ಬೆಂಗಳೂರಲ್ಲಿ ಮತ್ತೊಬ್ಬ ಶಂಕಿತ ಉಗ್ರನನ್ನು ವಶಕ್ಕೆ ಪಡೆದ ಸಿಸಿಬಿ

ಬೆಂಗಳೂರಲ್ಲಿ ಮತ್ತೊಬ್ಬ ಶಂಕಿತ ಉಗ್ರನನ್ನು ವಶಕ್ಕೆ ಪಡೆದ ಸಿಸಿಬಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 25, 2022 | 10:57 AM

ಅಸ್ಸಾಂ ಮೂಲದ ಅಖ್ತರ್ ಹುಸ್ಸೇನ್ ಹೆಸರಿನ ಯುವಕ ಲಷ್ಕರ್-ಎ-ತೈಬಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ.

Bengaluru: ಎರಡು ತಿಂಗಳ ಹಿಂದಷ್ಟೇ ಬೆಂಗಳೂರಲ್ಲಿ ವಾಸವಾಗಿದ್ದ ಜಮ್ಮು ಮತ್ತು ಕಾಶ್ಮೀರ ಮೂಲದ ಶಂಕಿತ ಉಗ್ರನೊಬ್ಬನನ್ನು (suspected terrorist) ಪೊಲೀಸರು ಬಂಧಿಸಿದ ಬಗ್ಗೆ ನಾವು ವರದಿ ಮಾಡಿದ್ದೆವು. ರವಿವಾರ ನಗರ ಅಪರಾಧ ದಳದ ಅಧಿಕಾರಿಗಳು ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡು ತಿಲಕ್ ನಗರದಲ್ಲಿ ವಾಸವಾಗಿದ್ದ ಒಬ್ಬ ಶಂಕಿತ ಉಗ್ರನನ್ನು ಖಚಿತ ಮಾಹಿತಿಯೊಂದನ್ನು ಆಧರಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಅಸ್ಸಾಂ ಮೂಲದ ಅಖ್ತರ್ ಹುಸ್ಸೇನ್ (Akhtar Hussain) ಹೆಸರಿನ ಯುವಕ ಲಷ್ಕರ್-ಎ-ತೈಬಾ (Lashkar-E-Taiba) ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ.