‘ಪ್ಲೀಸ್ ದಯವಿಟ್ಟು ಬಿಟ್ಟುಬಿಡಿ’; ಮನೆಗೆ ಬಂದ ಅತಿಥಿ ಕಂಡು ಕಿರುಚಾಡಿದ ಸಾನ್ಯಾ ಅಯ್ಯರ್

ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಇಬ್ಬರೂ ವಾಶ್​ರೂಂನಲ್ಲಿದ್ದರು. ಈ ವೇಳೆ ಅಲ್ಲಿಗೆ ಜಿರಳೆ ಬಂದಿದೆ. ಜಿರಳೆಯನ್ನು ನೋಡಿ ಸಾನ್ಯಾ ಅಯ್ಯರ್ ಕಿರುಚಾಡಿದ್ದಾರೆ. ‘

‘ಪ್ಲೀಸ್ ದಯವಿಟ್ಟು ಬಿಟ್ಟುಬಿಡಿ’; ಮನೆಗೆ ಬಂದ ಅತಿಥಿ ಕಂಡು ಕಿರುಚಾಡಿದ ಸಾನ್ಯಾ ಅಯ್ಯರ್
ಸಾನ್ಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 12, 2022 | 9:40 PM

‘ಬಿಗ್ ಬಾಸ್ ಒಟಿಟಿ’ (Bigg Boss OTT) ಮನೆಯಲ್ಲಿ 16 ಸ್ಪರ್ಧಿಗಳ ನಡುವೆ ಫೈಟ್ ನಡೆಯುತ್ತಿದೆ. ವೂಟ್ ಆ್ಯಪ್​ನಲ್ಲಿ ದಿನದ 24 ಗಂಟೆಯೂ ಈ ಶೋ ಪ್ರಸಾರ ಕಾಣುತ್ತಿದೆ. ಮನೆಯಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಮನೆಯಲ್ಲಿ ಪ್ರೀತಿ-ಪ್ರೇಮದ ವಿಚಾರಗಳ ಬಗ್ಗೆಯೂ ಹೊಗೆ ಆಡುತ್ತಿವೆ. ಎಲ್ಲಾ ಸ್ಪರ್ಧಿಗಳು ವೀಕ್ಷಕರಿಗೆ ಎಂಟರ್​​ಟೇನ್​ಮೆಂಟ್ ನೀಡಲು ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ಮನೆಗೆ ಎಂಟ್ರಿ ಕೊಟ್ಟ ಅತಿಥಿಯ ಕಂಡು ಸಾನ್ಯಾ ಅಯ್ಯರ್ (Sanya Iyer) ದೊಡ್ಡದಾಗಿ ಕಿರುಚಾಡಿದ್ದಾರೆ. ಸಾನ್ಯಾಗೆ ರೂಪೇಶ್ ಶೆಟ್ಟಿ ಅವರು ಮತ್ತಷ್ಟು ಭಯ ಬೀಳಿಸಿದ್ದಾರೆ. ಶುಕ್ರವಾರ (ಆಗಸ್ಟ್ 12) ಎಪಿಸೋಡ್​ನಲ್ಲಿ ಈ ವಿಚಾರ ಹೈಲೈಟ್ ಆಗಿದೆ.

ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಇಬ್ಬರೂ ವಾಶ್​ರೂಂನಲ್ಲಿದ್ದರು. ಈ ವೇಳೆ ಅಲ್ಲಿಗೆ ಜಿರಳೆ ಬಂದಿದೆ. ಜಿರಳೆಯನ್ನು ನೋಡಿ ಸಾನ್ಯಾ ಅಯ್ಯರ್ ಕಿರುಚಾಡಿದ್ದಾರೆ. ‘ಇದನ್ನು ಯಾರಾದರೂ ಸಾಯಿಸಿ’ ಎಂದು ಕಿರುಚಾಡಿದರು. ಈ ವೇಳೆಗೆ ಅಲ್ಲಿಗೆ ರೂಪೇಶ್ ಶೆಟ್ಟಿ ಎಂಟ್ರಿ ಆಗಿದೆ. ಅವರು ಸಾನ್ಯಾ ಅವರನ್ನು ಕಿಚಾಯಿಸಿದ್ದಾರೆ.

