AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ನಲ್ಲಿ ಸೋಮಣ್ಣ ಜತೆ ರೂಪೇಶ್​-ಸಾನ್ಯಾ ಜಗಳ; ಸುದೀಪ್ ಯಾರ ಪರ ವಹಿಸಿದ್ರು?

‘ಸಾನ್ಯಾ ಹಾಗೂ ರೂಪೇಶ್ ಲೈಟ್ ಆಫ್ ಆದಮೇಲೂ ಹೊರಗೆ ಹೋಗಿ ಮಾತನಾಡುತ್ತಾರೆ’ ಎಂದು ಸುದೀಪ್ ಎದುರು ದೂರು ಒಪ್ಪಿಸಿದರು ಸೋಮಣ್ಣ. ಇದಕ್ಕೆ ರೂಪೇಶ್ ಹಾಗೂ ಸಾನ್ಯಾ ಉತ್ತರ ಕೊಟ್ಟರು.

ಬಿಗ್ ಬಾಸ್​ನಲ್ಲಿ ಸೋಮಣ್ಣ ಜತೆ ರೂಪೇಶ್​-ಸಾನ್ಯಾ ಜಗಳ; ಸುದೀಪ್ ಯಾರ ಪರ ವಹಿಸಿದ್ರು?
ಸೋಮಣ್ಣ-ಸುದೀಪ್-ಸಾನ್ಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 21, 2022 | 7:00 AM

ರೂಪೇಶ್ ಶೆಟ್ಟಿ (Roopesh Shetty) ಹಾಗೂ ಸಾನ್ಯಾ  ‘ಬಿಗ್ ಬಾಸ್ ಒಟಿಟಿ’ಯಲ್ಲಿ ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುವಂತೆ ಮಾಡಿದ್ದು ಸೋಮಣ್ಣ ಮಾಚಿಮಾಡ. ಎಲ್ಲಾ ಸ್ಪರ್ಧಿಗಳ ಮಧ್ಯೆ ಈ ವಿಚಾರವನ್ನು ಅವರು ಚರ್ಚೆಗೆ ತಂದಿದ್ದರು. ಕ್ಯಾಪ್ಟನ್ಸಿ ಟಾಸ್ಕ್​ ವಿಚಾರಕ್ಕೆ ಸಾನ್ಯಾ (Sanya Iyer) ಯಾಕೆ ಅರ್ಹರಲ್ಲ ಎಂಬ ವಿಚಾರ ಚರ್ಚೆಗೆ ಬಂದಾಗ ‘ಸಾನ್ಯಾ ಹಾಗೂ ರೂಪೇಶ್ ಸದಾ ಅಂಟಿಕೊಂಡೇ ಇರುತ್ತಾರೆ. ಮನೆಯಲ್ಲಿ ಗುಂಪುಗಾರಿಕೆ ಮಾಡುತ್ತಿದ್ದಾರೆ’ ಎಂಬ ಮಾತನ್ನು ಸೋಮಣ್ಣ ಹೇಳಿದ್ದರು. ಈಗ ಸುದೀಪ್ ಎದುರಲ್ಲೂ ಈ ವಿಚಾರ ಚರ್ಚೆಗೆ ಬಂದಿದೆ.

‘ಸಾನ್ಯಾ ಹಾಗೂ ರೂಪೇಶ್ ಲೈಟ್ ಆಫ್ ಆದಮೇಲೂ ಹೊರಗೆ ಹೋಗಿ ಮಾತನಾಡುತ್ತಾರೆ’ ಎಂದು ಸುದೀಪ್ ಎದುರು ದೂರು ಒಪ್ಪಿಸಿದರು ಸೋಮಣ್ಣ. ಇದಕ್ಕೆ ರೂಪೇಶ್ ಹಾಗೂ ಸಾನ್ಯಾ ಉತ್ತರ ಕೊಟ್ಟರು. ‘ಈಗ ನಾವಿಬ್ಬರು ಮಾತನಾಡುವಾಗ ಸೋಮಣ್ಣ ನೋಡಿಬಿಡುತ್ತಾರೇನೋ ಎಂಬ ಭಯ ಕಾಡುವಂತೆ ಆಗಿದೆ. ಇಷ್ಟೊಂದು ಭಯ ಹುಟ್ಟಿದೆ ಎಂದರೆ ಅವರು ಯಾವ ರೀತಿಯಲ್ಲಿ ಮಾತನಾಡಿರಬಹುದು’ ಎಂದು ಸಾನ್ಯಾ ಹೇಳಿದರು.

