AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coffee Nadu Chandu: ‘ಅನುಶ್ರೀ ಅಕ್ಕ.. ಅನುಶ್ರೀ ಅಕ್ಕ’ ಅಂತ ವಿಶೇಷ ಬೇಡಿಕೆ ಇಟ್ಟ ಕಾಫಿ ನಾಡು ಚಂದು; ಇದನ್ನು ಶಿವಣ್ಣ ಈಡೇರಿಸ್ತಾರಾ?

Coffee Nadu Chandu Viral Video: ಕಾಫಿ ನಾಡು ಚಂದು ಮನವಿ ಮಾಡಿಕೊಂಡಿರುವ ರೀಲ್ಸ್​ ವೈರಲ್​ ಆಗಿದೆ. ಅವರಿಗೆ ಸಹಾಯ ಮಾಡಿ ಎಂದು ಅನೇಕರು ನಿರೂಪಕಿ ಅನುಶ್ರೀಗೆ ಶಿಫಾರಸು ಮಾಡಿದ್ದಾರೆ.

Coffee Nadu Chandu: ‘ಅನುಶ್ರೀ ಅಕ್ಕ.. ಅನುಶ್ರೀ ಅಕ್ಕ’ ಅಂತ ವಿಶೇಷ ಬೇಡಿಕೆ ಇಟ್ಟ ಕಾಫಿ ನಾಡು ಚಂದು; ಇದನ್ನು ಶಿವಣ್ಣ ಈಡೇರಿಸ್ತಾರಾ?
ಕಾಫಿ ನಾಡು ಚಂದು, ಶಿವರಾಜ್​ಕುಮಾರ್​, ನಿರೂಪಕಿ ಅನುಶ್ರೀ
TV9 Web
| Updated By: ಮದನ್​ ಕುಮಾರ್​|

Updated on:Aug 05, 2022 | 8:22 AM

Share

ಸೋಶಿಯಲ್​ ಮೀಡಿಯಾದಲ್ಲಿ ಕಾಫಿ ನಾಡು ಚಂದು (Coffee Nadu Chandu) ಸಿಕ್ಕಾಪಟ್ಟೆ ಫೇಮಸ್​ ಆಗಿದ್ದಾರೆ. ‘ನಾನು ಶಿವಣ್ಣ, ಪುನೀತಣ್ಣ ಅಭಿಮಾನಿ..’ ಎನ್ನುತ್ತಲೇ ಅವರು ಲಕ್ಷಾಂತರ ಜನರಿಗೆ ಇಷ್ಟ ಆಗಿದ್ದಾರೆ. ಅವರು ಹೇಳುವ ಇನ್​ಸ್ಟಂಟ್​ ಹಾಡುಗಳು ಸಖತ್​ ವೈರಲ್​ ಆಗಿವೆ. ಚಂದು ಅವರು ಹುಟ್ಟುಹಬ್ಬದ ಶುಭಾಶಯ ಕೋರುವ ಶೈಲಿ ಭರ್ಜರಿ ಟ್ರೆಂಡ್​​ ಆಗಿದೆ. ಸೆಲೆಬ್ರಿಟಿಗಳ ವಲಯದಲ್ಲೂ ಅವರ ಹೆಸರು ಕೇಳಿಬರುತ್ತಿದೆ. 3 ಲಕ್ಷಕ್ಕೂ ಅಧಿಕ ಜನರು ಚಂದು ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಫಾಲೋ ಮಾಡುತ್ತಿದ್ದಾರೆ. ಈಗ ಅವರು ನಿರೂಪಕಿ ಅನುಶ್ರೀ (Anchor Anushree) ಅವರಿಗೆ ಒಂದು ವಿಶೇಷ ಮನವಿ ಸಲ್ಲಿಸಿದ್ದಾರೆ. ಅದು ಕೂಡ ತಮ್ಮದೇ ಶೈಲಿಯಲ್ಲಿ ಅನ್ನೋದು ವಿಶೇಷ. ‘ದಯವಿಟ್ಟು ಶಿವಣ್ಣ ಅವರನ್ನು ಭೇಟಿ ಮಾಡಿಸಿ..’ ಎಂದು ಚಂದು ಮನವಿ ಮಾಡಿಕೊಂಡಿದ್ದಾರೆ. ಶಿವರಾಜ್​ಕುಮಾರ್ (Shivarajkumar)​ ಅವರನ್ನು ಭೇಟಿ ಆಗಬೇಕು ಎಂಬುದು ಅವರ ಬಹುದಿನಗಳ ಕನಸು.

