ಲಕ್ಷ್ಮೀದೇವಮ್ಮ ಅಂತ್ಯಕ್ರಿಯೆ: ಅಜ್ಜಿ ಪಾರ್ಥಿವ ಶರೀರಕ್ಕೆ ಅಂತಿಮ ಪೂಜೆ ಸಲ್ಲಿಸಿದ ನಟ ಧ್ರುವ ಸರ್ಜಾ

ಲಕ್ಷ್ಮೀದೇವಮ್ಮ ಅಂತ್ಯಕ್ರಿಯೆ: ಅಜ್ಜಿ ಪಾರ್ಥಿವ ಶರೀರಕ್ಕೆ ಅಂತಿಮ ಪೂಜೆ ಸಲ್ಲಿಸಿದ ನಟ ಧ್ರುವ ಸರ್ಜಾ

TV9 Web
| Updated By: ಮದನ್​ ಕುಮಾರ್​

Updated on:Jul 24, 2022 | 4:36 PM

ಲಕ್ಷ್ಮೀದೇವಮ್ಮ ಅವರ ಹುಟ್ಟೂರಾದ ಮಧುಗಿರಿ ತಾಲ್ಲೂಕಿನ ಜಕ್ಕೇನಹಳ್ಳಿಯಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಈ ವೇಳೆ ಧ್ರುವ ಸರ್ಜಾ ಅವರು ಅಂತಿಮ ಪೂಜೆ ಸಲ್ಲಿಸಿದರು.

ನಟ ಧ್ರುವ ಸರ್ಜಾ (Dhruva Sarja) ಅವರ ಅಜ್ಜಿ ಲಕ್ಷ್ಮೀದೇವಮ್ಮ ಅಂತ್ಯಕ್ರಿಯೆ ಭಾನುವಾರ (ಜುಲೈ 24) ಮಧ್ಯಾಹ್ನ ನೆರವೇರಿದೆ. ನಟ ಶಕ್ತಿ ಪ್ರಸಾದ್​ ಅವರ ಪತ್ನಿಯಾದ ಲಕ್ಷ್ಮೀದೇವಮ್ಮ (Lakshmi Devamma) ಅವರನ್ನು ಪತಿಯ ಸಮಾಧಿ ಪಕ್ಕದಲ್ಲೇ ಮಣ್ಣು ಮಾಡಲಾಗಿದೆ. ಅಂತಿಮ ಸಂಸ್ಕಾರದ ವೇಳೆ ಸರ್ಜಾ ಕುಟುಂಬದ ಸದಸ್ಯರು ಭಾಗಿ ಆಗಿದ್ದರು. ಧ್ರುವ ಸರ್ಜಾ ಅವರು ಅಜ್ಜಿಯ ಪಾರ್ಥಿವ ಶರೀರಕ್ಕೆ ಅಂತಿಮ ಪೂಜೆ ನೆರವೇರಿಸಿದರು. ಲಕ್ಷ್ಮೀದೇವಮ್ಮ ನಿಧನದಿಂದ ಅರ್ಜುನ್​ ಸರ್ಜಾ (Arjun Sarja) ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ.

 

Published on: Jul 24, 2022 04:36 PM