AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sonu Srinivas Gowda: ‘ಸೋನು ಬಾತ್​ ರೂಮ್​ ಯಾಕೆ ಹುಡುಕಲಿಲ್ಲ?’: ವೇದಿಕೆ ಮೇಲೆ ಸುದೀಪ್​ ಕೇಳಿದ್ರು ನೇರ ಪ್ರಶ್ನೆ

Kichcha Sudeep | Bigg Boss Kannada OTT: ‘ನೀವು ಹೊರಗಡೆ ಸಿಕ್ಕಾಪಟ್ಟೆ ನ್ಯೂಸ್​ನಲ್ಲಿ ಇದ್ದೀರಿ’ ಎಂದು ಸೋನು ಶ್ರೀನಿವಾಸ್​ ಗೌಡಗೆ ಕಿಚ್ಚ ಸುದೀಪ್​ ಹೇಳಿದರು. ‘ಯಾವ ರೀತಿ ಸರ್​’ ಎಂದು ಕುತೂಹಲದಿಂದ ಸೋನು ಪ್ರಶ್ನಿಸಿದರು.

Sonu Srinivas Gowda: ‘ಸೋನು ಬಾತ್​ ರೂಮ್​ ಯಾಕೆ ಹುಡುಕಲಿಲ್ಲ?’: ವೇದಿಕೆ ಮೇಲೆ ಸುದೀಪ್​ ಕೇಳಿದ್ರು ನೇರ ಪ್ರಶ್ನೆ
‘ಬಿಗ್ ಬಾಸ್ ಕನ್ನಡ ಒಟಿಟಿ’
TV9 Web
| Edited By: |

Updated on:Aug 14, 2022 | 3:24 PM

Share

ಟ್ರೋಲ್​ಗಳಿಂದ ಫೇಮಸ್​ ಆದ ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಅವರು ಬಿಗ್​ ಬಾಸ್​ ಮನೆಯಲ್ಲಿ ಹೆಚ್ಚು ಹೈಲೈಟ್​ ಆಗುತ್ತಿದ್ದಾರೆ. ಅವರ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ನೆಗೆಟಿವ್​ ಕಮೆಂಟ್​ಗಳನ್ನು ಎದುರಿಸಿ ಬಂದಿರುವ ಸೋನು ಗೌಡ ಅವರು ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಶೋನಲ್ಲಿ ತಮ್ಮದೇ ರೀತಿಯಲ್ಲಿ ಗೇಮ್​ ಪ್ಲ್ಯಾನ್​ ಮಾಡುತ್ತಿದ್ದಾರೆ. ಎಲ್ಲರ ಜೊತೆಗೂ ಬೆರೆತು ಅವರು ಮುನ್ನಡೆಯುತ್ತಿದ್ದಾರೆ. ಮೊದಲ ವಾರ ಅವರಿಗೆ ವೀಕ್ಷಕರಿಂದ ಅಗತ್ಯ ವೋಟ್ಸ್​ ಬಂದಿದೆ. ಹಾಗಾಗಿ ಅವರು ಎಲಿಮಿನೇಷನ್​ನಿಂದ ಪಾರಾಗಿದ್ದಾರೆ. ವೀಕೆಂಡ್​ ಪಂಚಾಯಿತಿಯಲ್ಲಿ ಸೋನು ಶ್ರೀನಿವಾಸ್​ ಗೌಡ ಅವರನ್ನು ಕಿಚ್ಚ ಸುದೀಪ್​ (Kichcha Sudeep) ಮಾತನಾಡಿಸಿದ್ದಾರೆ.

ಇಷ್ಟು ವರ್ಷ ಟಿವಿಯಲ್ಲಿ ಬಿಗ್​ ಬಾಸ್​ ಪ್ರಸಾರ ಆಗುತ್ತಿತ್ತು. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಒಟಿಟಿಯಲ್ಲಿ ಬಿತ್ತರ ಆಗುತ್ತಿದೆ. ಈ ಒಟಿಟಿ ಶೋ ಆರು ವಾರಗಳ ಕಾಲ ಇರಲಿದೆ. ಹಾಗಾಗಿ ಒಂದೊಂದು ವಾರ ಕೂಡ ತುಂಬ ಮುಖ್ಯ. ಮೊದಲ ವಾರದಲ್ಲೇ ಪ್ರೇಕ್ಷಕರ ಮನ ಗೆಲ್ಲುವ ಸವಾಲು ಸ್ಪರ್ಧಿಗಳ ಮುಂದೆ ಇತ್ತು. ಆ ವಿಚಾರದಲ್ಲಿ ಸೋನು ಶ್ರೀನಿವಾಸ್​ ಗೌಡ ಗೆದ್ದಿದ್ದಾರೆ ಎನ್ನಬಹುದು. 16 ಸ್ಪರ್ಧಿಗಳ ಪೈಕಿ ಅವರು ಹೈಲೈಟ್​ ಆಗುತ್ತಿದ್ದಾರೆ.

