AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kiran Yogeshwar: ಬಿಗ್​ ಬಾಸ್​ ಮನೆಯಿಂದ ಕಿರಣ್​ ಯೋಗೇಶ್ವರ್​ ಔಟ್​; ನಡೆಯಿತು ಮೊದಲ ಎಲಿಮಿನೇಷನ್​

Bigg Boss Elimination: ಈ ವಾರ ಸೋನು ಶ್ರೀನಿವಾಸ್​ ಗೌಡ ಸೇರಿದಂತೆ ಹಲವರು ನಾಮಿನೇಟ್​ ಆಗಿದ್ದರು. ಆದರೆ ಅಂತಿಮವಾಗಿ ಕಿರಣ್​ ಯೋಗೇಶ್ವರ್​ ಅವರು ಎಲಿಮಿನೇಟ್​ ಆಗಿದ್ದಾರೆ.

Kiran Yogeshwar: ಬಿಗ್​ ಬಾಸ್​ ಮನೆಯಿಂದ ಕಿರಣ್​ ಯೋಗೇಶ್ವರ್​ ಔಟ್​; ನಡೆಯಿತು ಮೊದಲ ಎಲಿಮಿನೇಷನ್​
ಕಿರಣ್ ಯೋಗೇಶ್ವರ್
TV9 Web
| Edited By: |

Updated on:Aug 13, 2022 | 8:56 PM

Share

ಭಾರಿ ಕೌತುಕ ಮೂಡಿಸಿದ ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT ) ಶೋನಲ್ಲಿ ಮೊದಲ ಎಲಿಮಿನೇಷನ್​ ನಡೆದಿದೆ. ಕಿರಣ್​ ಯೋಗೇಶ್ವರ್ (Kiran Yogeshwar) ಅವರು ಔಟ್​ ಆಗಿದ್ದಾರೆ. ಕಿರಣ್​ ಅವರಿಗೆ ಕನ್ನಡ ಸರಿಯಾಗಿ ಮಾತನಾಡಲು ಬರುವುದಿಲ್ಲ. ಅಲ್ಲದೇ ಇತರೆ ಸ್ಪರ್ಧಿಗಳ ಜೊತೆ ಹೊಂದಿಕೊಳ್ಳಲು ಕೂಡ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಅಂತಿಮವಾಗಿ ಅತಿ ಕಡಿಮೆ ವೋಟ್​ ಬಂದಿರುವುದು ಕೂಡ ಅವರಿಗೆ. ಆದ್ದರಿಂದ ಮೊದಲ ವಾರವೇ ಅವರ ಬಿಗ್​ ಬಾಸ್​ ಪಯಣ ಅಂತ್ಯವಾಗಿದೆ. ಇಂದು (ಆಗಸ್ಟ್​ 13) ನಡೆದ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್​ ಅವರು ಎಲಿಮಿನೇಷನ್ (Bigg Boss Elimination)​ ಘೋಷಿಸಿದರು.

‘ಒಂದೇ ವಾರದಲ್ಲಿ ನಾನು ಎಲ್ಲ ಜೊತೆ ಕ್ಲೋಸ್​ ಆದೆ. ನಿಮ್ಮೆಲ್ಲರನ್ನೂ ಮಿಸ್​ ಮಾಡಿಕೊಳ್ಳುತ್ತೇನೆ. ಈ ಮನೆಯನ್ನೂ ಮಿಸ್​ ಮಾಡಿಕೊಳ್ಳುತ್ತೇನೆ’ ಎಂದು ಹೇಳುವ ಮೂಲಕ ಕಿರಣ್​ ಯೋಗೇಶ್ವರ್​ ಅವರು ಎಲ್ಲರಿಗೂ ವಿದಾಯ ಹೇಳಿದ್ದಾರೆ. ಯಾವುದೇ ಬೇಸರ ಇಲ್ಲದೇ ನಗುನಗುತ್ತಲೇ ಅವರು ದೊಡ್ಮನೆಯಿಂದ ಹೊರಬಂದಿದ್ದಾರೆ.

