ನಟಿ ಜತೆ ವಿವಾಹಿತ ಹೀರೋ ಸುತ್ತಾಟ; ರಸ್ತೆಯಲ್ಲಿ ರಂಪ ಮಾಡಿ ನಟಿಗೆ ಥಳಿಸಿದ ಪತ್ನಿ; ವಿಡಿಯೋ ವೈರಲ್​

Prakruti Mishra Viral Video: ಬಾಬುಶಾನ್​ ಮೊಹಂತಿ ಮತ್ತು ಪ್ರಕೃತಿ ಮಿಶ್ರಾ ಒಂದೇ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ನಟನ ಪತ್ನಿ ಬಂದು ಅಡ್ಡಗಟ್ಟಿದ್ದಾರೆ. ಅಲ್ಲದೇ ಪ್ರಕೃತಿ ಮೇಲೆ ಅವರು ಹಲ್ಲೆ ಮಾಡಿದ್ದಾರೆ.

ನಟಿ ಜತೆ ವಿವಾಹಿತ ಹೀರೋ ಸುತ್ತಾಟ; ರಸ್ತೆಯಲ್ಲಿ ರಂಪ ಮಾಡಿ ನಟಿಗೆ ಥಳಿಸಿದ ಪತ್ನಿ; ವಿಡಿಯೋ ವೈರಲ್​
ನಟಿ ಮೇಲೆ ಹಲ್ಲೆಯ ವೈರಲ್​ ವಿಡಿಯೋ
TV9kannada Web Team

| Edited By: Madan Kumar

Jul 25, 2022 | 8:21 AM

ಸೆಲೆಬ್ರಿಟಿಗಳ ಸಂಸಾರದ ಗಲಾಟೆ ತುಂಬ ವೇಗವಾಗಿ ಜಗಜ್ಜಾಹೀರಾಗುತ್ತದೆ. ಈ ವಿಚಾರದಲ್ಲಿ ನಟ-ನಟಿಯರು ಎಷ್ಟು ಹುಷಾರಾಗಿದ್ದರೂ ಸಾಲದು. ಕೆಲವೇ ದಿನಗಳ ಹಿಂದೆ ತೆಲುಗು ನಟ ನರೇಶ್​ ಹಾಗೂ ಅವರ ಪತ್ನಿ ರಮ್ಯಾ ರಘುಪತಿ ನಡುವೆ ಇಂಥ ಜಟಾಪಟಿ ಏರ್ಪಟ್ಟಿತ್ತು. ನರೇಶ್​ ಜೊತೆ ಪವಿತ್ರಾ ಲೋಕೇಶ್​ ಅವರಿಗೆ ಅಫೇರ್​ ಇದೆ ಎಂದು ರಮ್ಯಾ ಆರೋಪಿಸಿದ್ದೂ ಅಲ್ಲದೇ ಚಪ್ಪಲಿ ಹಿಡಿದು ಹೊಡೆದಾಟಕ್ಕೆ ನಿಂತಿದ್ದರು. ಈಗ ಒಡಿಯಾ ಚಿತ್ರರಂಗದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ನಟ ಬಾಬುಶಾನ್​ ಮೊಹಂತಿ (Babushaan Mohanty) ಅವರು ನಟಿ ಪ್ರಕೃತಿ ವಿಶ್ರಾ (Prakruti Mishra) ಜೊತೆ ಸುತ್ತಾಡುತ್ತಿರುವುದನ್ನು ಖಂಡಿಸಿ ಅವರ ಪತ್ನಿ ತೃಪ್ತಿ ಅವರು ರಂಪಾಟ ಮಾಡಿದ್ದಾರೆ. ಆ ವಿಡಿಯೋ (Prakruti Mishra Viral Video) ಸಖತ್​ ವೈರಲ್​ ಆಗಿದೆ.

ಒಡಿಯಾ ಸಿನಿಮಾ ಮತ್ತು ಹಿಂದಿ ಕಿರುತೆರೆಯಲ್ಲಿ ನಟಿ ಪ್ರಕೃತಿ ಮಿಶ್ರಾ ಅವರು ಫೇಮಸ್​ ಆಗಿದ್ದಾರೆ. ಅವರ ಜೊತೆ ಸಿನಿಮಾವೊಂದರಲ್ಲಿ ಬಾಬುಶಾನ್​ ಮೊಂಹತಿ ನಟಿಸಿದ್ದಾರೆ. ಒಟ್ಟಿಗೆ ನಟಿಸಿದ ಬಳಿಕ ಇಬ್ಬರ ನಡುವಿನ ಸ್ನೇಹ ಹೆಚ್ಚಿದೆ. ಇದರಿಂದ ಬಾಬುಶಾನ್​ ಪತ್ನಿ ತೃಪ್ತಿಯ ನಿದ್ದೆ ಕೆಟ್ಟಿದೆ. ಬಾಬುಶಾನ್​ ಮತ್ತು ಪ್ರಕೃತಿ ಮಿಶ್ರಾ ನಡುವಿನ ಸಂಬಂಧ ಅಂತ್ಯಗೊಳಿಸಲು ತೃಪ್ತಿ ಅವರು ನಡುರಸ್ತೆಯಲ್ಲಿ ನಿಂತು ಕೈ-ಕೈ ಮಿಲಾಯಿಸಿದ್ದಾರೆ.

ಬಾಬುಶಾನ್​ ಮೊಹಂತಿ ಮತ್ತು ಪ್ರಕೃತಿ ಮಿಶ್ರಾ ಒಂದೇ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ತೃಪ್ತಿ ಅವರು ಬಂದು ಅಡ್ಡಗಟ್ಟಿದ್ದಾರೆ. ಅಲ್ಲದೇ ಪ್ರಕೃತಿ ಮೇಲೆ ಅವರು ಹಲ್ಲೆ ಮಾಡಿದ್ದಾರೆ. ಈ ಘಟನೆಯಿಂದ ಬಾಬುಶಾನ್​ ವಿಚಲಿತರಾಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ‘ನನ್ನ ಕುಟುಂಬದವರಿಗೆ ನೋವಾಗಿದೆ ಎಂಬುದು ನನಗೆ ತಿಳಿದಿರಲಿಲ್ಲ. ಕುಟುಂಬದವರಿಗೆ ಇಷ್ಟ ಇಲ್ಲ ಎಂದರೆ ನಾನು ಪ್ರಕೃತಿ ಜತೆ ಸಿನಿಮಾ ಮಾಡಲ್ಲ. ಅನಿವಾರ್ಯವಾದರೆ, ಭವಿಷ್ಯದಲ್ಲಿ ಯಾವ ನಟಿಯ ಜೊತೆಗೂ ಸಿನಿಮಾ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.

‘ನಮ್ಮ ಸಂಸಾರ ಚೆನ್ನಾಗಿಯೇ ಇತ್ತು. ಆದರೆ ಪ್ರಕೃತಿ ಎಂಟ್ರಿ ಆದ ಬಳಿಕ ಬಿರುಕು ಮೂಡಿತು’ ಎಂದು ತೃಪ್ತಿ ಹೇಳಿದ್ದಾರೆ. ಹಲ್ಲೆ ಮಾಡಿದ್ದಕ್ಕಾಗಿ ಅವರ ಮೇಲೆ ದೂರು ದಾಖಲಾಗಿದೆ. ಈ ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada