ಗರ್ಲ್​​ಫ್ರೆಂಡ್ ವಿಚಾರಕ್ಕೆ ಬಂದ ಸೋನು ಗೌಡ ವಿರುದ್ಧ ಸೇಡು ತೀರಿಸಿಕೊಂಡ ಜಶ್ವಂತ್

ಕಳೆದ ವಾರ ಸೋನು ಗೌಡ ನಾಮಿನೇಟ್ ಆಗಿದ್ದರು. ಅವರು ಮೊದಲ ವಾರವೇ ಮನೆಯಿಂದ ಹೊರ ಹೋಗುತ್ತಾರೆ ಎಂಬುದು ಎಲ್ಲರ ಲೆಕ್ಕಾಚಾರ ಆಗಿತ್ತು. ಆದರೆ, ಅವರು ಹೆಚ್ಚು ವೋಟ್ ಪಡೆದು ಬಚಾವ್ ಆದರು.

ಗರ್ಲ್​​ಫ್ರೆಂಡ್ ವಿಚಾರಕ್ಕೆ ಬಂದ ಸೋನು ಗೌಡ ವಿರುದ್ಧ ಸೇಡು ತೀರಿಸಿಕೊಂಡ ಜಶ್ವಂತ್
ಜಶ್ವಂತ್-ಸೋನು
TV9kannada Web Team

| Edited By: Rajesh Duggumane

Aug 15, 2022 | 9:30 PM

ಬಿಗ್ ಬಾಸ್ (Bigg Boss) ಮನೆಯಲ್ಲಿ ಎರಡನೇ ವಾರದ ನಾಮಿನೇಷನ್​ನ ಪ್ರಕ್ರಿಯೆ ನಡೆದಿದೆ. ಈ ವಾರ ಬಿಗ್ ಬಾಸ್​ ಮನೆಯಿಂದ ಮತ್ತೊಂದು ಸದಸ್ಯರು ಹೊರ ಹೋಗಲಿದ್ದಾರೆ. ಅದು ಯಾರು ಎಂಬುದು ಈ ವಾರಾಂತ್ಯಕ್ಕೆ ಗೊತ್ತಾಗಲಿದೆ. ಕಳೆದ ವಾರದಂತೆ ಈ ವಾರವೂ ಸೋನು ಗೌಡ (Sonu Gowda) ನಾಮಿನೇಟ್​ ಆಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ಜಶ್ವಂತ್​. ಅವರು ನಾಮಿನೇಟ್ ಆಗೋಕೆ ಕಾರಣ ಆಗಿದ್ದು ಜಶ್ವಂತ್​. ಗರ್ಲ್​ಫ್ರೆಂಡ್ ವಿಚಾರಕ್ಕೆ ಬಂದ ಸೋನು ಗೌಡ ವಿರುದ್ಧ ಅವರು ಸೇಡು ತೀರಿಸಿಕೊಂಡರು!

ಬಿಗ್​ ಬಾಸ್​ನ ಎರಡನೇ ವಾರದ ಮೊದಲ ದಿನವೇ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಮ್ಯೂಸಿಕ್ ಚೇರ್ ರೀತಿಯೇ ಒಂದು ಗೇಮ್ ನಡೆದಿತ್ತು. ಈ ಗೇಮ್​ನಲ್ಲಿ ಸೋನುಗೆ ಒಂದು ಲೆಟರ್ ಸಿಕ್ಕಿದೆ. ಈ ಲೇಟರ್ ಮೂಲಕ ಅವರು ಒಬ್ಬರನ್ನು ನಾಮಿನೇಟ್ ಮಾಡಬೇಕಿತ್ತು. ‘ನಾನು ನಂದು ಅವರನ್ನು ನಾಮಿನೇಟ್ ಮಾಡುತ್ತೇನೆ. ಅವರು ಸಖತ್ ಆಗಿ ಆಡುತ್ತಾರೆ. ನನಗೆ ಟಫ್ ಕಾಂಪಿಟೇಟರ್ ಅನಿಸಿತು. ಈ ಕಾರಣಕ್ಕೆ ಅವರ ಹೆಸರನ್ನು ತೆಗೆದುಕೊಂಡೆ’ ಎಂದು ಕಾರಣ ನೀಡಿದರು.

ನಂತರ ಮತ್ತೊಂದು ಆಟದಲ್ಲಿ ಗೆದ್ದು ಜಶ್ವಂತ್ ಅವರು ಸೋನು ಅವರನ್ನು ನಾಮಿನೇಟ್ ಮಾಡಿದರು. ‘ಸೋನು ಅವರು ಎಲ್ಲರ ಜತೆ ಬೆರೆಯುತ್ತಿಲ್ಲ. ಇದರ ಜತೆಗೆ ಅವರು ನನ್ನ ಗರ್ಲ್​​ಫ್ರೆಂಡ್​​ ಅನ್ನು ನಾಮಿನೇಟ್ ಮಾಡಿದ್ದಾರೆ. ಈ ಕಾರಣಕ್ಕೆ ಅವರನ್ನು ನಾಮಿನೇಟ್ ಮಾಡುತ್ತಿದ್ದೇನೆ’ ಎಂದರು. ಈ ಮೂಲಕ ಅವರು ಸೇಡು ತೀರಿಸಿಕೊಂಡರು.

ಕಳೆದ ವಾರ ಸೋನು ಗೌಡ ನಾಮಿನೇಟ್ ಆಗಿದ್ದರು. ಅವರು ಮೊದಲ ವಾರವೇ ಮನೆಯಿಂದ ಹೊರ ಹೋಗುತ್ತಾರೆ ಎಂಬುದು ಎಲ್ಲರ ಲೆಕ್ಕಾಚಾರ ಆಗಿತ್ತು. ಆದರೆ, ಅವರು ಹೆಚ್ಚು ವೋಟ್ ಪಡೆದು ಬಚಾವ್ ಆದರು. ಈಗ ಅವರು ಮತ್ತೊಮ್ಮೆ ನಾಮಿನೇಟ್ ಆಗಿದ್ದಾರೆ. ಈ ಬಾರಿಗೆ ಅವರು ಅಗತ್ಯ ವೋಟ್ ಪಡೆದು ಎಲಿಮಿನೇಷನ್​ನಿಂದ ಪಾರು ಆಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಮಿಸ್ಟೇಕ್ ಮಾಡ್ಕೋಬೇಡ’: ‘ಬಿಗ್ ಬಾಸ್​’ ಮನೆಯಲ್ಲಿ ಜೋರಾಯ್ತು ರಾಕೇಶ್​-ಸ್ಫೂರ್ತಿ ಕುರಿತ ಗುಸುಗುಸು

ಸೋನು ಮಾತ್ರವಲ್ಲದೆ, ನಂದು, ಅಕ್ಷತಾ, ಸ್ಫೂರ್ತಿ ಗೌಡ, ಸಾನ್ಯಾ ಅಯ್ಯರ್, ಜಯಶ್ರೀ, ಸೋಮಣ್ಣ, ರಾಕೇಶ್​ ಅಡಿಗ, ಆರ್ಯವರ್ಧನ್ ಗುರೂಜಿ ಮೇಲೆ ನಾಮಿನೇಷನ್​ ತೂಗುಗತ್ತಿ ಇದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada