Kichcha Sudeep: ‘ಬಿಗ್​​ ಬಾಸ್​ ಒಟಿಟಿ’ ಮೊದಲ ವಾರದ ಪಂಚಾಯಿತಿ; ಖಡಕ್​ ಆಗಿ ರೆಡಿ ಆದ ಕಿಚ್ಚ ಸುದೀಪ್​

Bigg Boss Elimination: ಮೊದಲ ವಾರದಲ್ಲಿ ಸಾಕಷ್ಟು ಸಂಗತಿಗಳು ನಡೆದಿವೆ. ಒಂದಷ್ಟು ಎಮೋಷನಲ್​ ಘಟನೆಗಳಿಗೆ ಈ ವಾರ ಸಾಕ್ಷಿ ಆಗಿದೆ. ಜೊತೆಗೆ ಕಿರಿಕ್​ಗಳು ಸಂಭವಿಸಿವೆ.

Kichcha Sudeep: ‘ಬಿಗ್​​ ಬಾಸ್​ ಒಟಿಟಿ’ ಮೊದಲ ವಾರದ ಪಂಚಾಯಿತಿ; ಖಡಕ್​ ಆಗಿ ರೆಡಿ ಆದ ಕಿಚ್ಚ ಸುದೀಪ್​
ಕಿಚ್ಚ ಸುದೀಪ್
Follow us
TV9 Web
| Updated By: ಮದನ್​ ಕುಮಾರ್​

Updated on: Aug 13, 2022 | 5:40 PM

ಆಗಸ್ಟ್​ 6ರಂದು ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಶೋ ಆರಂಭ ಆಗಿತ್ತು. ಒಟ್ಟು 16 ಸ್ಪರ್ಧಿಗಳು ದೊಡ್ಮನೆಯಲ್ಲಿ ಒಂದು ವಾರ ಕಳೆದಿದ್ದಾರೆ. ಮೊದಲ ವಾರದ ಎಲಿಮಿನೇಷನ್​ನಲ್ಲಿ (Bigg Boss Elimination) ಯಾರು ಬಿಗ್​ ಬಾಸ್​ ಮನೆಯಿಂದ ಹೊರ ನಡೆಯುತ್ತಾರೆ ಎಂಬುದನ್ನು ತಿಳಿಯುವ ಸಮಯ ಬಂದಿದೆ. ಮೊದಲ ವಾರದ ಪಂಚಾಯಿತಿ ನಡೆಸಿಕೊಡಲು ಕಿಚ್ಚ ಸುದೀಪ್​ (Kichcha Sudeep) ಸಜ್ಜಾಗಿದ್ದಾರೆ. ಪ್ರತಿ ಬಾರಿ ಅವರು ವೀಕೆಂಡ್​ ಎಪಿಸೋಡ್​ನಲ್ಲಿ ಕಾಣಿಸಿಕೊಳ್ಳುವಾಗ ಅವರ ಸೂಟ್​ ಗಮನ ಸೆಳೆಯುತ್ತದೆ. ಇಂದು (ಆಗಸ್ಟ್​ 13) ಕೂಡ ಅವರು ಖಡಕ್​ ಆಗಿ ರೆಡಿಯಾಗಿ ಬಂದಿದ್ದಾರೆ. ಎಂದಿನ ಲವಲವಿಕೆಯಲ್ಲಿ ಪಂಚಾಯಿತಿ ನಡೆಸಿಕೊಟ್ಟಿದ್ದಾರೆ. ವೂಟ್​ ಸೆಲೆಕ್ಟ್​ ಮೂಲಕ ಸಂಜೆ 7 ಗಂಟೆಗೆ ಈ ಎಪಿಸೋಡ್​ ಪ್ರಸಾರ ಆಗಲಿದೆ.

ಕಿರುತೆರೆ, ಸಿನಿಮಾ, ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆದ ವ್ಯಕ್ತಿಗಳಿಗೆ ‘ಬಿಗ್​ ಬಾಸ್​ ಕನ್ನಡ ಒಟಿಟಿ’ಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಸೋನು ಶ್ರೀನಿವಾಸ್​ ಗೌಡ, ಸ್ಫೂರ್ತಿ ಗೌಡ, ರಾಕೇಶ್​ ಅಡಿಗ, ಆರ್ಯವರ್ಧನ್​ ಗುರೂಜಿ, ಸೋಮಣ್ಣ ಮಾಚಿಮಾಡ, ಸಾನ್ಯಾ ಅಯ್ಯರ್​, ಯಶ್ವಂತ್​, ನಂದಿನಿ, ರೂಪೇಶ್​ ಶೆಟ್ಟಿ, ಚೈತ್ರಾ ಹಳ್ಳಿಕೇರಿ, ಅರ್ಜುನ್ ರಮೇಶ್​, ಉದಯ್​ ಸೂರ್ಯ, ಜಯಶ್ರೀ ಆರಾಧ್ಯ, ಕಿರಣ್​ ಯೋಗೇಶ್ವರ್​, ಅಕ್ಷತಾ ಕುಕ್ಕಿ, ಲೋಕೇಶ್​ ಅವರು ಸ್ಪರ್ಧಿಸುತ್ತಿದ್ದಾರೆ.

