‘ಇಂಥ ಕೆಲಸ ಮಾಡಿದ್ರೆ ಬಾಗಿಲು ತೋರಿಸ್ತೀವಿ’: ಖಡಕ್​ ಎಚ್ಚರಿಕೆ ನೀಡಿದ ಸುದೀಪ್

Kichcha Sudeep | Bigg Boss Kannada OTT: ‘ಮುಂದಿನ ಬಾರಿ ಈ ರೀತಿ ಮಾಡಿದರೆ ನಿಮಗೆ ಬಾಗಿಲು ತೋರಿಸಬೇಕಾಗುತ್ತದೆ’ ಎಂದು ಜಶ್ವಂತ್​ಗೆ ಕಿಚ್ಚ ಸುದೀಪ್​ ನೇರವಾಗಿ ಹೇಳಿದ್ದಾರೆ. ವಾರದ ಪಂಚಾಯಿತಿಯಲ್ಲಿ ಈ ಬಗ್ಗೆ ಪ್ರಸ್ತಾಪ ಆಗಿದೆ.

‘ಇಂಥ ಕೆಲಸ ಮಾಡಿದ್ರೆ ಬಾಗಿಲು ತೋರಿಸ್ತೀವಿ’: ಖಡಕ್​ ಎಚ್ಚರಿಕೆ ನೀಡಿದ ಸುದೀಪ್
ಕಿಚ್ಚ ಸುದೀಪ್
Follow us
TV9 Web
| Updated By: ಮದನ್​ ಕುಮಾರ್​

Updated on:Aug 21, 2022 | 9:34 PM

ಬಿಗ್​ ಬಾಸ್​ ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ಈ ಬಾರಿ ಒಟಿಟಿಯಲ್ಲಿ (Bigg Boss Kannada OTT) ಈ ರಿಯಾಲಿಟಿ ಶೋ ಪ್ರಸಾರ ಆಗುತ್ತಿದೆ. ದಿನದಿಂದ ದಿನಕ್ಕೆ ಸ್ಪರ್ಧಿಗಳ ಅಸಲಿ ಮುಖ ರಿವೀಲ್​ ಆಗುತ್ತಿದೆ. 16 ಸ್ಪರ್ಧಿಗಳಿಂದ ಶುರುವಾದ ಈ ಶೋನಲ್ಲಿ ಈಗ 12 ಜನರ ನಡುವೆ ಪೈಪೋಟಿ ಮುಂದುವರಿದಿದೆ. ಪ್ರತಿ ವಾರ ಕಿಚ್ಚ ಸುದೀಪ್ (Kichcha Sudeep) ಅವರು ಎಲ್ಲರನ್ನೂ ಕೂರಿಸಿ ಪಂಚಾಯಿತಿ ಮಾಡುತ್ತಾರೆ. ಪ್ರತಿಯೊಬ್ಬರ ಪ್ಲಸ್​ ಮತ್ತು ಮೈನಸ್​ಗಳನ್ನು ಅವರು ಗಮನಿಸಿ ಹೇಳುತ್ತಾರೆ. ಕೆಲವೊಮ್ಮೆ ಖಡಕ್​ ಆಗಿ ಎಚ್ಚರಿಕೆ ಕೂಡ ನೀಡುತ್ತಾರೆ. ಈ ವಾರ ಜಶ್ವಂತ್​ ಅವರಿಗೆ ಸುದೀಪ್​ ವಾರ್ನಿಂಗ್​ ನೀಡಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ. ಗರ್ಲ್​ಫ್ರೆಂಡ್​ ನಂದು ಜೊತೆಗಿನ ಅತಿಯಾದ ಒಡನಾಟದ ಕಾರಣದಿಂದ ಜಶ್ವಂತ್​ (Jashwanth) ಅವರಿಗೆ ಈ ಪರಿಸ್ಥಿತಿ ಬಂದಿದೆ.

ಆರಂಭದಲ್ಲಿ ಜಶ್ವಂತ್​ ಮತ್ತು ನಂದು ಅವರು ಜೋಡಿಯಾಗಿ ಬಿಗ್​ ಬಾಸ್​ ಮನೆ ಪ್ರವೇಶಿಸಿದರು. ಆದರೆ ಕೆಲವೇ ದಿನಗಳಲ್ಲಿ ಅವರಿಬ್ಬರು ಪ್ರತ್ಯೇಕವಾಗಿ ಆಟ ಮುಂದುವರಿಸಬೇಕು ಎಂದು ಬಿಗ್​ ಬಾಸ್​ ಆದೇಶಿಸಿದರು. ಆದರೂ ಕೂಡ ಜಶ್ವಂತ್​ ವರ್ತನೆಯಲ್ಲಿ ಹೆಚ್ಚಿನ ಬದಲಾವಣೆ ಕಾಣಿಸಲಿಲ್ಲ. ಅದನ್ನು ಕಿಚ್ಚ ಸುದೀಪ್ ಗಮನಿಸಿದ್ದಾರೆ. ವಾರದ ಪಂಚಾಯಿತಿಯಲ್ಲಿ ಅದನ್ನು ಅವರು ನೇರವಾಗಿ ಜಶ್ವಂತ್​ಗೆ ಹೇಳಿದ್ದಾರೆ.