‘ಜೀ ಕನ್ನಡದಲ್ಲಿ ಆ್ಯಂಕರಿಂಗ್​ ಮಾಡುವ ಅನುಶ್ರೀ ಅಕ್ಕ.. ನನಗೆ ಶಿವಣ್ಣ ಭೇಟಿ ಮಾಡಿಸಿ ಅನುಶ್ರೀ ಅಕ್ಕ.. ಓಹೋ ಅನುಶ್ರೀ ಅಕ್ಕ.. ಆಹಾ ಅನುಶ್ರೀ ಅಕ್ಕ.. ನಾನು ಶಿವಣ್ಣ ಅವರನ್ನು ನೋಡಲೇ ಬೇಕು ಅಕ್ಕ..’ ಎಂದು ತಮ್ಮದೇ ಶೈಲಿಯಲ್ಲಿ ಕಾಫಿ ನಾಡು ಚಂದು ಅವರು ಮನವಿ ಮಾಡಿಕೊಂಡಿದ್ದಾರೆ. ಈ ವಿಡಿಯೋ ಮೂರೂವರೆ ಲಕ್ಷಕ್ಕೂ ಅಧಿಕ ವೀವ್ಸ್​ ಪಡೆದುಕೊಂಡಿದೆ. ಸಾವಿರಾರು ಜನರು ಕಮೆಂಟ್​ ಮಾಡಿದ್ದಾರೆ. ಚಂದುಗೆ ಸಹಾಯ ಮಾಡಿ ಎಂದು ಅನೇಕರು ಅನುಶ್ರೀಗೆ ಶಿಫಾರಸು ಮಾಡಿದ್ದಾರೆ.

ಇದನ್ನೂ ಓದಿ
Image
ಕಾಫಿನಾಡು ಚಂದು ತನ್ನದೇ ಶೈಲಿಯಲ್ಲಿ ಸಿದ್ದರಾಯ್ಯನವರಿಗೆ ಹುಟ್ಟುಹಬ್ಬದ ಶುಭಾಷಯ ಹೇಳಿದರು!
Image
‘5 ಸಾವಿರ ಕರೆ ಬರ್ತಿದೆ, ದಿನಕ್ಕೊಂದು ನಂಬರ್ ಬದಲಿಸುತ್ತಿದ್ದೇನೆ’; ಕಾಫಿ ನಾಡು ಚಂದು
Image
ಕಾಫಿ ನಾಡು ಚಂದು ಹೇಳಿದ ಬರ್ತ್​ಡೇ ವಿಶ್​​ಗೆ ಅಮೃತಾ ಅಯ್ಯಂಗಾರ್ ರಿಯಾಕ್ಷನ್ ಹೇಗಿತ್ತು? ಇಲ್ಲಿದೆ ವಿಡಿಯೋ
Image
Coffee Nadu Chandu: ‘ಕಾಫಿ ನಾಡು ಚಂದು ಬಿಗ್​ ಬಾಸ್​ಗೆ ಬರಲಿ’: ಪರಮೇಶ್ವರ್​ ಗುಂಡ್ಕಲ್​ ಬಳಿ ಬೇಡಿಕೆ ಇಟ್ಟ ಫ್ಯಾನ್ಸ್​

ಇಷ್ಟೇ ಅಲ್ಲ, ಕೆಲವು ಶಾಲೆಯ ಮಕ್ಕಳ ಜೊತೆಯೂ ಚಂದು ಅವರು ವಿಡಿಯೋ ಮಾಡಿದ್ದಾರೆ. ‘ನಿಮ್ಮನ್ನು ನೋಡಬೇಕು ಶಿವಣ್ಣ. ಯಾವಾಗ ಸಿಕ್ತೀರಾ?’ ಎಂದು ಮಕ್ಕಳ ಜೊತೆ ಹಾಡು ಹೇಳುವ ಮೂಲಕ ಚಂದು ಅವರು ಶಿವರಾಜ್​ಕುಮಾರ್ ಅವರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ದಿನದಿಂದ ದಿನಕ್ಕೆ ಅವರ ಫಾಲೋವರ್ಸ್​ ಸಂಖ್ಯೆ ಹೆಚ್ಚುತ್ತಲೇ ಇದೆ.

ಚಿಕ್ಕಮಗಳೂರು ಮೂಲದ ಚಂದು ಅವರು ವೃತ್ತಿಯಲ್ಲಿ ಆಟೋ ಡ್ರೈವರ್​ ಆಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅನೇಕ ವಿಡಿಯೋಗಳನ್ನು ಹಂಚಿಕೊಂಡು ಅವರು ಫೇಮಸ್​ ಆಗಿದ್ದಾರೆ. ತಮ್ಮದೇ ಆದ ಶೈಲಿಯಲ್ಲಿ ಹಲವರಿಗೆ ಬರ್ತ್​ಡೇ ವಿಶ್​ ಮಾಡುವ ಮೂಲಕ ಅವರು ನೋಡುಗರಲ್ಲಿ ನಗು ಉಕ್ಕಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ವಿಡಿಯೋಗಳು ವೈರಲ್​ ಆಗಿವೆ. ಅವರಿಗೆ ಬಿಗ್​ ಬಾಸ್​ ಶೋನಲ್ಲಿ ಅವಕಾಶ ಸಿಗಲಿ ಎಂದು ಕೂಡ ಅನೇಕರು ಆಶಿಸಿದ್ದಾರೆ.

Published On - 8:22 am, Fri, 5 August 22

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