AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sonu Srinivas Gowda: ‘ನೀವು ಹೀಗೆ ಮಾಡಿದ್ರೆ ಈ ಶೋ ನಡೆಯಲ್ಲ’: ಸುದೀಪ್​ ಕೋಪಕ್ಕೆ ಕಾರಣವಾಯ್ತು ಸೋನು ಗೌಡ ವರ್ತನೆ

Kichcha Sudeep | Bigg Boss Kannada OTT: ಕಿಚ್ಚ ಸುದೀಪ್ ಅವರ​ ಎದುರಲ್ಲೇ ಸೋನು ಶ್ರೀನಿವಾಸ್​ ಗೌಡ ಗುಡುಗಿದ್ದಾರೆ. ಇದನ್ನು ಗಮನಿಸಿದ ಸುದೀಪ್​ ಅವರು ಖಡಕ್​ ವಾರ್ನಿಂಗ್​ ನೀಡಿದ್ದಾರೆ.

Sonu Srinivas Gowda: ‘ನೀವು ಹೀಗೆ ಮಾಡಿದ್ರೆ ಈ ಶೋ ನಡೆಯಲ್ಲ’: ಸುದೀಪ್​ ಕೋಪಕ್ಕೆ ಕಾರಣವಾಯ್ತು ಸೋನು ಗೌಡ ವರ್ತನೆ
ಸೋನು ಶ್ರೀನಿವಾಸ್ ಗೌಡ, ಕಿಚ್ಚ ಸುದೀಪ್
TV9 Web
| Updated By: ಮದನ್​ ಕುಮಾರ್​|

Updated on:Aug 14, 2022 | 9:44 PM

Share

ಬಿಗ್​ ಬಾಸ್​ ಮನೆಯಲ್ಲಿ ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಅವರು ತಮ್ಮದೇ ಆದಂತಹ ಇಮೇಜ್​ ಹೊಂದಿದ್ದಾರೆ. ಹೊರಗಡೆ ದುನಿಯಾದಲ್ಲಿ ವೈರಲ್​​ ವಿಡಿಯೋ ಮತ್ತು ರೀಲ್ಸ್​ ಮೂಲಕ ಫೇಮಸ್​ ಆಗಿರುವ ಅವರು ದೊಡ್ಮನೆಯಲ್ಲಿ ಬೇರೆ ಬೇರೆ ಕಾರಣಗಳಿಂದ ಸುದ್ದಿ ಆಗುತ್ತಿದ್ದಾರೆ. ಈಗ ಅವರ ಒಂದು ವರ್ತನೆಯಿಂದ ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಶೋನಲ್ಲಿ ಸ್ಪರ್ಧಿಸುತ್ತಿರುವ ಎಲ್ಲರಿಗೂ ಬೇಸರ ಆಗಿದೆ. ಅಷ್ಟೇ ಅಲ್ಲ, ಕಿಚ್ಚ ಸುದೀಪ್​ ಅವರಿಗೂ ಸೋನು ಗೌಡ ವರ್ತನೆ ಹಿಡಿಸಿಲ್ಲ. ತಮಗೊಂದು ನ್ಯಾಯ, ಬೇರೆಯವರಿಗೆ ಇನ್ನೊಂದು ನ್ಯಾಯ ಎಂಬ ರೀತಿಯಲ್ಲಿ ಸೋನು ನಡೆದುಕೊಂಡಿದ್ದಾರೆ. ಅದನ್ನು ಗಮನಿಸಿದ ಕಿಚ್ಚ ಸುದೀಪ್ (Kichcha Sudeep) ಅವರು ಸರಿಯಾದ ತಿರುಗೇಟು ನೀಡಿದ್ದಾರೆ.

ಪ್ರತಿ ಬಾರಿಯಂತೆ ಈ ಬಾರಿ ಕೂಡ ಬಿಗ್​ ಬಾಸ್​ ಮನೆಯಲ್ಲಿ ಹತ್ತು ಹಲವು ಸಂಗತಿಗಳು ಗಮನ ಸೆಳೆಯುತ್ತಿವೆ. ಕನ್ನಡದ ಪ್ರೇಕ್ಷಕರಿಗೆ ‘ಬಿಗ್​ ಬಾಸ್​ ಒಟಿಟಿ’ ಹೊಸತು. ಇದರಲ್ಲಿ ಇರುವುದು ಆರು ವಾರಗಳ ಕಾಲಾವಕಾಶ ಮಾತ್ರ. ಅಷ್ಟರೊಳಗೆ ಸ್ಪರ್ಧಿಗಳು ತಮ್ಮತನವನ್ನು ಸಾಬೀತು ಮಾಡಿಕೊಳ್ಳಬೇಕು. ಹಾಗಂತ ಮನಸ್ಸಿಗೆ ಬಂದಂತೆ ವರ್ತಿಸಿದರೆ ಸುದೀಪ್​ ಸಹಿಸುವುದಿಲ್ಲ. ಮೊದಲ ವಾರದ ಪಂಚಾಯಿತಿಯಲ್ಲಿ ಇಂಥ ಒಂದು ಘಟನೆ ನಡೆದಿದೆ.