ಈ ವಿಚಾರದಲ್ಲಿ ಸುದೀಪ್ ಮಾತನಾಡಿದ್ದಾರೆ. ‘ಪರಸ್ಪರ ಈ ವಿಚಾರದ ಬಗ್ಗೆ ಚರ್ಚೆ ಮಾಡಿದ್ದು ಸರಿ ಇದೆ. ಈ ರೀತಿ ವಿಚಾರ ಬಂದಾಗ ಕ್ಲ್ಯಾರಿಟಿ ತೆಗೆದುಕೊಳ್ಳುವುದು ಕೂಡ ಸರಿ ಇದೆ. ಸೋಮಣ್ಣ ಅವರು ಊಹೆ ಮಾಡಿದ್ದೂ ತಪ್ಪಲ್ಲ. ಯಾರೋ ಹೇಳಿದರು ಅಂತ ಮಾತನಾಡದೆ ಸುಮ್ಮನೆ ಇರುವುದು ಸರಿ ಅಲ್ಲ. ಬಿಗ್ ಬಾಸ್ ಮನೆಯಲ್ಲಿ ಬೇಸರ ಮಾಡಿಕೊಳ್ಳದೆ ಇರಲು ಸಾಧ್ಯವೇ ಇಲ್ಲ’ ಎಂದರು ಸುದೀಪ್. ಈ ಮೂಲಕ ಇಬ್ಬರ ಪರವಾಗಿಯೂ ಅವರು ಮಾತನಾಡಿದರು.

ಇದನ್ನೂ ಓದಿ
Image
‘ಬಿಗ್ ಬಾಸ್’ ಮನೆಯಿಂದ ಸ್ಫೂರ್ತಿ ಗೌಡ ಔಟ್​; ಎಲಿಮಿನೇಷನ್​ಗೆ ಕಾರಣವಾಯ್ತು ಆ ಒಂದು ವಿಚಾರ
Image
ನಾಮಿನೇಟ್ ಆಗದೇ ಇದ್ದರೂ ಬಿಗ್ ಬಾಸ್ ಮನೆಯಿಂದ ಅರ್ಜುನ್ ಔಟ್​; ಏನಿದು ಟ್ವಿಸ್ಟ್?
Image
ಕ್ಲೀನ್ ಶೇವ್ ಲುಕ್​ನಲ್ಲಿ ‘ಬಿಗ್ ಬಾಸ್’ ವೇದಿಕೆ ಏರಿದ ಸುದೀಪ್; ಇದಕ್ಕಿದೆ ಪ್ರಮುಖ ಕಾರಣ

ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಿಂದ ಸ್ಫೂರ್ತಿ ಗೌಡ ಔಟ್​; ಎಲಿಮಿನೇಷನ್​ಗೆ ಕಾರಣವಾಯ್ತು ಆ ಒಂದು ವಿಚಾರ

ಬಿಗ್ ಬಾಸ್ ಮನೆಯಲ್ಲಿ ಎರಡೇ ವಾರಕ್ಕೆ ನಾಲ್ಕು ಜನ ಔಟ್ ಆಗಿದ್ದಾರೆ. ಇಬ್ಬರು ಎಲಿಮಿನೇಟ್ ಆದರೆ, ಇನ್ನಿಬ್ಬರು ಗಾಯಗೊಂಡು ಮನೆಯಿಂದ ಹೊರ ಹೋಗಿದ್ದಾರೆ. ಕಿರಣ್ ಯೋಗೇಶ್ವರ್ ಹಾಗೂ ಸ್ಫೂರ್ತಿ ಗೌಡ ಅನುಕ್ರಮವಾಗಿ ಮೊದಲ ವಾರ ಹಾಗೂ ಎರಡನೇವಾರ ಎಲಿಮಿನೇಟ್ ಆಗಿದ್ದಾರೆ. ಲೋಕೇಶ್ ಹಾಗೂ ಅರ್ಜುನ್ ಅವರು ಗಾಯಗೊಂಡು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಈ ಕಾರಣಕ್ಕೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧೆ ಮತ್ತಷ್ಟು ಹೆಚ್ಚಿದೆ.