‘ಗುರೂಜಿ ಬಿಡೋದೆಲ್ಲ ಬರೀ ಬೊಗಳೆ’; ಆರ್ಯವರ್ಧನ್ ಲೆಕ್ಕಾಚಾರದ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಟೀಕೆ
ಆರ್ಯವರ್ಧನ್ ಗುರೂಜಿ ಅವರು ಟಾಸ್ಕ್ ಸಂದರ್ಭದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಪ್ರಿಡಿಕ್ಟ್ ಮಾಡಿದ್ದರು. ‘ಸೋನು ಎಲ್ಲಾ ಆಟದಲ್ಲಿ ಗೆಲ್ಲುತ್ತಾರೆ’ ಎಂದು ಗುರೂಜಿ ಅವರು ಹೇಳಿದ್ದರು. ಆದರೆ, ಸೋನುಗೆ ಗೆಲ್ಲಲು ಸಾಧ್ಯವಾಗಿಲ್ಲ.
ಆರ್ಯವರ್ಧನ್ ಗುರೂಜಿ (Aryavardhan Guruji ) ಅವರು ಸಂಖ್ಯಾಶಾಸ್ತ್ರದ ಮೂಲಕ ಗಮನ ಸೆಳೆದಿದ್ದಾರೆ. ಐಪಿಎಲ್ ಸಂದರ್ಭದಲ್ಲಿ ಅವರು ನೀಡಿದ್ದ ಲೆಕ್ಕಾಚಾರದಲ್ಲಿ ಬಹುತೇಕವು ತಲೆಕೆಳಗಾಗಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಸಾಕಷ್ಟು ಟ್ರೋಲ್ ಆಗಿದ್ದರು. ಈಗ ಬಿಗ್ ಬಾಸ್ (Bigg Boss) ಮನೆಯಲ್ಲಿ ಅವರು ಸ್ಪರ್ಧಿಯಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಆದಾಗ್ಯೂ ಅನೇಕರಿಗೆ ಅವರು ಇಷ್ಟ ಆಗುತ್ತಿಲ್ಲ. ಅವರ ಹಿಂಬದಿಯಿಂದ ಕೆಲ ಮಾತುಗಳನ್ನು ಹೇಳಲಾಗುತ್ತಿದೆ.
ಆರ್ಯವರ್ಧನ್ ಗುರೂಜಿ ಅವರು ಟಾಸ್ಕ್ ಸಂದರ್ಭದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಪ್ರಿಡಿಕ್ಟ್ ಮಾಡಿದ್ದರು. ‘ಸೋನು ಎಲ್ಲಾ ಆಟದಲ್ಲಿ ಗೆಲ್ಲುತ್ತಾರೆ’ ಎಂದು ಗುರೂಜಿ ಅವರು ಹೇಳಿದ್ದರು. ಆದರೆ, ಸೋನುಗೆ ಗೆಲ್ಲಲು ಸಾಧ್ಯವಾಗಿಲ್ಲ. ಈ ಮೂಲಕ ಆರ್ಯವರ್ಧನ್ ಅವರ ಲೆಕ್ಕಾಚಾರ ಉಲ್ಟಾ-ಪಲ್ಟಾ ಆಗಿತ್ತು. ಈ ಕಾರಣಕ್ಕೆ ಸೋಮಣ್ಣ ಅವರು ಗುರೂಜಿ ಅವರನ್ನು ಟೀಕೆ ಮಾಡಿದ್ದಾರೆ.
ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಗುರೂಜಿ ಅವರು ಕ್ಯಾಮೆರಾಗೆ ಹೇಳುತ್ತಿದ್ದರು. ಇದನ್ನು ನೋಡಿ ಸೋಮಣ್ಣ ನಕ್ಕಿದ್ದಾರೆ. ಉಳಿದ ಸ್ಪರ್ಧಿಗಳಿಗೆ ಅವರ ಬಗ್ಗೆ ಹೇಳಿಕೊಂಡು ನಕ್ಕಿದ್ದಾರೆ. ‘ಗುರೂಜಿ ಅವರು ಲೆಕ್ಕಾಚಾರದಲ್ಲಿ ಸದಾ ತಪ್ಪುತ್ತಿದ್ದಾರೆ. ಅವರು ಭವಿಷ್ಯ ನಿಜವಾಗಲ್ಲ. ವ್ಯಕ್ತಿ ಆಗಿ ಅವರು ಇಷ್ಟ ಆಗುತ್ತಾರೆ ಅಷ್ಟೇ. ಆದರೆ, ಸಂಖ್ಯಾಶಾಸ್ತ್ರಜ್ಞರಾಗಿ ಅವರು ಫ್ಲಾಪ್. ಅವರು ಬಿಡೋದಲ್ಲ ಬರೀ ಬೊಗಳೆ’ ಎಂದರು ಸೋಮಣ್ಣ. ಈ ಮಾತನ್ನು ಕೇಳಿ ಉಳಿದವರು ನಕ್ಕರು.
ಬಿಗ್ ಬಾಸ್ ಮನೆ ಒಳಗೆ ತೆರಳುವುದಕ್ಕೂ ಮೊದಲು ಗುರೂಜಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆಗಿದ್ದಾರೆ. ಐಪಿಎಲ್ ಬಗ್ಗೆ ಅವರು ನೀಡುತ್ತಿದ್ದ ಲೆಕ್ಕಾಚಾರ ಬಹುತೇಕ ತಪ್ಪಾಗುತ್ತಿತ್ತು. ಈಗ ಬಿಗ್ ಬಾಸ್ ಮನೆಯಲ್ಲೂ ಇದೇ ರೀತಿ ಆಗುತ್ತಿದೆ. ಈ ಕಾರಣಕ್ಕೆ ಅವರು ಅನೇಕರಿಂದ ಟೀಕೆಗೆ ಒಳಗಾಗಿದ್ದಾರೆ.
ಇದನ್ನೂ ಓದಿ: ಮೀಸೆ, ತಲೆ ಬೋಳಿಸಿಕೊಂಡ ಆರ್ಯವರ್ಧನ್; ಗುರೂಜಿ ಹೊಸ ಲುಕ್ ಹೇಗಿದೆ ನೋಡಿ
ಆರ್ಯವರ್ಧನ್ ಗುರೂಜಿ ಸಂಖ್ಯಾಶಾಸ್ತ್ರಜ್ಞ ಎಂಬುದಷ್ಟೇ ಗೊತ್ತಿತ್ತು. ಆದರೆ, ಬಿಗ್ ಬಾಸ್ ಮೂಲಕ ಅವರು ಭಾವನಾತ್ಮಕ ವ್ಯಕ್ತಿ ಎಂಬುದು ಕೂಡ ಸಾಬೀತಾಗಿದೆ. ಈ ಕಾರಣದಿಂದಲೂ ಅವರು ಅನೇಕರಿಗೆ ಇಷ್ಟವಾಗಿದ್ದಾರೆ. ಈ ವಾರದ ನಾಮಿನೇಷನ್ ಲಿಸ್ಟ್ನಲ್ಲಿ ಆರ್ಯವರ್ಧನ್ ಹೆಸರು ಕೂಡ ಇದೆ.