾರ್ಮಿ ಕೌರ್​, ಕರಣ್​ ಜೋಹರ್​ ಮುಂತಾದವರು ಬಂಡವಾಳ ಹೂಡಿದ್ದಾರೆ. ಮೊದಲ ದಿನ ಈ ಚಿತ್ರಕ್ಕೆ ಭರ್ಜರಿ ಓಪನಿಂಗ್​ ಸಿಗುವ ಸಾಧ್ಯತೆ ದಟ್ಟವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:25 pm, Fri, 19 August 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