ಪ್ರತಿ ವಾರ ಎಲ್ಲರೂ ಒಬ್ಬೊಬ್ಬರನ್ನು ನಾಮಿನೇಟ್​ ಮಾಡಬೇಕು. ತಮ್ಮ ಸ್ವಂತ ನಿರ್ಧಾರದಿಂದ ನಾಮಿನೇಟ್​ ಮಾಡಬೇಕೇ ಹೊರತು, ಇನ್ನೊಬ್ಬರ ಜೊತೆ ಚರ್ಚೆ ಮಾಡಿ ತೀರ್ಮಾನಕ್ಕೆ ಬರುವಂತಿಲ್ಲ. ಆದರೆ ಜಶ್ವಂತ್​ ಅವರು ಆ ನಿಯಮ ಮುರಿದಿದ್ದಾರೆ. ಗರ್ಲ್​ಫ್ರೆಂಡ್​ ನಂದು ಜೊತೆ ಅವರು ನಾಮಿನೇಷನ್​ ಬಗ್ಗೆ ಚರ್ಚೆ ಮಾಡಿದ್ದರು. ಅದನ್ನು ಗಮನಿಸಿದ ಸುದೀಪ್​ ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ
Image
Sonu Srinivas Gowda: ರಾತ್ರಿ 2.15ಕ್ಕೆ ಸೋನು ಗೌಡ ಜತೆ ಮಾತಾಡಲು ಬಂದ ರಾಕೇಶ್; ವೈರಲ್​ ಹುಡುಗಿಯ ಪ್ರತಿಕ್ರಿಯೆ ಹೇಗಿತ್ತು?​
Image
Sonu Srinivas Gowda: ಮೂಡ್ ಇಲ್ಲ ಅಂದ್ರೆ ಸೋನು ಶ್ರೀನಿವಾಸ್​ ಗೌಡ 3 ದಿನ ಸ್ನಾನ ಮಾಡಲ್ಲ; ಎಲ್ಲರ ಎದುರು ಸತ್ಯ ಬಯಲು
Image
Sonu Srinivas Gowda: ‘ನೀವು ಹೀಗೆ ಮಾಡಿದ್ರೆ ಈ ಶೋ ನಡೆಯಲ್ಲ’: ಸುದೀಪ್​ ಕೋಪಕ್ಕೆ ಕಾರಣವಾಯ್ತು ಸೋನು ಗೌಡ ವರ್ತನೆ
Image
Sonu Srinivas Gowda: ‘ಸೋನು ಬಾತ್​ ರೂಮ್​ ಯಾಕೆ ಹುಡುಕಲಿಲ್ಲ?’: ವೇದಿಕೆ ಮೇಲೆ ಸುದೀಪ್​ ಕೇಳಿದ್ರು ನೇರ ಪ್ರಶ್ನೆ

‘ಮುಂದಿನ ಬಾರಿ ಈ ರೀತಿ ಮಾಡಿದರೆ ನಿಮಗೆ ಬಾಗಿಲು ತೋರಿಸಬೇಕಾಗುತ್ತದೆ. ನೀವಿಬ್ಬರು ಬೇರೆ ಬೇರೆ ಸ್ಪರ್ಧಿಗಳಾಗಿ ಆಡ್ತಾ ಇದೀರಿ. ಹಾಗಿದ್ದ ಮೇಲೆ ಚರ್ಚೆ ಮಾಡ್ಕೊಂಡು ನಾಮಿನೇಟ್​ ಮಾಡುವಂತಿಲ್ಲ’ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ. ಇದನ್ನು ಜಶ್ವಂತ್​ ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಅಂತ ಕಾದು ನೋಡಬೇಕು.

ಸದ್ಯ ಲೋಕೇಶ್​ ಮತ್ತು ಅರ್ಜುನ್​ ರಮೇಶ್​ ಅವರು ಗಾಯದ ಸಮಸ್ಯೆಯ ಕಾರಣಕ್ಕೆ ಬಿಗ್​ ಬಾಸ್​ ಮನೆಯಿಂದ ಔಟ್​ ಆಗಿದ್ದಾರೆ. ಕಿರಣ್​ ಯೋಗೇಶ್ವರ್​ ಹಾಗೂ ಸ್ಫೂರ್ತಿ ಗೌಡ ಅವರು ಕಡಿಮೆ ವೋಟ್​ ಪಡೆದು ಎಲಿಮಿನೇಟ್​ ಆಗಿದ್ದಾರೆ. ಇನ್ನುಳಿದ 12 ಜನರು ತಮ್ಮದೇ ತಂತ್ರಗಳ ಮೂಲಕ ಆಟ ಮುಂದುವರಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:34 pm, Sun, 21 August 22