‘ಕಾಫಿ ನಾಡು ಚಂದು ಬಿಗ್ ಬಾಸ್‌ಗೆ ಹೋಗಬೇಕು’ ಅಭಿಯಾನ ಶುರು; ಸ್ವತಃ ಬೆಂಬಲ ನೀಡಿದ ವೈರಲ್ ಸಿಂಗರ್!

ಚಂದು ಅವರು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ತೆರಳುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಅವರು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಬೇಕು ಎಂಬುದು ಕೆಲವರ ಆಸೆ.

'ಕಾಫಿ ನಾಡು ಚಂದು ಬಿಗ್ ಬಾಸ್‌ಗೆ ಹೋಗಬೇಕು' ಅಭಿಯಾನ ಶುರು; ಸ್ವತಃ ಬೆಂಬಲ ನೀಡಿದ ವೈರಲ್ ಸಿಂಗರ್!
ಚಂದು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 12, 2022 | 5:53 PM

ಕಾಫಿ ನಾಡು ಚಂದು (Cofffe Nadu Chandu) ಅವರು ಸಖತ್ ಟ್ರೆಂಡ್​ನಲ್ಲಿದ್ದಾರೆ. ಫೇಸ್​ಬುಕ್​, ಇನ್​ಸ್ಟಾಗ್ರಾಮ್​, ವಾಟ್ಸಾಪ್ ಸ್ಟೇಟಸ್​ ಹೀಗೆ ಎಲ್ಲ ಕಡೆಗಳಲ್ಲೂ ಅವರದ್ದೇ ವಿಡಿಯೋ ರಾರಾಜಿಸುತ್ತಿದೆ. ‘ನಾನು ಶಿವಣ್ಣ..ಪುನೀತಣ್ಣ (Puneeth Rajkumar) ಅವರ ಅಭಿಮಾನಿ..’ ಎಂದು ಆರಂಭ ಆಗುವ ವಿಡಿಯೋ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಕಾಫಿ ನಾಡು ಚಂದು ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆಯಲಿದ್ದಾರೆ ಎಂಬ ಚರ್ಚೆ ಈ ಮೊದಲಿನಿಂದಲೂ ಇತ್ತು. ಆದರೆ, ಅದು ಸಾಧ್ಯವಾಗಿಲ್ಲ. ಈಗ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆಯಬೇಕು ಎಂಬ ಒತ್ತಾಯ ಜೋರಾಗಿದೆ. ಇದನ್ನು ಸ್ವತಃ ಕಾಫಿ ನಾಡು ಚಂದು ಅವರು ಬೆಂಬಲಿಸಿದ್ದಾರೆ.

ಕಾಫಿ ನಾಡು ಚಂದು ಅವರು ಚಿಕ್ಕಮಗಳೂರಿನವರು. ಅವರು ವೃತ್ತಿಯಲ್ಲಿ ಆಟೋ ಡ್ರೈವರ್. ಈ ಮಧ್ಯೆ ಅವರು ರೀಲ್ಸ್ ಮಾಡೋಕೆ ಆರಂಭಿಸಿದ್ದರು. ಶಿವರಾಜ್​ಕುಮಾರ್ ಹಾಗೂ ಪುನೀತ್ ಅಭಿಮಾನಿ ಆಗಿರುವ ಅವರು ಅದನ್ನು ಪ್ರತಿ ವಿಡಿಯೋದಲ್ಲಿ ಹೇಳುತ್ತಾರೆ. ಚಂದು ಅವರು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ತೆರಳುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಅವರು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಬೇಕು ಎಂಬುದು ಕೆಲವರ ಆಸೆ. ಇದಕ್ಕಾಗಿ ಆಂದೋಲನ ಶುರುವಾಗಿದೆ.

