ಜನ್ಮ ನೀಡಿದ ಈ ತಾಯಿ ತನ್ನ ಕಂದನನ್ನು ಹಾವಿನಿಂದ ರಕ್ಷಿಸಿ ಮರುಜನ್ಮ ನೀಡಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ!
ಅಷ್ಟರಲ್ಲಿ ಮಗುವಿನ ತಾಯಿ ಹಾವು ಮುನ್ನುಗ್ಗುತ್ತಿರುವುದನ್ನು ಮತ್ತು ತಮ್ಮ ಮಗ ಭೀತಿಯಿಂದ ಹಾವಿನತ್ತಲೇ ಬರುತ್ತಿರುವುದನ್ನು ಕಂಡು ಕೂಡಲೇ ಮೆಟ್ಟಲಿನಿಂದ ಹಾರಿ ಅವನನ್ನು ತಮ್ಮತ್ತ ಎಳೆದು ಎತ್ತಿಕೊಂಡು ಬಿಡುತ್ತಾರೆ! ಅವರ ಸಮಯ ಪ್ರಜ್ಞೆ ಮತ್ತು ಧೈರ್ಯದಿಂದ ಮಗುವಿನ ಪ್ರಾಣ ಉಳಿಯುತ್ತದೆ.
ಮಂಡ್ಯ: ಜನ್ಮ ನೀಡಿದಾಕೆಯೇ ಜೀವ ಉಳಿಸಿ ಮರುಜನ್ಮ ನೀಡಿದಳು! ಹೌದು ಮಾರಾಯ್ರೇ, ನಾವು ಹೇಳಿತ್ತಿರೋದು ಮಂಡ್ಯ ನಗರದ ಈ ಮಹಾತಾಯಿಯ ಬಗ್ಗೆ. ಘಟನೆ ನಡೆದಿರೋದು ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿರುವ ಡಾ ವಿಷ್ಣುಪ್ರಸಾದ್ (Dr Vishnuprasad) ಅವರ ಮನೆಯ ಮುಂಭಾಗದಲ್ಲಿ. ಎದುರು ಮನೆಯವರು ತಮ್ಮ ಮನೆ ಮುಂದೆ ಅಳವಡಿಸಿರುವ ಸಿಸಿಟಿವಿಯಲ್ಲಿ (CCTV) ಈ ಭಯಾನಕ ದೃಶ್ಯ ಸೆರೆಯಾಗಿದೆ.
ವೃತ್ತಿಯಲ್ಲಿ ವೈದ್ಯರಾಗಿರುವ ವಿಷ್ಣು ಅವರ ಪುಟ್ಟ ಮಗ ಶಾಲೆಗೆ ಹೋಗಲು ತನ್ನ ತಾಯಿಯೊಂದಿಗೆ ಹೊರಬಂದಾಗ ಅವರ ಮನೆಯ ಮೆಟ್ಟಿಲಿನ ಆಂಚು ಸವರಿಕೊಂಡು ಒಂದು ದೊಡ್ಡ ಗಾತ್ರದ ನಾಗರಹಾವು (cobra) ತೆವಳಿಕೊಂಡು ಸಾಗುತ್ತಿದೆ. ಬಾಲಕ ಮೆಟ್ಟಿಲಿನಿಂದ ಕೆಳಗಿಳಿಯುವಾಗ ಹಾವನ್ನು ಗಮನಿಸದೆ ಹೆಚ್ಚು ಕಡಿಮೆ ಅದನ್ನು ತುಳಿದೇ ಬಿಡುತ್ತಾನೆ. ಹಾವು ಮೊದಲು ಹೆದರಿ ವಾಪಸ್ಸು ತಿರುಗುತ್ತದೆ ಅದರೆ ಕೂಡಲೇ ಹೆಡೆಯೆತ್ತಿ ಭುಸುಗುಡುತ್ತಾ ಬಾಲಕನನ್ನು ಕಚ್ಚಲು ಮುನ್ನುಗ್ಗುತ್ತದೆ.
ಅಷ್ಟರಲ್ಲಿ ಮಗುವಿನ ತಾಯಿ ಹಾವು ಮುನ್ನುಗ್ಗುತ್ತಿರುವುದನ್ನು ಮತ್ತು ತಮ್ಮ ಮಗ ಭೀತಿಯಿಂದ ಹಾವಿನತ್ತಲೇ ಬರುತ್ತಿರುವುದನ್ನು ಕಂಡು ಕೂಡಲೇ ಮೆಟ್ಟಲಿನಿಂದ ಹಾರಿ ಅವನನ್ನು ತಮ್ಮತ್ತ ಎಳೆದು ಎತ್ತಿಕೊಂಡು ಬಿಡುತ್ತಾರೆ! ಅವರ ಸಮಯ ಪ್ರಜ್ಞೆ ಮತ್ತು ಧೈರ್ಯದಿಂದ ಮಗುವಿನ ಪ್ರಾಣ ಉಳಿಯುತ್ತದೆ. ಹಾವು ತಾನು ಮೊದಲು ಹೊರಟ ದಿಕ್ಕಿನತ್ತ ಸಾಗುತ್ತದೆ.
ಅದಕ್ಕೇ ನಾವು ಹೇಳಿದ್ದು ಜನ್ಮ ನೀಡಿದಾಕೆಯೇ ಜೀವ ಉಳಿಸಿದಳು ಅಂತ!