AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಫಿ ನಾಡು ಚಂದು ಹೇಳಿದ ಬರ್ತ್​ಡೇ ವಿಶ್​​ಗೆ ಅಮೃತಾ ಅಯ್ಯಂಗಾರ್ ರಿಯಾಕ್ಷನ್ ಹೇಗಿತ್ತು? ಇಲ್ಲಿದೆ ವಿಡಿಯೋ

ಕಾಫಿ ನಾಡು ಚಂದು ಅವರು ಅನೇಕ ಸೆಲೆಬ್ರಿಟಿಗಳಿಗೆ ಬರ್ತ್​ಡೇ ವಿಶ್ ಮಾಡಿದ್ದಾರೆ. ಶಿವರಾಜ್​ಕುಮಾರ್ ಹಾಗೂ ಪುನೀತ್ ಅಭಿಮಾನಿ ಆಗಿರುವ ಅವರು, ಪ್ರತಿ ವಿಡಿಯೋ ಆರಂಭದಲ್ಲಿ ಈ ಮಾತನ್ನು ತಪ್ಪದೇ ಹೇಳುತ್ತಾರೆ. ಈ ಕಾರಣಕ್ಕೂ ಅವರು ಅನೇಕರಿಗೆ ಇಷ್ಟವಾಗಿದ್ದಾರೆ.

ಕಾಫಿ ನಾಡು ಚಂದು ಹೇಳಿದ ಬರ್ತ್​ಡೇ ವಿಶ್​​ಗೆ ಅಮೃತಾ ಅಯ್ಯಂಗಾರ್ ರಿಯಾಕ್ಷನ್ ಹೇಗಿತ್ತು? ಇಲ್ಲಿದೆ ವಿಡಿಯೋ
ಚಂದು-ಅಮೃತಾ
TV9 Web
| Edited By: |

Updated on:Jul 27, 2022 | 6:31 PM

Share

ಕಾಫಿ ನಾಡು ಚಂದು (Coffe Nadu Chandu) ಸದ್ಯ ಸಖತ್ ಟ್ರೆಂಡ್​ನಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ () ಅವರದ್ದೇ ಚರ್ಚೆ ಆಗುತ್ತಿದೆ. ಚಿಕ್ಕಮಗಳೂರಿನ ಈ ಯುವಕ ವೃತ್ತಿಯಲ್ಲಿ ಆಟೋ ಡ್ರೈವರ್​. ಸಮಯ ಸಿಕ್ಕಾಗ ರೀಲ್ಸ್ ಮಾಡುತ್ತಾರೆ. ಬರ್ತ್​ಡೇ ವಿಶ್ ಮಾಡುವುದರಲ್ಲಿ ಅವರು ಎತ್ತಿದ ಕೈ. ಸೆಲೆಬ್ರಿಟಿಗಳು ಹಾಗೂ ಜನಸಾಮಾನ್ಯರಿಗೆ ತಮ್ಮದೇ ಶೈಲಿಯಲ್ಲಿ ಹುಟ್ಟುಹಬ್ಬದ ವಿಶ್ ಮಾಡುತ್ತಾರೆ. ಅವರ ಬಳಿ ಬರ್ತ್​ಡೇ ವಿಶ್ ಹೇಳಿಸಿಕೊಳ್ಳಬೇಕು ಎಂದು ಅನೇಕರು ಪ್ರಯತ್ನಿಸಿದ್ದಿದೆ. ಜುಲೈ 26ರಂದು ಅಮೃತಾ ಅಯ್ಯಂಗಾರ್ (Amrutha Iyengar) ತಮ್ಮ ಬರ್ತ್​ಡೇ ಆಚರಿಸಿಕೊಂಡಿದರು. ಅವರ ಬರ್ತ್​​ಡೇಗೆ ಕಾಫಿ ನಾಡು ಚಂದು ಅವರು ವಿಶ್ ಮಾಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಅಮೃತಾ ಕೂಡ ಈ ವಿಡಿಯೋ ನೋಡಿದ್ದಾರೆ.