ಸಾನ್ಯಾ ಅಯ್ಯರ್​, ರಾಕೇಶ್​ ಅಡಿಗ, ಆರ್ಯವರ್ಧನ್​ ಗುರೂಜಿ, ಸೋನು ಶ್ರೀನಿವಾಸ್​ ಗೌಡ, ಅರ್ಜುನ್​ ರಮೇಶ್​, ಉದಯ್​ ಸೂರ್ಯ, ಸ್ಫೂರ್ತಿ ಗೌಡ, ಜಯಶ್ರೀ ಆರಾಧ್ಯ, ಅಕ್ಷತಾ ಕುಕ್ಕಿ, ಕಿರಣ್​ ಯೋಗೇಶ್ವರ್​ ಅವರು ಈ ವಾರ ನಾಮಿನೇಟ್​ ಆಗಿದ್ದರು. ಅತಿ ಕಡಿಮೆ ವೋಟ್​ ಪಡೆದ ಕಿರಣ್​ ಅವರು ಬಿಗ್​ ಬಾಸ್​ ಮನೆಯಿಂದ ಹೊರಬಂದಿದ್ದಾರೆ.

ಇದನ್ನೂ ಓದಿ
Image
Bigg Boss: ‘ಬಿಗ್​ ಬಾಸ್’​ ಮನೆಗೆ ಹೊಗ್ತಾರಾ ಸ್ಟಾರ್​ ನಿರೂಪಕಿ? ಎಲ್ಲರಿಗಿಂತ ಹೆಚ್ಚು ಸಂಭಾವನೆ ಸಿಗೋದು ಇವರಿಗೆ
Image
Bigg Boss Kannada: ‘ಕಷ್ಟ ಹೇಳ್ಕೊಂಡು ಸಿಂಪಥಿ ಗಿಟ್ಟಿಸಬೇಡಿ’: ಬಿಗ್​ ಬಾಸ್​ ಸ್ಪರ್ಧಿಗೆ ಗುರೂಜಿ ಮಾತಿನ ಡಿಚ್ಚಿ
Image
Sonu Srinivas Gowda: ‘ಸುದೀಪ್​ ಇರುವ ವೇದಿಕೆಗೆ ಇದು ಗೌರವ ಅಲ್ಲ’: ಸೋನು ಶ್ರೀನಿವಾಸ್​ ಗೌಡ ಆಯ್ಕೆ ಆಗಿದ್ದಕ್ಕೆ ನೆಟ್ಟಿಗರು ಗರಂ
Image
Bigg Boss OTT Kannada: ಮೊದಲ ದಿನವೇ ಬಿಗ್​ ಬಾಸ್​ನಲ್ಲಿ ಕಣ್ಣೀರ ಕೋಡಿ; ನೋವು ತೋಡಿಕೊಂಡು ಗಳಗಳನೆ ಅತ್ತ ಸ್ಪರ್ಧಿಗಳು

ಇದನ್ನೂ ಓದಿ: Sonu Srinivas Gowda: ಸೋನು ಶ್ರೀನಿವಾಸ್​ ಗೌಡ ಫೋನ್​ ನಂಬರ್​ ಏನು? ಅದ್ರಲ್ಲೂ ಚಾಲಕಿತನ ತೋರಿದ ರೀಲ್ಸ್​ ಬೆಡಗಿ

ಮೊದಲ ವಾರದ ಎಲಿಮಿನೇಷನ್​ ಬಳಿಕ ಬಿಗ್​ ಬಾಸ್​ ಒಟಿಟಿ ಮನೆಯಲ್ಲಿ ಆಟ ಚುರುಕಾಗಿದೆ. ಇನ್ನುಳಿದ ಸ್ಪರ್ಧಿಗಳಿಗೆ ಟೆನ್ಷನ್​ ಹೆಚ್ಚಿದೆ. ಸೋನು ಗೌಡ ಅವರು ಈ ಶೋಗೆ ಆಯ್ಕೆ ಆಗಿರುವ ಬಗ್ಗೆ ಅನೇಕರಿಗೆ ತಕರಾರು ಇದೆ. ಕನ್ನಡ ಸರಿಯಾಗಿ ಬರುವುದಿಲ್ಲ ಎಂಬ ಕಾರಣಕ್ಕೆ ಜಶ್ವಂತ್​ ಬಗ್ಗೆಯೂ ಕೆಲವರಿಗೆ ಅಸಮಾಧಾನ ಇದೆ. ಈ ವಾರ ಅಕ್ಷತಾ ಕುಕ್ಕಿ ಅವರು ಕಳಪೆ ಹಣೆಪಟ್ಟಿ ಪಡೆದುಕೊಂಡಿದ್ದರು. ಅವರೆಲ್ಲರನ್ನೂ ಬಿಟ್ಟು ಕಿರಣ್​ ಯೋಗೇಶ್ವರ್​ ಅವರು ಔಟ್​ ಆಗಿರುವುದು ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:51 pm, Sat, 13 August 22

Follow Us
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