ವೀಕೆಂಡ್​ನಲ್ಲಿ ಕಿಚ್ಚ ಸುದೀಪ್​ ಅವರು ವಾರದ ಪಂಚಾಯಿತಿ ನಡೆಸಿಕೊಡುತ್ತಾರೆ. ಈ ಎಪಿಸೋಡ್​ನಲ್ಲಿ ‘ಯೆಸ್​ ಅಥವಾ ನೋ’ ಎಂಬ ರೌಂಡ್​ ಗಮನ ಸೆಳೆಯುತ್ತಿದೆ. ಸ್ಪರ್ಧಿಗಳಿಗೆ ವಿವಿಧ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅದಕ್ಕೆ ಹೌದು ಅಥವಾ ಇಲ್ಲ ಎಂದು ಅವರು ಉತ್ತರ ನೀಡಬೇಕು. ಒಂದು ವೇಳೆ ಸ್ಪರ್ಧಿಗಳ ಉತ್ತರಕ್ಕೆ ವಿವರಣೆ ಬೇಕಿದ್ದರೆ ಸುದೀಪ್​ ಕೇಳುತ್ತಾರೆ. ಈ ವಾರದ ಎಪಿಸೋಡ್​ನಲ್ಲೂ ಅದು ನಡೆದಿದೆ. ಈ ವೇಳೆ ಸೋನು ಗೌಡ ಸಿಡಿಮಿಡಿ ಮಾಡಿದ್ದಾರೆ.

ಇದನ್ನೂ ಓದಿ
Image
Sonu Srinivas Gowda: ‘ಯಾವ ನನ್ಮಗ​ ಏನು ಅಂದುಕೊಂಡ್ರೂ ನಾನು ತಲೆ ಕೆಡಿಸಿಕೊಳ್ಳಲ್ಲ’: ಸೋನು ಗೌಡ ಓಪನ್​ ಮಾತು
Image
Sonu Srinivas Gowda: ‘ಕ್ಯಾಮೆರಾ ಕಂಡ್ರೆ ನಾನು ಮೊದಲು ಪೋಸ್​ ಕೊಡೋದು ಹಿಂಗೆ’: ಸೋನು ಶ್ರೀನಿವಾಸ್​ ಗೌಡ
Image
Sonu Srinivas Gowda: ‘ನಂದು ಇನ್ನೊಂದು ವಿಡಿಯೋ ಇದೆ, ಯಾವಾಗ ಬರತ್ತೋ ಗೊತ್ತಿಲ್ಲ’: ಸತ್ಯ ಒಪ್ಪಿಕೊಂಡ ಸೋನು ಗೌಡ
Image
Sonu Srinivas Gowda: ಖಾಸಗಿ ವಿಡಿಯೋ ಲೀಕ್​ ಆಗಿದ್ದು ಹೇಗೆ? ಎಲ್ಲವನ್ನೂ ಎಳೆಎಳೆಯಾಗಿ ವಿವರಿಸಿದ ಸೋನು ಶ್ರೀನಿವಾಸ್​ ಗೌಡ

ಬಿಗ್​ ಬಾಸ್​ ಮನೆಯಲ್ಲಿ ಒಬ್ಬರು ಇನ್ನೊಬ್ಬರ ಕಾಲೆಳೆಯುವುದು ಸಹಜ. ಆದರೆ ಅದನ್ನು ಸೋನು ಗೌಡ ಪಾಸಿಟಿವ್​ ಆಗಿ ಸ್ವೀಕರಿಸಿಲ್ಲ. ತಮಗೆ ತಮಾಷೆ ಮಾಡಿದವರ ವಿರುದ್ಧ ಸೋನು ಗುಡುಗಿದ್ದಾರೆ. ಅದು ಕೂಡ ಸುದೀಪ್​ ಎದುರಲ್ಲೇ. ಇದನ್ನು ಗಮನಿಸಿದ ಸುದೀಪ್​ ಅವರು ಖಡಕ್​ ವಾರ್ನಿಂಗ್​ ನೀಡಿದ್ದಾರೆ.

‘ನೀವು ತಮಾಷೆ ಮಾಡಿದಾಗ ಬೇರೆಯವರು ನಗುತ್ತಾರೆ. ಆದರೆ ಬೇರೆಯವರು ನಿಮಗೆ ತಮಾಷೆ ಮಾಡಬಾರದು ಎಂದರೆ ಅದು ಸರಿಯಲ್ಲ. ಈ ಹಿಂದೆ ನೀವು ಬೇರೆಯವರಿಗೆ ತಮಾಷೆ ಮಾಡಿದಾಗ ಅವರು ಕೂಡ ಹೀಗೆಯೇ ರೇಗಾಡಬಹುದಿತ್ತಲ್ಲ. ಇನ್ಮುಂದೆ ನೀವು ಬೇರೆಯವರಿಗೆ ಲೇವಡಿ ಮಾಡುವಂತಿಲ್ಲ. ನೀವು ಹೀಗೆ ಮಾಡಿದ್ರೆ ಈ ಶೋ ನಡೆಯಲ್ಲ. ಯೆಸ್​ ಅಥವಾ ನೋ ರೌಂಡ್​ ಇಲ್ಲಿಗೆ ಮುಗಿಯಿತು’ ಎಂದು ಸುದೀಪ್​ ಹೇಳಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:44 pm, Sun, 14 August 22

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು