AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಮಿನೇಟ್ ಆಗದೇ ಇದ್ದರೂ ಬಿಗ್ ಬಾಸ್ ಮನೆಯಿಂದ ಅರ್ಜುನ್ ಔಟ್​; ಏನಿದು ಟ್ವಿಸ್ಟ್?

ಕಳೆದ ವಾರದ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಅರ್ಜುನ್ ಹಾಗೂ ಮೊದಲಾದವರು ರೇಸ್​ನಲ್ಲಿದ್ದರು. ಈ ವೇಳೆ ಅರ್ಜುನ್ ಅವರ ಭುಜಕ್ಕೆ ತೀವ್ರ ಏಟಾಗಿತ್ತು.

ನಾಮಿನೇಟ್ ಆಗದೇ ಇದ್ದರೂ ಬಿಗ್ ಬಾಸ್ ಮನೆಯಿಂದ ಅರ್ಜುನ್ ಔಟ್​; ಏನಿದು ಟ್ವಿಸ್ಟ್?
ಅರ್ಜುನ್ ರಮೇಶ್
TV9 Web
| Edited By: |

Updated on:Aug 20, 2022 | 7:31 PM

Share

‘ಬಿಗ್ ಬಾಸ್ ಒಟಿಟಿ’ಯಲ್ಲಿ (Bigg Boss OTT) ಎರಡನೇ ವಾರದ ಎಲಿಮಿನೇಷನ್​ಗೆ ಸಕಲ ಸಿದ್ಧತೆ ನಡೆದಿದೆ. ಈ ಬಾರಿ 9 ಸ್ಪರ್ಧಿಗಳು ಎಲಿಮಿನೇಷನ್​ಗೆ ನಾಮಿನೇಟ್ ಆಗಿದ್ದಾರೆ. ಆ ಪೈಕಿ ಯಾರು ಹೊರಹೋಗುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈ ಮಧ್ಯೆ ಕಳೆದ ವಾರ ಕ್ಯಾಪ್ಟನ್ ಆಗಿದ್ದ ಅರ್ಜುನ್ ರಮೇಶ್ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್​ ಆಡಿದ್ದೇ ಅರ್ಜುನ್ ರಮೇಶ್ (Arjun Ramesh) ಅವರಿಗೆ ಮುಳುವಾಗಿದೆ.

ಕಳೆದ ವಾರದ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಅರ್ಜುನ್ ಹಾಗೂ ಮೊದಲಾದವರು ರೇಸ್​ನಲ್ಲಿದ್ದರು. ಈ ವೇಳೆ ಅರ್ಜುನ್ ಅವರ ಭುಜಕ್ಕೆ ತೀವ್ರ ಏಟಾಗಿತ್ತು. ಅವರು ಹ್ಯಾಂಗಿಂಗ್ಸ್ ಹಾಕಿಕೊಂಡೇ ಒಂದು ವಾರ ಕಳೆದಿದ್ದಾರೆ. ಆದಾಗ್ಯೂ ಅವರಿಗೆ ನೋವು ಕಡಿಮೆ ಆಗಿಲ್ಲ. ಈ ಕಾರಣಕ್ಕೆ ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ.

ಈ ವಾರ ಜಶ್ವಂತ್ ಅವರು ಬಿಗ್ ಬಾಸ್​ನ ಕ್ಯಾಪ್ಟನ್ ಆಗಿದ್ದಾರೆ. ಈ ಕಾರಣಕ್ಕೆ ಅರ್ಜುನ್ ಅವರು ಟಾಸ್ಕ್​ಗಳನ್ನು ಆಡಲೇಬೇಕಿದೆ. ಆದರೆ, ಗಾಯದ ಸಮಸ್ಯೆ ಇಟ್ಟುಕೊಂಡು ಸ್ಪರ್ಧೆಗೆ ಇಳಿಯಲು ಸಾಧ್ಯವಿಲ್ಲ. ಈ ಕಾರಣಕ್ಕೆ ಅರ್ಜುನ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ.

