Sini Shetty: ಮಿಸ್​ ಇಂಡಿಯಾ ಸಿನಿ ಶೆಟ್ಟಿಗೂ ಇಷ್ಟ ವಿಜಯ್​ ದೇವರಕೊಂಡ; ಮನದ ಮಾತು ತೆರೆದಿಟ್ಟ ಸುಂದರಿ

Vijay Devarakonda: ಸಿನಿ ಶೆಟ್ಟಿ ಅವರಿಗೆ ವಿಜಯ್​ ದೇವರಕೊಂಡ ಎಂದರೆ ಸಖತ್​ ಇಷ್ಟವಂತೆ. ಒಂದು ವೇಳೆ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕರೆ ತುಂಬಾ ಖುಷಿ ಆಗುತ್ತದೆ ಎಂದು ಅವರು ಹೇಳಿದ್ದಾರೆ.

Sini Shetty: ಮಿಸ್​ ಇಂಡಿಯಾ ಸಿನಿ ಶೆಟ್ಟಿಗೂ ಇಷ್ಟ ವಿಜಯ್​ ದೇವರಕೊಂಡ; ಮನದ ಮಾತು ತೆರೆದಿಟ್ಟ ಸುಂದರಿ
ಸಿನಿ ಶೆಟ್ಟಿ, ವಿಜಯ್ ದೇವರಕೊಂಡ
Follow us
TV9 Web
| Updated By: ಮದನ್​ ಕುಮಾರ್​

Updated on: Jul 25, 2022 | 7:15 AM

ಕರ್ನಾಟಕ ಮೂಲದ ಮಾಡೆಲ್​ ಸಿನಿ ಶೆಟ್ಟಿ (Miss India Sini Shetty) ಅವರು ಸಖತ್​ ಸುದ್ದಿಯಲ್ಲಿದ್ದಾರೆ. ಅವರು ಸೌಂದರ್ಯ ಲೋಕದಲ್ಲಿ ಸಾಧನೆ ಮಾಡಿದ್ದಾರೆ. ‘ಮಿಸ್​ ಇಂಡಿಯಾ 2022’ ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ಕರುನಾಡಿಗೆ ಹೆಮ್ಮೆ ತಂದಿದ್ದಾರೆ. ಇತ್ತೀಚೆಗೆ ಮಂಗಳೂರಿಗೆ ಬಂದಿದ್ದ ಅವರನ್ನು ಅದ್ದೂರಿಯಾಗಿ ಸ್ವಾಗತ ಮಾಡಲಾಗಿತ್ತು. ಮಿಸ್​ ಇಂಡಿಯಾ (Miss India 2022) ಗೆದ್ದ ಖುಷಿಯಲ್ಲಿ ಇರುವ ಸಿನಿ ಶೆಟ್ಟಿ ಅವರು ಈಗ ‘ಮಿಸ್​ ವರ್ಲ್ಡ್​’ ಕಿರೀಟದ ಮೇಲೆ ಕಣ್ಣಿಟ್ಟಿದ್ದಾರೆ. ಆ ಸ್ಪರ್ಧೆಗಾಗಿ ತಯಾರಿ ನಡೆಸುತ್ತಿದ್ದಾರೆ. ಇತ್ತೀಚೆಗೆ ಮಾಧ್ಯಮದ ಜೊತೆ ಮಾತನಾಡಿದ ಅವರಿಗೆ ಫೇವರಿಟ್​ ನಟನ ಬಗ್ಗೆ ಪ್ರಶ್ನೆ ಎದುರಾಯಿತು. ಅದಕ್ಕೆ ಉತ್ತರಿಸಿದ ಅವರು ನೇರವಾಗಿ ‘ಲೈಗರ್​’ ಸಿನಿಮಾ ನಟ ವಿಜಯ್​ ದೇವರಕೊಂಡ (Vijay Devarakonda) ಹೆಸರನ್ನು ಹೇಳಿದ್ದಾರೆ. ಆ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ವಿಜಯ್​ ದೇವರಕೊಂಡ ಅವರು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅವರನ್ನು ಕಂಡರೆ ಅನೇಕ ನಟಿಯರಿಗೆ ಇಷ್ಟ. ಇತ್ತೀಚೆಗೆ ಬಾಲಿವುಡ್​ ಬೆಡಗಿಯರಾದ ಸಾರಾ ಅಲಿ ಖಾನ್​ ಮತ್ತು ಜಾನ್ವಿ ಕಪೂರ್ ಅವರು ವಿಜಯ್​ ದೇವರಕೊಂಡ ಜೊತೆ ಡೇಟಿಂಗ್​ ಮಾಡಬೇಕು ಎಂಬ ಆಸೆ ವ್ಯಕ್ತಪಡಿಸಿದ್ದರು. ಈಗ ಸಿನಿ ಶೆಟ್ಟಿ ಅವರು ಈ ಟಾಲಿವುಡ್​ ಹೀರೋ ಬಗ್ಗೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಸಿನಿ ಶೆಟ್ಟಿ ಅವರಿಗೆ ವಿಜಯ್​ ದೇವರಕೊಂಡ ಎಂದರೆ ಸಖತ್​ ಇಷ್ಟವಂತೆ. ಒಂದು ವೇಳೆ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕರೆ ತುಂಬಾ ಖುಷಿ ಆಗುತ್ತದೆ ಎಂದು ಅವರು ಹೇಳಿದ್ದಾರೆ. ಈ ಸುದ್ದಿಗೆ ವಿಜಯ್​ ದೇವರಕೊಂಡ ಯಾವ ರೀತಿ ಪ್ರತಿಕ್ರಿಯೆ ನೀಡಬಹುದು ಎಂಬ ಕೌತುಕ ಮೂಡಿದೆ. ಇನ್ನು, ಸಿನಿ ಶೆಟ್ಟಿ ಅವರಿಗೆ ಬಾಲಿವುಡ್​ನಲ್ಲಿ ಶಾರುಖ್​ ಖಾನ್​ ಫೇವರಿಟ್​ ಹೀರೋ ಆಗಿದ್ದಾರೆ.

