Bigg Boss Kannada: ‘ಕಷ್ಟ ಹೇಳ್ಕೊಂಡು ಸಿಂಪಥಿ ಗಿಟ್ಟಿಸಬೇಡಿ’: ಬಿಗ್​ ಬಾಸ್​ ಸ್ಪರ್ಧಿಗೆ ಗುರೂಜಿ ಮಾತಿನ ಡಿಚ್ಚಿ

Aryavardhan Guruji | Bigg Boss OTT: ಬಿಗ್​ ಬಾಸ್​ ಮನೆಯಲ್ಲಿ ಈ ರೀತಿ ಸಂಗತಿಗಳು ಆಗಾಗ ಎದುರಾಗುತ್ತವೆ. ಎಮೋಷನ್​ಗಳನ್ನು ಇಟ್ಟುಕೊಂಡು ಆಟ ಆಡಲಾಗುತ್ತದೆ.

Bigg Boss Kannada: ‘ಕಷ್ಟ ಹೇಳ್ಕೊಂಡು ಸಿಂಪಥಿ ಗಿಟ್ಟಿಸಬೇಡಿ’: ಬಿಗ್​ ಬಾಸ್​ ಸ್ಪರ್ಧಿಗೆ ಗುರೂಜಿ ಮಾತಿನ ಡಿಚ್ಚಿ
ಆರ್ಯವರ್ಧನ್ ಗುರೂಜಿ
Follow us
TV9 Web
| Updated By: ಮದನ್​ ಕುಮಾರ್​

Updated on:Aug 07, 2022 | 10:16 PM

ಜನಪ್ರಿಯ ರಿಯಾಲಿಟಿ ಶೋ ‘ಬಿಗ್​ ಬಾಸ್​’ ಬಗ್ಗೆ ವೀಕ್ಷಕರಲ್ಲಿ ಮಿಶ್ರ ಪ್ರತಿಕ್ರಿಯೆ ಇದೆ. ಕೆಲವರಿಗೆ ಈ ಕಾರ್ಯಕ್ರಮ ಎಂದರೆ ಸಖತ್​ ಇಷ್ಟ. ಆದರೆ ಒಂದಷ್ಟು ಜನರು ಟೀಕೆ ಮಾಡುತ್ತಾರೆ. ಈ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳು ತಮ್ಮ ಜೀವನದ ಗೋಳು ತೋಡಿಕೊಂಡು ಜನರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಈ ಬಾರಿ ‘ಬಿಗ್​ ಬಾಸ್​ ಒಟಿಟಿ ಕನ್ನಡ’ (Bigg Boss OTT Kannada) ಕೂಡ ಅಂಥ ಕ್ಷಣಗಳಿಗೆ ಸಾಕ್ಷಿ ಆಗಿದೆ. 16 ಸ್ಪರ್ಧಿಗಳ ಪೈಕಿ ಬಹುತೇಕರು ತಮ್ಮ ಜೀವನದ ಕಷ್ಟದ ಕ್ಷಣಗಳನ್ನು ತೆರೆದಿಟ್ಟಿದ್ದಾರೆ. ಸಾನ್ಯಾ ಅಯ್ಯರ್​, ಉದಯ್​ ಸೂರ್ಯ, ಸೋಮಣ್ಣ ಮಾಚಿಮಾಡ, ಚೈತ್ರಾ ಹಳ್ಳಿಕೇರಿ, ಲೋಕೇಶ್​ (Lokesh) ಮುಂತಾದವರು ನೋವು ತೋಡಿಕೊಂಡಿದ್ದಾರೆ. ಇದನ್ನು ಆರ್ಯವರ್ಧನ್​ ಗುರೂಜಿ (Aryavardhan Guruji) ವಿರೋಧಿಸಿದ್ದಾರೆ. ಅದರಿಂದಾಗಿ ದೊಡ್ಮನೆಯಲ್ಲಿ ಮಾತಿನ ಚಕಮಕಿ ನಡೆದಿದೆ.

‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಮೂಲಕ ಫೇಮಸ್​ ಆಗಿದ್ದ ಲೋಕೇಶ್​ ಅವರು ಈಗ ‘ಬಿಗ್​​ ಬಾಸ್​ ಒಟಿಟಿ’ ಶೋಗೆ ಬಂದಿದ್ದಾರೆ. ಅವರ ಬಾಲ್ಯ ತುಂಬ ಕಷ್ಟಕರವಾಗಿತ್ತು. ಮನೆ ಬಿಟ್ಟು ಓಡಿ ಹೋಗಿದ್ದ ಅವರು ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಭಿಕ್ಷೆ ಸಿಗಲಿ ಎಂದು ಮೂಕನಂತೆ ನಟಿಸುತ್ತಿದ್ದರು. ನಂತರ ನಿರಾಶ್ರಿತ ಮಕ್ಕಳ ಕೇಂದ್ರ ಸೇರಿದ ಬಳಿಕ ಬದುಕು ಕಂಡುಕೊಂಡರು.

ಈ ಎಲ್ಲ ಸಂಗತಿಗಳನ್ನು ಲೋಕೇಶ್​ ಅವರು ಬಿಗ್​ ಬಾಸ್​ ಮನೆಯೊಳಗೆ ಹೇಳಲು ಆರಂಭಿಸಿದರು. ‘ಇದನ್ನೆಲ್ಲ ಹೇಳಿಕೊಂಡು ಸಿಂಪಥಿ ಪಡೆದುಕೊಳ್ಳಬೇಡಿ’ ಎಂದು ಆರ್ಯವರ್ಧನ್​ ಗುರೂಜಿ ಮಾತಿನಲ್ಲೇ ಡಿಚ್ಚಿ ಕೊಟ್ಟರು. ಈ ಮಾತು ಲೋಕೇಶ್​ಗೆ ಸರಿ ಎನಿಸಲಿಲ್ಲ. ‘ನಿಮ್ಮ ಪ್ರಕಾರ ಇಲ್ಲಿ ನಾವು ಹೇಳುವುದೆಲ್ಲ ವೋಟ್​ ಪಡೆಯೋದಕ್ಕೋಸ್ಕರನಾ?’ ಎಂದು ಮರುಪ್ರಶ್ನೆ ಹಾಕಿದರು.

ಇದನ್ನೂ ಓದಿ
Image
Sanya Iyer: ಅಪ್ಪನೇ ಮಗಳ ಖಾಸಗಿ ವಿಡಿಯೋ ರೆಕಾರ್ಡ್​ ಮಾಡಿದ್ದ; ಸಾನ್ಯಾ ಅಯ್ಯರ್​ ತಾಯಿ ಹೇಳಿದ ಕರಾಳ ಸತ್ಯಗಳು
Image
Sonu Srinivas Gowda: ಮೊದಲ ವಾರವೇ ಸೋನು ಗೌಡ ನಾಮಿನೇಟ್​; 8 ಸ್ಪರ್ಧಿಗಳ ಮೇಲಿದೆ ಎಲಿಮಿನೇಷನ್​ ತೂಗುಗತ್ತಿ
Image
Sonu Srinivas Gowda: ‘ಸುದೀಪ್​ ಇರುವ ವೇದಿಕೆಗೆ ಇದು ಗೌರವ ಅಲ್ಲ’: ಸೋನು ಶ್ರೀನಿವಾಸ್​ ಗೌಡ ಆಯ್ಕೆ ಆಗಿದ್ದಕ್ಕೆ ನೆಟ್ಟಿಗರು ಗರಂ
Image
Bigg Boss OTT Kannada: ಮೊದಲ ದಿನವೇ ಬಿಗ್​ ಬಾಸ್​ನಲ್ಲಿ ಕಣ್ಣೀರ ಕೋಡಿ; ನೋವು ತೋಡಿಕೊಂಡು ಗಳಗಳನೆ ಅತ್ತ ಸ್ಪರ್ಧಿಗಳು

