Sonu Srinivas Gowda: ‘ಕ್ಯಾಮೆರಾ ಕಂಡ್ರೆ ನಾನು ಮೊದಲು ಪೋಸ್ ಕೊಡೋದು ಹಿಂಗೆ’: ಸೋನು ಶ್ರೀನಿವಾಸ್ ಗೌಡ
Bigg Boss Kannada OTT: ಸೋನು ಶ್ರೀನಿವಾಸ್ ಗೌಡ ಏನೇ ಮಾಡಿದರೂ ಅದು ಚರ್ಚೆಗೆ ಕಾರಣ ಆಗುತ್ತಿದೆ. ಅವರ ಪ್ರತಿ ನಡೆ ಕೂಡ ಬಿಗ್ ಬಾಸ್ ಮನೆಯಲ್ಲಿ ಹೈಲೈಟ್ ಆಗುತ್ತಿದೆ.
ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವ ಸ್ಪರ್ಧಿಗಳ ಪೈಕಿ ಅತಿ ಹೆಚ್ಚು ಚರ್ಚೆಗೆ ಒಳಗಾಗಿರುವುದು ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಎಂದರೆ ತಪ್ಪಿಲ್ಲ. ಖಾಸಗಿ ವಿಡಿಯೋ ಲೀಕ್ ಆದ ಕಾರಣಕ್ಕೆ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಈಗ ಅವರು ‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಶೋನಲ್ಲಿ ಅವರು ಸ್ಪರ್ಧಿಸುತ್ತಿದ್ದಾರೆ. ಯಾವುದೇ ಟಾಸ್ಕ್ ಇಲ್ಲದ ಸಮಯದಲ್ಲಿ ಕ್ಯಾಮೆರಾಗೆ ಪೋಸ್ ನೀಡುವುದು ಹೇಗೆ ಎಂದು ಸೋನು ಶ್ರೀನಿವಾಸ್ ಗೌಡ, ಕಿರಣ್ ಯೋಗೇಶ್ವರ್ ಹಾಗೂ ಜಯಶ್ರೀ ಆರಾಧ್ಯ ರಿಹರ್ಸಲ್ ಮಾಡಿ ತೋರಿಸಿದ್ದಾರೆ. ‘ನಾನು ಮೊದಲು ಪೋಸ್ ನೀಡುವುದು ಹೀಗೆ’ ಎಂದು ಸೋನು ಶ್ರೀನಿವಾಸ್ ಗೌಡ ಅವರು ತಮ್ಮ ಫೇವರಿಟ್ ಪೋಸ್ ಬಗ್ಗೆ ಮಾತಾಡಿದ್ದಾರೆ. ‘ವೂಟ್ ಸೆಲೆಕ್ಟ್’ (Voot Select) ಮೂಲಕ ಈ ಶೋ ಪ್ರಸಾರ ಆಗುತ್ತಿದೆ.
Latest Videos