ಇದನ್ನೂ ಓದಿ
Image
‘ನಾನು ಸಖತ್ ಆಗಿ ಕಬಡ್ಡಿ ಆಡ್ತೀನಿ’ ಎಂದು ಬಿಗ್ ಬಾಸ್ ಮನೆಯಲ್ಲಿ ಗಾಯ ಮಾಡಿಕೊಂಡ ಸೋನು ಶ್ರೀನಿವಾಸ್ ಗೌಡ
Image
ಗರ್ಲ್​​ಫ್ರೆಂಡ್ ವಿಚಾರಕ್ಕೆ ಬಂದ ಸೋನು ಗೌಡ ವಿರುದ್ಧ ಸೇಡು ತೀರಿಸಿಕೊಂಡ ಜಶ್ವಂತ್
Image
‘ಪ್ಲೀಸ್ ದಯವಿಟ್ಟು ಬಿಟ್ಟುಬಿಡಿ’; ಮನೆಗೆ ಬಂದ ಅತಿಥಿ ಕಂಡು ಕಿರುಚಾಡಿದ ಸಾನ್ಯಾ ಅಯ್ಯರ್
Image
‘ಕಾಫಿ ನಾಡು ಚಂದು ಬಿಗ್ ಬಾಸ್‌ಗೆ ಹೋಗಬೇಕು’ ಅಭಿಯಾನ ಶುರು; ಸ್ವತಃ ಬೆಂಬಲ ನೀಡಿದ ವೈರಲ್ ಸಿಂಗರ್!

ಕಳೆದ ವಾರ ಕಿರಣ್ ಯೋಗೇಶ್ವರ್​ ಅವರು ಕಡಿಮೆ ವೋಟ್ ಪಡೆದು ಔಟ್ ಆಗಿದ್ದರು. ಇದಲ್ಲದೆ, ಲೋಕೇಶ್ ಅವರು ಗಾಯಕ್ಕೆ ತುತ್ತಾಗಿ ಮನೆಯಿಂದ ಹೊರ ಬಿದ್ದಿದ್ದರು. ಈ ಮೂಲಕ ಕಳೆದ ವಾರವಢ ಇಬ್ಬರು ಔಟ್ ಆಗಿದ್ದರು. ಈ ವಾರ ಒಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಹೋಗಬೇಕಿತ್ತು. ಆದರೆ, ಅರ್ಜುನ್ ಜತೆ ಮತ್ತೊಬ್ಬರು ಎಲಿಮಿನೇಟ್ ಆಗುವ ಸಾಧ್ಯತೆ ದಟ್ಟವಾಗಿದೆ. ಈ ಕಾರಣದಿಂದ ಈ ವಾರವೂ ಇಬ್ಬರು ಮನೆಯಿಂದ ಹೊರಹೋಗುವ ಸಾಧ್ಯತೆ ದಟ್ಟವಾಗಿದೆ. ಹಾಗಾದಲ್ಲಿ ಮನೆಯ ಸದಸ್ಯರ ಸಂಖ್ಯೆ 12ಕ್ಕೆ ಇಳಿಕೆ ಆಗಲಿದೆ.

ಇದನ್ನೂ ಓದಿ: ಕ್ಲೀನ್ ಶೇವ್ ಲುಕ್​ನಲ್ಲಿ ‘ಬಿಗ್ ಬಾಸ್’ ವೇದಿಕೆ ಏರಿದ ಸುದೀಪ್; ಇದಕ್ಕಿದೆ ಪ್ರಮುಖ ಕಾರಣ

‘ಬಿಗ್ ಬಾಸ್ ಒಟಿಟಿ’ ಕೇವಲ ಆರು ವಾರ ಇರಲಿದೆ. ಈಗಾಗಲೇ ಎರಡು ವಾರ ಪೂರ್ಣಗೊಂಡಿದೆ. ಮುಂದಿನ ನಾಲ್ಕು ವಾರಗಳ ಕಾಲ ಸ್ಪರ್ಧಿಗಳ ಮಧ್ಯೆ ಟಫ್ ಕಾಂಪಿಟೇಷನ್ ಇರಲಿದೆ. ಕೊನೆಯಲ್ಲಿ ಉಳಿದುಕೊಳ್ಳುವ ಕೆಲ ಸ್ಪರ್ಧಿಗಳು ‘ಬಿಗ್ ಬಾಸ್ ಕನ್ನಡ ಸೀಸನ್ 9’ಕ್ಕೆ ಬಡ್ತಿ ಪಡೆಯುತ್ತಾರೆ.

Published On - 5:48 pm, Sat, 20 August 22