ಬಿಗ್​ ಬಾಸ್​ ಮನೆಯಲ್ಲಿ ಈ ರೀತಿ ಸಂಗತಿಗಳು ಆಗಾಗ ಎದುರಾಗುತ್ತವೆ. ಎಮೋಷನ್​ಗಳನ್ನು ಇಟ್ಟುಕೊಂಡು ಆಟ ಆಡಲಾಗುತ್ತದೆ. ಈ ಕಾರಣದಿಂದ ಒಂದು ವರ್ಗದ ವೀಕ್ಷಕರು ವಿರೋಧ ವ್ಯಕ್ತಪಡಿಸುತ್ತಾರೆ. ಆದರೂ ಪ್ರತಿ ಸೀಸನ್​ನಲ್ಲಿ ಇದು ಮುಂದುವರಿಯುತ್ತಲೇ ಇದೆ. ಈ ಬಾರಿ ಶೋ ಆರಂಭದಲ್ಲೇ ಸ್ಪರ್ಧಿಗಳು ಕಣ್ಣೀರು ಹಾಕಿದ್ದಾರೆ.

ಮೊದಲ ವಾರ 8 ಮಂದಿ ನಾಮಿನೇಟ್​:

ಸೋನು ಶ್ರೀನಿವಾಸ್​ ಗೌಡ ಸೇರಿದಂತೆ ಒಟ್ಟು 8 ಜನರು ಮೊದಲ ವಾರವೇ ನಾಮಿನೇಟ್​ ಆಗಿದ್ದಾರೆ. ಸ್ಫೂರ್ತಿ ಗೌಡ, ಆರ್ಯವರ್ಧನ್​ ಗುರೂಜಿ, ಜಯಶ್ರೀ ಆರಾಧ್ಯಾ, ನಂದಿನಿ, ಜಶ್ವಂತ್​, ಕಿರಣ್​ ಯೋಗೇಶ್ವರ್​ ಮತ್ತು ಅಕ್ಷತಾ ಕುಕ್ಕಿ ಅವರ ಮೇಲೆ ಎಲಿಮಿನೇಷನ್​ ಕತ್ತಿ ತೂಗುತ್ತಿದೆ. ಈ ಪೈಕಿ ಯಾರು ಬಿಗ್​ ಬಾಸ್​ ಮನೆಯಿಂದ ಮೊದಲು ಹೊರಬರುತ್ತಾರೆ ಎಂದು ತಿಳಿಯಲು ವೀಕೆಂಡ್​ ಎಪಿಸೋಡ್​ ನೋಡಬೇಕು. ಇನ್ನುಳಿದ ಸ್ಪರ್ಧಿಗಳಾದ ಚೈತ್ರಾ ಹಳ್ಳಿಕೇರಿ, ಅರ್ಜುನ್​ ರಮೇಶ್​, ಲೋಕೇಶ್​, ಸೋಮಣ್ಣ ಮಾಚಿಮಾಡ, ರಾಕೇಶ್​ ಅಡಿಗ, ಸಾನ್ಯಾ ಐಯ್ಯರ್, ಉದಯ್​ ಸೂರ್ಯ, ರೂಪೇಶ್​ ಶೆಟ್ಟಿ ಸದ್ಯಕ್ಕೆ ಸೇಫ್​ ಆಗಿದ್ದಾರೆ. ನಾಮಿನೇಟ್​ ಆಗಿರುವವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಹೆಚ್ಚು ಶ್ರಮ ಹಾಕಬೇಕು. ಹಾಗಾಗಿ ಎಮೋಷನಲ್​ ಕಾರ್ಡ್​ ಬಳಸುತ್ತಿದ್ದಾರೆ ಎಂಬ ಅಭಿಪ್ರಾಯ ವೀಕ್ಷಕರ ವಲಯದಿಂದ ಕೇಳಿಬರುತ್ತಿದೆ.

Published On - 10:16 pm, Sun, 7 August 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