ಇದನ್ನೂ ಓದಿ
Image
‘ಒಳ್ಳೆಯ ಅವಕಾಶ ಸಿಕ್ಕರೆ ಬಾಲಿವುಡ್​ಗೆ ಹೋಗ್ತೀನಿ’; ‘ಮಿಸ್ ಇಂಡಿಯಾ’ ಸಿನಿ ಶೆಟ್ಟಿ
Image
Sini Shetty: ಮಿಸ್​ ಇಂಡಿಯಾ ಸುಂದರಿ ಸಿನಿ ಶೆಟ್ಟಿ ಬಂದು ಪೋಸ್​ ಕೊಟ್ಟರೂ ಡೋಂಟ್​ ಕೇರ್​ ಎಂದ ಬಾಲಕ
Image
Sini Shetty: ‘ಮಿಸ್​ ಇಂಡಿಯಾ 2022’ ಸಿನಿ ಶೆಟ್ಟಿ ಸೂಪರ್​ ಡ್ಯಾನ್ಸ್​ ವಿಡಿಯೋ ವೈರಲ್​; ಹೆಜ್ಜೆ ಹಾಕಿದ್ದು ಯಾವ ಹಾಡಿಗೆ?
Image
Miss India: ಮಿಸ್​ ಇಂಡಿಯಾ ಗೆದ್ದ ಸಿನಿ ಶೆಟ್ಟಿಗೆ ಸಿಗುತ್ತೆ ದೊಡ್ಡ​​ ಚಾನ್ಸ್​; ಹೀಗೆ ಬಾಲಿವುಡ್ ಟಿಕೆಟ್​ ಪಡೆದವರ ಲಿಸ್ಟ್​ ಇಲ್ಲಿದೆ..

ಮಿಸ್​ ಇಂಡಿಯಾ, ಮಿಸ್​ ಯೂನಿವರ್ಸ್​​ ಮುಂತಾದ ಸೌಂದರ್ಯ ಸ್ಪರ್ಧೆಯಲ್ಲಿ ಕೀರಿಟ ಮುಡಿಗೇರಿಸಿಕೊಂಡ ಬೆಡಗಿಯರು ಚಿತ್ರರಂಗಕ್ಕೆ ಕಾಲಿಡುವುದು ವಾಡಿಕೆ. ಮುಂದಿನ ದಿನಗಳಲ್ಲಿ ಸಿನಿ ಶೆಟ್ಟಿ ಕೂಡ ಚಿತ್ರರಂಗಕ್ಕೆ ಬರಲಿದ್ದಾರೆ. ಈಗಾಗಲೇ ಅವರಿಗೆ ಅನೇಕ ಆಫರ್​ಗಳು ಬಂದಿರುತ್ತವೆ. ಆದರೆ ‘ಮಿಸ್​ ವರ್ಲ್ಡ್​’ ಸ್ಪರ್ಧೆ ಮುಗಿದ ಬಳಿಕವೇ ಅವರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

ಇನ್ನು, ವಿಜಯ್​ ದೇವರಕೊಂಡ ಬಗ್ಗೆ ಹೇಳುವುದಾದರೆ ಸದ್ಯ ಅವರು ‘ಲೈಗರ್​’ ಸಿನಿಮಾದ ಬಿಡುಗಡೆಗಾಗಿ ಕಾದಿದ್ದಾರೆ. ಈ ಸಿನಿಮಾ ಆಗಸ್ಟ್​ 25ರಂದು ತೆಲುಗು, ಹಿಂದಿ, ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ‘ಲೈಗರ್​’ ಚಿತ್ರದ ಟ್ರೇಲರ್​ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