ಬಿಗ್​ ಬಾಸ್​ ಮನೆಗೆ ಕಾಲಿಟ್ಟ ಮೊದಲ ದಿನವೇ ಸೋನು ಶ್ರೀನಿವಾಸ್​ ಗೌಡ ಅವರು ಬಾತ್​ ರೂಮ್​ ಹುಡುಕುವಲ್ಲಿ ವಿಫಲರಾಗಿದ್ದರು. ಈ ವಿಚಾರವನ್ನು ಮೊದಲ ವಾರದ ಪಂಚಾಯಿತಿಯಲ್ಲಿ ಸುದೀಪ್​ ನೆನಪಿಸಿದ್ದಾರೆ. ‘ಸೋನು ಗೌಡ ಅವರೇ ನೀವು ಬಾತ್​ ರೂಮ್​ಗೆ ಹೋಗಬೇಕು ಎಂದು ಒದ್ದಾಡ್ತಾ ಇದ್ರಿ. ಆದರೆ ಬಾತ್ ರೂಮ್​ ಎಲ್ಲಿದೆ ಅಂತ ಹುಡುಕಲಿಲ್ಲವಲ್ಲ ನೀವು’ ಎಂದು ಸುದೀಪ್​ ಪ್ರಶ್ನಿಸಿದರು. ‘ಈ ಮನೆಯಲ್ಲಿ ಬಾತ್​ ರೂಮ್​ ಇಲ್ಲವೇನೋ ಅಂದುಕೊಂಡೆ’ ಎಂದು ಉತ್ತರಿಸಿ ನಕ್ಕಿದ್ದಾರೆ ಸೋನು.

ಇದನ್ನೂ ಓದಿ
Image
Sonu Srinivas Gowda: ‘ಯಾವ ನನ್ಮಗ​ ಏನು ಅಂದುಕೊಂಡ್ರೂ ನಾನು ತಲೆ ಕೆಡಿಸಿಕೊಳ್ಳಲ್ಲ’: ಸೋನು ಗೌಡ ಓಪನ್​ ಮಾತು
Image
Sonu Srinivas Gowda: ‘ಕ್ಯಾಮೆರಾ ಕಂಡ್ರೆ ನಾನು ಮೊದಲು ಪೋಸ್​ ಕೊಡೋದು ಹಿಂಗೆ’: ಸೋನು ಶ್ರೀನಿವಾಸ್​ ಗೌಡ
Image
Sonu Srinivas Gowda: ‘ನಂದು ಇನ್ನೊಂದು ವಿಡಿಯೋ ಇದೆ, ಯಾವಾಗ ಬರತ್ತೋ ಗೊತ್ತಿಲ್ಲ’: ಸತ್ಯ ಒಪ್ಪಿಕೊಂಡ ಸೋನು ಗೌಡ
Image
Sonu Srinivas Gowda: ಖಾಸಗಿ ವಿಡಿಯೋ ಲೀಕ್​ ಆಗಿದ್ದು ಹೇಗೆ? ಎಲ್ಲವನ್ನೂ ಎಳೆಎಳೆಯಾಗಿ ವಿವರಿಸಿದ ಸೋನು ಶ್ರೀನಿವಾಸ್​ ಗೌಡ

ಗಂಟಲು ನೋವಿಗೆ ಸೋನು ಶ್ರೀನಿವಾಸ್​ ಗೌಡ ಅವರು ಒಂದು ಔಷಧಿ ಹೇಳಿದ್ದರು. ಆ ವಿಚಾರವನ್ನು ಕೂಡ ಸುದೀಪ್​ ಪ್ರಸ್ತಾಪಿಸಿದ್ದಾರೆ. ‘ನೀವು ಹೊರಗಡೆ ಸಿಕ್ಕಾಪಟ್ಟೆ ನ್ಯೂಸ್​ನಲ್ಲಿ ಇದ್ದೀರಿ’ ಎಂದು ಅವರು ಹೇಳಿದರು. ‘ಯಾವ ರೀತಿ ಸರ್​’ ಎಂದು ಕುತೂಹಲದಿಂದ ಸೋನು ಕೇಳಿದರು. ‘ಟ್ರೋಲ್​ ಅಂತೂ ಅಲ್ಲ’ ಎಂದು ಕೇಳಿದಾಗ ಸೋನು ಮುಖದಲ್ಲಿ ನಗು ಅರಳಿತು. ‘ಗಂಟಲು ನೋವಿಗೆ ಹೊಸ ಔಷಧಿ ಕಂಡು ಹಿಡಿದಿದ್ದೀರಿ. ಈ ಔಷಧಿ ಕೇಳಿ ವೈದ್ಯಕೀಯ ಜಗತ್ತೇ ಶೇಕ್​ ಆಗಿದೆ’ ಎಂದು ಸುದೀಪ್​ ಕಾಲೆಳೆದರು.

‘ನಮ್ಮ ಮನೆಯಲ್ಲಿ ಗಂಟಲು ನೋವು ಬಂದರೆ ನಾಟಿ ಕೋಳಿ ಮೊಟ್ಟೆಗೆ ತುಂಬ ಉಪ್ಪು, ಖಾರ ಹಾಕಿ ಅದನ್ನು ಫ್ರೈ ಮಾಡಿ ಕೊಡ್ತಾರೆ’ ಎಂದು ಸೋನು ಹೇಳಿದ್ದು ಕೇಳಿ ಎಲ್ಲರೂ ನಕ್ಕಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:24 pm, Sun, 14 August 22

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವೂ 1.60 ಕೋಟಿ ರೂ. ಲಂಚ ಆರೋಪ
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವೂ 1.60 ಕೋಟಿ ರೂ. ಲಂಚ ಆರೋಪ