‘ಬಿಗ್ ಬಾಸ್ ಒಟಿಟಿಗೆ ವೈಲ್ಡ್ ಕಾರ್ಡ್ ಮೂಲಕ ಯಾರು ಎಂಟ್ರಿ ಪಡೆಯಬೇಕು’ ಎಂಬ ಪ್ರಶ್ನೆಯೊಂದಿಗೆ ಸ್ಥಳೀಯ ಮಾಧ್ಯಮವೊಂದು ವೀಕ್ಷಕರ ಎದುರು ಹೋಗಿತ್ತು. ಇದರಲ್ಲಿ ಬಹುತೇಕರು ಕಾಫಿ ನಾಡು ಚಂದು ಅವರ ಹೆಸರನ್ನು ಹೇಳಿದ್ದಾರೆ. ಈ ಮೂಲಕ ಅವರನ್ನು ಬೆಂಬಲಿಸಿದ್ದಾರೆ. ಈ ವಿಡಿಯೋವನ್ನು ಸ್ವತಃ ಚಂದು ಅವರು ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಈ ಆಂದೋಲನಕ್ಕೆ ತಮ್ಮ ಬೆಂಬಲವೂ ಇದೆ ಎಂಬುದನ್ನು ಹೇಳಿದ್ದಾರೆ.

ಇದನ್ನೂ ಓದಿ
Image
Bigg Boss OTT Kannada: ಚಂದುಗೆ ಇಲ್ಲ ಚಾನ್ಸ್​: ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು
Image
Coffee Nadu Chandu: ‘ಅನುಶ್ರೀ ಅಕ್ಕ.. ಅನುಶ್ರೀ ಅಕ್ಕ’ ಅಂತ ವಿಶೇಷ ಬೇಡಿಕೆ ಇಟ್ಟ ಕಾಫಿ ನಾಡು ಚಂದು; ಇದನ್ನು ಶಿವಣ್ಣ ಈಡೇರಿಸ್ತಾರಾ?
Image
ಕಾಫಿನಾಡು ಚಂದು ತನ್ನದೇ ಶೈಲಿಯಲ್ಲಿ ಸಿದ್ದರಾಯ್ಯನವರಿಗೆ ಹುಟ್ಟುಹಬ್ಬದ ಶುಭಾಷಯ ಹೇಳಿದರು!
Image
‘5 ಸಾವಿರ ಕರೆ ಬರ್ತಿದೆ, ದಿನಕ್ಕೊಂದು ನಂಬರ್ ಬದಲಿಸುತ್ತಿದ್ದೇನೆ’; ಕಾಫಿ ನಾಡು ಚಂದು

ಇದನ್ನೂ ಓದಿ: Bigg Boss OTT Kannada: ಚಂದುಗೆ ಇಲ್ಲ ಚಾನ್ಸ್​: ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು

‘ಬಿಗ್ ಬಾಸ್ ಒಟಿಟಿ’ಗೆ 16 ಸ್ಪರ್ಧಿಗಳು ಎಂಟ್ರಿ ಪಡೆದಿದ್ದಾರೆ. ಈ ಪೈಕಿ ಅನೇಕರು ಗಮನ ಸೆಳೆದಿದ್ದಾರೆ. ಕೇವಲ 42 ದಿನಗಳ ಕಾಲ ನಡೆಯುವ ಈ ಶೋನಲ್ಲಿ ಒಂದಷ್ಟು ಮಂದಿ ವಿನ್ನರ್ಸ್​ ಇರಲಿದ್ದಾರೆ. ವಿನ್ನರ್ಸ್​​ಗೆ ಅವಾರ್ಡ್ ಇರುವುದಿಲ್ಲ. ಬದಲಿಗೆ ಟಿವಿಯಲ್ಲಿ ಪ್ರಸಾರವಾಗುವ ಬಿಗ್​ ಬಾಸ್ ಮನೆಗೆ ಪ್ರವೇಶ ಇರುತ್ತದೆ. ಈ ಸಂದರ್ಭದಲ್ಲೂ ಕಾಫಿ ನಾಡು ಚಂದು ಅವರ ಎಂಟ್ರಿಗೆ ಅವಕಾಶ ಇದೆ. ಅವರು ದೊಡ್ಮನೆಗೆ ಬರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Published On - 5:26 pm, Fri, 12 August 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