AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sonu Srinivas Gowda: ಸೋನು ಶ್ರೀನಿವಾಸ್​ ಗೌಡಗೆ ಮುಗಿಬಿದ್ದು ವೋಟ್​ ಮಾಡಿದ ಜನರು; ಬಿಗ್​ ಬಾಸ್​ನಲ್ಲಿ ವೈರಲ್​ ಹುಡುಗಿ ಸೇಫ್​

Sonu Srinivas Gowda | Bigg Boss Kannada OTT: ಸೋನು ಶ್ರೀನಿವಾಸ್​ ಗೌಡ ಅವರನ್ನು ಜನರು ಹಿಗ್ಗಾಮುಗ್ಗಾ ಟ್ರೋಲ್​ ಮಾಡುತ್ತಾರೆ. ಹಾಗಾಗಿ ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋನಲ್ಲಿ ಅವರಿಗೆ ಕಡಿಮೆ ವೋಟ್​ ಬೀಳಬಹುದು ಎಂದೇ ಊಹಿಸಲಾಗಿತ್ತು. ಆದರೆ ಆ ರೀತಿ ಆಗಿಲ್ಲ.

Sonu Srinivas Gowda: ಸೋನು ಶ್ರೀನಿವಾಸ್​ ಗೌಡಗೆ ಮುಗಿಬಿದ್ದು ವೋಟ್​ ಮಾಡಿದ ಜನರು; ಬಿಗ್​ ಬಾಸ್​ನಲ್ಲಿ ವೈರಲ್​ ಹುಡುಗಿ ಸೇಫ್​
ಸೋನು ಶ್ರೀನಿವಾಸ್ ಗೌಡ
TV9 Web
| Edited By: |

Updated on:Aug 13, 2022 | 9:45 PM

Share

ಜನಪ್ರಿಯ ರಿಯಾಲಿಟಿ ಶೋ ಬಿಗ್​​ ಬಾಸ್​ ಎಂದರೆ ಪ್ರೇಕ್ಷಕರಿಗೆ ಸಖತ್​ ಇಷ್ಟ. ಈ ಕಾರ್ಯಕ್ರಮದಲ್ಲಿ ಅನೇಕರ ಮುಖವಾಡಗಳು ಬಯಲಾಗುತ್ತವೆ. ಏನೋ ಅಂದುಕೊಂಡವರ ವ್ಯಕ್ತಿತ್ವ ಇನ್ನೇನೋ ಆಗಿ ಕಾಣಿಸುತ್ತದೆ. ಟಿಕ್​ ಟಾಕ್​ ವಿಡಿಯೋಗಳು ಮತ್ತು ರೀಲ್ಸ್​ ಮೂಲಕ ಫೇಮಸ್​ ಆಗಿದ್ದ ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಅವರ ವಿಚಾರದಲ್ಲೂ ಹಾಗೆಯೇ ಆಗುತ್ತಿದೆ. ಹೊರ ಜಗತ್ತಿನಲ್ಲಿ ಅವರನ್ನು ಜನರು ಹಿಗ್ಗಾಮುಗ್ಗಾ ಟ್ರೋಲ್​ ಮಾಡುತ್ತಿದ್ದಾರೆ. ಆದರೆ ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ​ಶೋನಲ್ಲಿ ಅವರನ್ನು ಸಪೋರ್ಟ್​ ಮಾಡುವವರ ಸಂಖ್ಯೆ ದೊಡ್ಡದಿದೆ. ಮೊದಲ ವಾರದಲ್ಲಿ ಸೋನು ಶ್ರೀನಿವಾಸ್​ ಗೌಡ ನಾಮಿನೇಟ್​ ಆಗಿದ್ದರು. ಆದರೆ ಜನರಿಂದ ವೋಟ್​ ಪಡೆಯುವ ಮೂಲಕ ಅವರು ಸೇಫ್​ ಆಗಿದ್ದಾರೆ. ಮೊದಲ ವಾರದ ಎಲಿಮಿನೇಷನ್​ನಿಂದ (Bigg Boss Elimination) ಬಚಾವ್​ ಆಗಿರುವ ಅವರು ಕುಣಿದು ಕುಪ್ಪಳಿಸಿದ್ದಾರೆ. ಇನ್ನೋರ್ವ ಸ್ಪರ್ಧಿ ಕಿರಣ್​ ಯೋಗೇಶ್ವರ್​ ಎಲಿಮಿನೇಟ್​ ಆಗಿದ್ದಾರೆ.

ಮೊದಲ ವಾರ ಎಂಬುದು ಬಿಗ್​ ಬಾಸ್​ ಸ್ಪರ್ಧಿಗಳಿಗೆ ತುಂಬ ಮುಖ್ಯ. ಇರುವ ಕಡಿಮೆ ಸಮಯದಲ್ಲಿ ತಮ್ಮ ತನವನ್ನು ಸಾಬೀತು ಪಡಿಸಿಕೊಳ್ಳಬೇಕು. ವೀಕ್ಷಕರಿಂದ ವೋಟ್​ ಗಿಟ್ಟಿಸಿಕೊಳ್ಳಬೇಕು. ಎಲ್ಲ ಟಾಸ್ಕ್​ಗಳನ್ನು ಚೆನ್ನಾಗಿ ಆಡಬೇಕು. ಒಂದು ವಿಚಾರದಲ್ಲಿ ಎಡವಟ್ಟು ಆದರೂ ಎಲಿಮಿನೇಷನ್​ ಭಯ ಕಾಡುತ್ತದೆ. ಈ ವಾರ ಸಾನ್ಯಾ ಅಯ್ಯರ್​, ರಾಕೇಶ್​ ಅಡಿಗ, ಆರ್ಯವರ್ಧನ್​ ಗುರೂಜಿ, ಸೋನು ಶ್ರೀನಿವಾಸ್​ ಗೌಡ, ಅರ್ಜುನ್​ ರಮೇಶ್​, ಉದಯ್​ ಸೂರ್ಯ, ಸ್ಫೂರ್ತಿ ಗೌಡ, ಜಯಶ್ರೀ ಆರಾಧ್ಯ, ಅಕ್ಷತಾ ಕುಕ್ಕಿ, ಕಿರಣ್​ ಯೋಗೇಶ್ವರ್​ ನಾಮಿನೇಟ್​ ಆಗಿದ್ದರು.