ಜಿರಳೆಯನ್ನು ಕೈಯಲ್ಲಿ ಇಟ್ಟುಕೊಂಡ ರೂಪೇಶ್ ಅವರು ಅದನ್ನು ಸಾನ್ಯಾಗೆ ತೋರಿಸಿದರು. ಇದನ್ನು ನೋಡಿ ಸಾನ್ಯಾ ಆತಂಕಗೊಂಡರು. ‘ನಾನು ಹೇಳಿದಂತೆ ಕೇಳ್ತೀನಿ ಎಂದು ಹೇಳಿ. ಆಮೇಲೆ ಜಿರಳೆಯನ್ನು ಎಸಿತೀನಿ’ ಎಂದರು. ‘ಪ್ಲೀಸ್ ದಯವಿಟ್ಟು ಬಿಟ್ಟುಬಿಡಿ. ನೀವು ಹೇಳಿದಂತೆ ಕೇಳುತ್ತೇನೆ’ ಎಂದರು ಸಾನ್ಯಾ. ನಂತರ ಇಬ್ಬರ ನಡುವೆ ಮಾತುಕತೆ ನಡೆದೇ ಇತ್ತು.

ಇದನ್ನೂ ಓದಿ
Image
Bigg Boss OTT Kannada: ನಂಗೆ ಮೂಡ್ ಆಫ್ ಆಗಲ್ಲ: ಯಾವಾಗ್ಲೂ ಮೂಡ್​ನಲ್ಲಿರುತ್ತೇನೆ ಎಂದ ಸೋನು ಗೌಡ
Image
‘ಅಟ್ಲೀಸ್ಟ್​​ ಇಷ್ಟ ಅಂತಾದ್ರೂ ಹೇಳು’; ಸ್ಫೂರ್ತಿಗೆ ನೇರವಾಗಿ ಹೇಳಿದ ರಾಕೇಶ್
Image
‘ನಾನು ತಳ್ಳಿದ್ರೆ 25 ಅಡಿ ದೂರ ಹೋಗಿ ಬೀಳ್ತೀಯಾ’; ಆವಾಜ್ ಹಾಕಲು ಬಂದ ಉದಯ್​ಗೆ ಗುರೂಜಿ ಎಚ್ಚರಿಕೆ
Image
Sonu Srinivas Gowda: ಸೋನು ಶ್ರೀನಿವಾಸ್​ ಗೌಡ ಫೋನ್​ ನಂಬರ್​ ಏನು? ಅದ್ರಲ್ಲೂ ಚಾಲಕಿತನ ತೋರಿದ ರೀಲ್ಸ್​ ಬೆಡಗಿ

ಸಾನ್ಯಾ ಹಾಗೂ ರೂಪೇಶ್ ನಡುವೆ ಏನೋ ನಡೆಯುತ್ತಿದೆ ಎಂಬ ಚರ್ಚೆ ಇದೆ. ‘ನಿಮ್ಮಿಬ್ಬರ ಜೋಡಿ ಚೆನ್ನಾಗಿ ಕಾಣುತ್ತದೆ’ ಎಂದು ಸೋಮಣ್ಣ ಹಾಗೂ ಜಶ್ವಂತ್ ಅವರು ಸಾನ್ಯಾ ಹಾಗೂ ರೂಪೇಶ್​ಗೆ ಹೇಳಿದ್ದರು. ‘ನಾವಿಬ್ಬರೂ ಒಳ್ಳೆಯ ಗೆಳೆಯರಷ್ಟೇ. ನಮ್ಮಿಬ್ಬರ ನಡುವೆ ಮತ್ತೇನು ಇಲ್ಲ’ ಎಂದು ರೂಪೇಶ್​ ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: Roopesh Shetty: ಬಿಗ್ ​ಬಾಸ್ ಮನೆಗೆ ಎಂಟ್ರಿಕೊಟ್ಟ ಕರಾವಳಿಯ ಸೂಪರ್ ಸ್ಟಾರ್: ಯಾರು ಗೊತ್ತಾ ಈ ರೂಪೇಶ್ ಶೆಟ್ಟಿ?

ಸೋನು ಗೌಡ, ಆರ್ಯವರ್ಧನ್ ಗುರೂಜಿ ಮೊದಲಾದವರ ಮೇಲೆ ಎಲಿಮಿನೇಷನ್ ತೂಗುಗತ್ತಿ ತೂಗುತ್ತಿದೆ. ಈ ಪೈಕಿ ಒಬ್ಬರು ಮನೆಯಿಂದ ಎಲಿಮಿನೇಟ್​ ಆಗುವುದು ಪಕ್ಕಾ. ಅದು ಯಾರು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. 42 ದಿನಗಳ ಕಾಲ ‘ಬಿಗ್ ಬಾಸ್ ಒಟಿಟಿ’ ಸೀಸನ್ ನಡೆಯಲಿದೆ. ನಂತರ ಬಿಗ್ ಬಾಸ್ ಟಿವಿಯಲ್ಲಿ ಪ್ರಸಾರ ಕಾಣಲಿದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