ಕಾಫಿ ನಾಡು ಚಂದು ಅವರು ಅನೇಕ ಸೆಲೆಬ್ರಿಟಿಗಳಿಗೆ ಬರ್ತ್​ಡೇ ವಿಶ್ ಮಾಡಿದ್ದಾರೆ. ಶಿವರಾಜ್​ಕುಮಾರ್ ಹಾಗೂ ಪುನೀತ್ ಅಭಿಮಾನಿ ಆಗಿರುವ ಅವರು, ಪ್ರತಿ ವಿಡಿಯೋ ಆರಂಭದಲ್ಲಿ ಈ ಮಾತನ್ನು ತಪ್ಪದೇ ಹೇಳುತ್ತಾರೆ. ಈ ಕಾರಣಕ್ಕೂ ಅವರು ಅನೇಕರಿಗೆ ಇಷ್ಟವಾಗಿದ್ದಾರೆ. ಇನ್ನೂ ಕೆಲವರು ಇವರನ್ನು ಟ್ರೋಲ್ ಮಾಡುತ್ತಿದ್ದಾರೆ. ಟ್ರೋಲ್​ ಬಗ್ಗೆ ಚಂದು ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ಇದನ್ನೂ ಓದಿ
Image
BBK 9: ಈ ಬಾರಿ ಕನ್ನಡ ಬಿಗ್​ ಬಾಸ್​ನಲ್ಲಿ ಯಾರೆಲ್ಲ ಇರಬೇಕು? ಈಗಲೇ ಶುರುವಾಗಿದೆ ಚರ್ಚೆ
Image
BBK 9: ‘ಕನ್ನಡ ಬಿಗ್​ ಬಾಸ್​’ 9ನೇ ಸೀಸನ್​ ಕೆಲಸ ಶುರು; ಬಿಗ್​ ಅಪ್​ಡೇಟ್​ ನೀಡಿದ ಪರಮೇಶ್ವರ್​ ಗುಂಡ್ಕಲ್​
Image
‘ಬಿಗ್​ ಬಾಸ್​’ನಲ್ಲಿ ಮದುವೆ ಆದ ಜೋಡಿಗೆ ಚಾನೆಲ್​ನವರಿಂದ ಸಿಕ್ಕಿತ್ತು 50 ಲಕ್ಷ ರೂ.; ಎರಡೇ ತಿಂಗಳಿಗೆ ಡಿವೋರ್ಸ್​
Image
ಬಿಗ್​ ಬಾಸ್​ ಗೆದ್ದವರ ಹಿಂದೆ ಲಾಬಿ ಇದೆಯೋ ಇಲ್ಲವೋ? ನೇರವಾಗಿ ಮಾತಾಡಿದ ಸ್ಪರ್ಧಿ ಕರಣ್​ ಕುಂದ್ರಾ

ಅಮೃತಾ ಅಯ್ಯಂಗಾರ್​ಗೆ ‘ಹ್ಯಾಪಿ ಬರ್ತ್​​ಡೇ’ ಎಂದು ಹಾಡು ಹೇಳುತ್ತಾ ವಿಶ್ ಮಾಡಿದ್ದಾರೆ ಚಂದು. ಈ ವಿಡಿಯೋವನ್ನು ಚಂದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋ ನೋಡಿ ಅಮೃತಾ ಅಯ್ಯಂಗಾರ್ ಸಾಕಷ್ಟು ನಕ್ಕಿದ್ದಾರೆ. ಈ ವಿಡಿಯೋಗಳನ್ನು ಟ್ರೋಲ್ ಪೇಜ್​ಗಳಲ್ಲಿ ವೈರಲ್ ಮಾಡಲಾಗುತ್ತಿದೆ.

ಇದನ್ನೂ ಓದಿ:  ‘ಕಾಫಿ ನಾಡು ಚಂದು ಬಿಗ್​ ಬಾಸ್​ಗೆ ಬರಲಿ’: ಪರಮೇಶ್ವರ್​ ಗುಂಡ್ಕಲ್​ ಬಳಿ ಬೇಡಿಕೆ ಇಟ್ಟ ಫ್ಯಾನ್ಸ್​

ಶೀಘ್ರವೇ ‘ಬಿಗ್ ಬಾಸ್ ಒಟಿಟಿ’ ಆರಂಭ ಆಗುತ್ತಿದೆ. ಇದಕ್ಕೆ ಕಾಫಿ ನಾಡು ಚಂದು ಕೂಡ ಬರಲಿ ಎಂಬುದು ಅನೇಕರ ಆಗ್ರಹ. ಕಳೆದ ಸೀಸನ್​ಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆದ ಅನೇಕರನ್ನು ಬಿಗ್ ಬಾಸ್​ಗೆ ಕರೆಸಲಾಗಿತ್ತು. ಅದೇ ರೀತಿ ಕಾಫಿ ನಾಡು ಚಂದುಗೆ ಅವಕಾಶ ನೀಡಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಗ್ರಹಿಸುತ್ತಿದ್ದಾರೆ.

Published On - 6:30 pm, Wed, 27 July 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್