ಸೋನು ಶ್ರೀನಿವಾಸ್​ ಗೌಡ ಅವರನ್ನು ಜನರು ಹಿಗ್ಗಾಮುಗ್ಗಾ ಟ್ರೋಲ್​ ಮಾಡುತ್ತಾರೆ. ಅವರಿಗೆ ಬಿಗ್​ ಬಾಸ್​ ವೇದಿಕೆಯಲ್ಲಿ ಅವಕಾಶ ನೀಡಿದ್ದೇ ತಪ್ಪು ಎಂಬ ಅಭಿಪ್ರಾಯ ನೆಟ್ಟಿಗರಿಗೆ ಇದೆ. ಹಾಗಾಗಿ ಅವರಿಗೆ ಜನರಿಂದ ಕಡಿಮೆ ವೋಟ್​ ಬೀಳಬಹುದು ಎಂದೇ ಊಹಿಸಲಾಗಿತ್ತು. ಆದರೆ ಆ ರೀತಿ ಆಗಿಲ್ಲ. ಜನರು ಸೋನು ಗೌಡಗೆ ಸೇಫ್​ ಆಗುವಷ್ಟು ವೋಟ್​ ಮಾಡಿದ್ದಾರೆ. ಆದ್ದರಿಂದ ಮೊದಲ ವಾರದ ಎಲಿಮಿನೇಷನ್​ ದವಡೆಯಿಂದ ಅವರು ತಪ್ಪಿಸಿಕೊಂಡಿದ್ದಾರೆ.

ಇದನ್ನೂ ಓದಿ
Image
Sonu Srinivas Gowda: ‘ಯಾವ ನನ್ಮಗ​ ಏನು ಅಂದುಕೊಂಡ್ರೂ ನಾನು ತಲೆ ಕೆಡಿಸಿಕೊಳ್ಳಲ್ಲ’: ಸೋನು ಗೌಡ ಓಪನ್​ ಮಾತು
Image
Sonu Srinivas Gowda: ‘ಕ್ಯಾಮೆರಾ ಕಂಡ್ರೆ ನಾನು ಮೊದಲು ಪೋಸ್​ ಕೊಡೋದು ಹಿಂಗೆ’: ಸೋನು ಶ್ರೀನಿವಾಸ್​ ಗೌಡ
Image
Sonu Srinivas Gowda: ‘ನಂದು ಇನ್ನೊಂದು ವಿಡಿಯೋ ಇದೆ, ಯಾವಾಗ ಬರತ್ತೋ ಗೊತ್ತಿಲ್ಲ’: ಸತ್ಯ ಒಪ್ಪಿಕೊಂಡ ಸೋನು ಗೌಡ
Image
Sonu Srinivas Gowda: ಖಾಸಗಿ ವಿಡಿಯೋ ಲೀಕ್​ ಆಗಿದ್ದು ಹೇಗೆ? ಎಲ್ಲವನ್ನೂ ಎಳೆಎಳೆಯಾಗಿ ವಿವರಿಸಿದ ಸೋನು ಶ್ರೀನಿವಾಸ್​ ಗೌಡ

ಈ ಹಿಂದೆ ಸೋನು ಶ್ರೀನಿವಾಸ್​ ಗೌಡ ಅವರ ಖಾಸಗಿ ವಿಡಿಯೋ ವೈರಲ್​ ಆಗಿತ್ತು. ಆ ಬಳಿಕ ಅವರು ಟ್ರೋಲಿಗರ ಕೆಂಗಣ್ಣಿಗೆ ಗುರಿ ಆಗಿದ್ದರು. ಆ ಕಹಿ ಘಟನೆ ನಡೆದಿದ್ದು ಹೇಗೆ ಎಂಬ ಬಗ್ಗೆ ಮೊದಲ ವಾರವೇ ಅವರು ಬಿಗ್​ ಬಾಸ್​ ಮನೆಯಲ್ಲಿ ಬಾಯ್ಬಿಟ್ಟಿದ್ದಾರೆ. ಅಲ್ಲದೇ, ‘ನನ್ನದು ಇನ್ನೊಂದು ವಿಡಿಯೋ ಇದೆ. ಅದು ಯಾವಾಗ ಹೊರಬರುತ್ತೋ ಗೊತ್ತಿಲ್ಲ’ ಎಂದು ಅಳಲು ತೋಡಿಕೊಂಡಿದ್ದಾರೆ. ಅವರ ನೇರ ನಡೆ-ನುಡಿಯ ವ್ಯಕ್ತಿತ್ವದ ಬಗ್ಗೆ ಇನ್ನುಳಿದ ಸ್ಪರ್ಧಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:45 pm, Sat, 13 August 22

ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್, ಓಡಿ ಪ್ರಾಣ ಉಳಿಸಿಕೊಂಡ ಜನ
ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್, ಓಡಿ ಪ್ರಾಣ ಉಳಿಸಿಕೊಂಡ ಜನ
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?
Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?