ಇದನ್ನೂ ಓದಿ
Image
Bigg Boss: ‘ಬಿಗ್​ ಬಾಸ್’​ ಮನೆಗೆ ಹೊಗ್ತಾರಾ ಸ್ಟಾರ್​ ನಿರೂಪಕಿ? ಎಲ್ಲರಿಗಿಂತ ಹೆಚ್ಚು ಸಂಭಾವನೆ ಸಿಗೋದು ಇವರಿಗೆ
Image
Bigg Boss Kannada: ‘ಕಷ್ಟ ಹೇಳ್ಕೊಂಡು ಸಿಂಪಥಿ ಗಿಟ್ಟಿಸಬೇಡಿ’: ಬಿಗ್​ ಬಾಸ್​ ಸ್ಪರ್ಧಿಗೆ ಗುರೂಜಿ ಮಾತಿನ ಡಿಚ್ಚಿ
Image
Sonu Srinivas Gowda: ‘ಸುದೀಪ್​ ಇರುವ ವೇದಿಕೆಗೆ ಇದು ಗೌರವ ಅಲ್ಲ’: ಸೋನು ಶ್ರೀನಿವಾಸ್​ ಗೌಡ ಆಯ್ಕೆ ಆಗಿದ್ದಕ್ಕೆ ನೆಟ್ಟಿಗರು ಗರಂ
Image
Bigg Boss OTT Kannada: ಮೊದಲ ದಿನವೇ ಬಿಗ್​ ಬಾಸ್​ನಲ್ಲಿ ಕಣ್ಣೀರ ಕೋಡಿ; ನೋವು ತೋಡಿಕೊಂಡು ಗಳಗಳನೆ ಅತ್ತ ಸ್ಪರ್ಧಿಗಳು

ಆರು ವಾರಗಳ ಕಾಲ ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋ ನಡೆಯಲಿದೆ. ಮೊದಲ ವಾರದಲ್ಲಿ ಸಾಕಷ್ಟು ಸಂಗತಿಗಳು ನಡೆದಿವೆ. ಎಲ್ಲ ಸ್ಪರ್ಧಿಗಳು ತಮ್ಮ ಖಾಸಗಿ ಜೀವನದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಎಮೋಷನಲ್​ ಘಟನೆಗಳಿಗೆ ಈ ವಾರ ಸಾಕ್ಷಿ ಆಗಿದೆ. ಜೊತೆಗೆ ಒಂದಷ್ಟು ಕಿರಿಕ್​ಗಳು ಸಂಭವಿಸಿವೆ. ಎಂದಿನಂತೆ ನಾಮಿನೇಷನ್​ ಕೂಡ ನಡೆದಿದೆ. ಯಾರು ಎಲಿಮಿನೇಟ್​ ಆಗುತ್ತಾರೆ ಎಂಬ ಪ್ರಶ್ನೆಗೆ ಶೀಘ್ರವೇ ಉತ್ತರ ಸಿಗಲಿದೆ.

ಕಿಚ್ಚ ಸುದೀಪ್​ ಅವರು ಸಿನಿಮಾ ಮತ್ತು ಬಿಗ್​ ಬಾಸ್​ ಎರಡಕ್ಕೂ ಸಮಯ ಹೊಂದಿಸುತ್ತಿದ್ದಾರೆ. ಸಿನಿಮಾ ಕೆಲಸಗಳ ಸಲುವಾಗಿ ಅವರು ಎಷ್ಟೇ ಬ್ಯುಸಿ ಇದ್ದರೂ ಕೂಡ ಬಿಗ್​ ಬಾಸ್​ನ​ ವಾರಾಂತ್ಯದ ಶೂಟಿಂಗ್​ಗೆ ಎಂದಿಗೂ ಚಕ್ಕರ್​ ಹಾಕುವುದಿಲ್ಲ. ಎಲ್ಲೇ ಇದ್ದರೂ, ಎಷ್ಟೇ ಕಷ್ಟ ಆದರೂ ಬಂದು ಪಂಚಾಯಿತಿ ನಡೆಸಿಕೊಡುತ್ತಾರೆ. ಅವರನ್ನು ನೋಡಲು ಪ್ರತಿ ವಾರ ಅಭಿಮಾನಿಗಳು ಕಾದಿರುತ್ತಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