Bigg Boss OTT Kannada: ಚಂದುಗೆ ಇಲ್ಲ ಚಾನ್ಸ್: ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು
Coffee Nadu Chandu: ಶನಿವಾರ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಒಬ್ಬೊಬ್ಬರೇ ಸ್ಪರ್ಧಿಗಳನ್ನು ಬರ ಮಾಡಿಕೊಂಡರು. ಹೀಗೆ 16 ಸ್ಪರ್ಧಿಗಳು ಮನೆಗೆ ಎಂಟ್ರಿ ಕೊಟ್ಟರೂ ಕಾಫಿನಾಡು ಚಂದು ಮಾತ್ರ ಕಾಣಿಸಿಕೊಂಡಿಲ್ಲ.
ಬಿಗ್ ಬಾಸ್ ಕನ್ನಡ ಒಟಿಟಿ (Bigg Boss OTT Kannada) ಸೀಸನ್ 1 ಗೆ ಶನಿವಾರದಿಂದ ಶುರುವಾಗಿದೆ. ಇದರೊಂದಿಗೆ ಈ ಬಾರಿ ಬಿಗ್ ಬಾಸ್ನಲ್ಲಿ ಕಾಣಿಸಿಕೊಳ್ಳುವ ಸ್ಪರ್ಧಿಗಳು ಯಾರೆಲ್ಲಾ ಎಂಬ ಕುತೂಹಲಕ್ಕೆ ಕೂಡ ತೆರೆಬಿದ್ದಿದೆ. ಅಚ್ಚರಿ ಎಂಬಂತೆ ಒಟಿಟಿ ಬಿಗ್ ಬಾಸ್ನಲ್ಲಿ ರೀಲ್ಸ್ ರಾಣಿ ಸೋನು ಗೌಡ (Sonu Gowda) ಕಾಣಿಸಿಕೊಂಡಿದ್ದಾರೆ. ಆದರೆ 16 ಸ್ಪರ್ಧಿಗಳಲ್ಲಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಕಾಫಿನಾಡು ಚಂದು (Coffee Nadu Chandu ) ಕಾಣಿಸಿಕೊಳ್ಳದಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಸೋಷಿಯಲ್ ಮೀಡಿಯಾಗಳಲ್ಲಿ ಹಾಡು ಹಾಗೂ ಡ್ಯಾನ್ಸ್ ಮೂಲಕ ಎಲ್ಲರನ್ನು ರಂಜಿಸುತ್ತಿರುವ ಕಾಫಿನಾಡು ಚಂದು ಈ ಬಾರಿ ಬಿಗ್ ಬಾಸ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಅಲ್ಲದೆ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲೂ ಚಂದು ಹೆಸರು ಕೂಡ ರಾರಾಜಿಸಿತ್ತು. ಅತ್ತ ಕಡೆ ಅವಕಾಶ ನೀಡಿದರೆ ನಾನು ಸಹ ಬಿಗ್ ಬಾಸ್ಗೆ ಹೋಗುತ್ತೇನೆ ಎಂದು ಕಾಫಿನಾಡು ಚಂದು ಕೂಡ ಹೇಳಿಕೊಂಡಿದ್ದರು. ಹೀಗಾಗಿ ಚಿಕ್ಕಮಗಳೂರಿನ ಈ ‘ಅಸಾಮಾನ್ಯ’ ಪ್ರತಿಭೆ ಬಿಗ್ ಬಾಸ್ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.
ಆದರೆ ಶನಿವಾರ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಒಬ್ಬೊಬ್ಬರೇ ಸ್ಪರ್ಧಿಗಳನ್ನು ಬರ ಮಾಡಿಕೊಂಡರು. ಹೀಗೆ 16 ಸ್ಪರ್ಧಿಗಳು ಮನೆಗೆ ಎಂಟ್ರಿ ಕೊಟ್ಟರೂ ಕಾಫಿನಾಡು ಚಂದು ಮಾತ್ರ ಕಾಣಿಸಿಕೊಂಡಿಲ್ಲ. ಹೀಗಾಗಿಯೇ ಇದೀಗ ಕಾಫಿನಾಡು ಚಂದುವಿಗೆ ಯಾಕೆ ಅವಕಾಶ ನೀಡಲಾಗಿಲ್ಲ ಎಂಬ ಪ್ರಶ್ನೆಗಳನ್ನು ಹಲವು ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಮುಂದಿಡುತ್ತಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಅತ್ಯುತ್ತಮ ಮನರಂಜನೆ ನೀಡುತ್ತಿರುವ ಚಂದು ಬಿಗ್ ಬಾಸ್ಗೆ ಸೂಕ್ತ ವ್ಯಕ್ತಿ. ಎಲ್ಲರೂ ಮನರಂಜನೆಯನ್ನು ಬಯಸಿ ಬಿಗ್ ಬಾಸ್ ನೋಡುತ್ತಾರೆ. ಇದೀಗ ಆಯ್ಕೆಯಾಗಿರುವ ಸ್ಪರ್ಧಿಗಳಿಗಿಂತ ಚಂದು ಅತ್ಯುತ್ತಮ ಎಂಟರ್ಟೈನರ್. ಹೀಗಾಗಿ ಕಾಫಿನಾಡು ಚಂದುಗೆ ಅವಕಾಶ ನೀಡಬೇಕಿತ್ತು ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇನ್ನು ಬಾರಿ ಬಿಗ್ ಬಾಸ್ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಪ್ರಸಾರವಾಗಲಿದ್ದು, ಇದರ ಬಳಿಕ ಬಿಗ್ ಬಾಸ್ ಸೀಸನ್ 9 ಶುರುವಾಗಲಿದೆ. ಹೀಗಾಗಿ ಟಿವಿ ಚಾನೆಲ್ನಲ್ಲಿ ಪ್ರಸಾರವಾಗಲಿರುವ ಬಿಗ್ ಬಾಸ್ನಲ್ಲಿ ಕಾಫಿನಾಡು ಚಂದು ಅವಕಾಶ ಪಡೆಯಲಿದ್ದಾರಾ ಕಾದು ನೋಡಬೇಕಿದೆ.
ಒಟ್ಟಿನಲ್ಲಿ ಚಂದುವಿನ ಟ್ರೆಂಡಿಂಗ್ ಹಾಡನ್ನು ಬಿಗ್ ಬಾಸ್ನಲ್ಲಿ ನಿರೀಕ್ಷಿಸಿದ್ದ ಅಭಿಮಾನಿಗಳು ಇದೀಗ ಚಂದು ಅಣ್ಣ…ಚಂದು ಅಣ್ಣ ಯಾವಾಗ್ ಬರ್ತೀರ…ಬಿಗ್ ಬಾಸ್ಗೆ ಯಾವಾಗ್ ಬರ್ತೀರಾ ಎಂದು ಹಾಡುತ್ತಿರುವುದಂತು ಸುಳ್ಳಲ್ಲ.
Published On - 1:32 pm, Sun, 7 August 22