‘ಬಿಗ್​ ಬಾಸ್​ ಒಟಿಟಿ’ ಮನೆಯೊಳಗೆ ನಿಜವಾಗಿ ಏನೆಲ್ಲ ನಡೆಯಿತು? ಎಲ್ಲವನ್ನೂ ವಿವರಿಸಿದ ಸ್ಫೂರ್ತಿ ಗೌಡ

‘ಬಿಗ್​ ಬಾಸ್​ ಒಟಿಟಿ’ ಮನೆಯೊಳಗೆ ನಿಜವಾಗಿ ಏನೆಲ್ಲ ನಡೆಯಿತು? ಎಲ್ಲವನ್ನೂ ವಿವರಿಸಿದ ಸ್ಫೂರ್ತಿ ಗೌಡ

TV9 Web
| Updated By: ಮದನ್​ ಕುಮಾರ್​

Updated on: Aug 22, 2022 | 2:39 PM

Kichcha Sudeep | Spoorthi Gowda: ಅನೇಕ ಪ್ರಶ್ನೆಗಳಿಗೆ ಸ್ಫೂರ್ತಿ ಗೌಡ ಉತ್ತರ ನೀಡಿದ್ದಾರೆ. ಇಷ್ಟು ದಿನಗಳ ಕಾಲ ತಮ್ಮ ಅನುಭವ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ.

ನಟಿ ಸ್ಫೂರ್ತಿ ಗೌಡ (Spoorthi Gowda) ಅವರು ಬಿಗ್​ ಬಾಸ್​ ಶೋನಿಂದ ಔಟ್​ ಆಗಿದ್ದಾರೆ. ಕಿಚ್ಚ ಸುದೀಪ್ (Kichcha Sudeep)​ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಸ್ಫೂರ್ತಿ ಪಯಣ ಎರಡೇ ವಾರಕ್ಕೆ ಮುಗಿದಿದೆ. ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಶೋನಿಂದ ಎಲಿಮಿನೇಟ್​ ಆಗಿರುವ ಅವರು ಮೊದಲ ಬಾರಿಗೆ ‘ಟಿವಿ9 ಕನ್ನಡ’ಕ್ಕೆ ಸಂದರ್ಶನ ನೀಡಿದ್ದಾರೆ. ದೊಡ್ಮನೆಯೊಳಗೆ ಯಾರ ವರ್ತನೆ ಯಾವ ರೀತಿ ಇತ್ತು? ನಿಜವಾಗಿ ಅಲ್ಲಿ ಏನೆಲ್ಲ ನಡೆಯಿತು? ತಾವು ಇಷ್ಟು ಬೇಗ ಔಟ್​ ಆಗಲು ಕಾರಣ ಏನು? ಈ ಎಲ್ಲ ಪ್ರಶ್ನೆಗಳಿಗೆ ಸ್ಫೂರ್ತಿ ಗೌಡ ಉತ್ತರ ನೀಡಿದ್ದಾರೆ. ಇಷ್ಟು ದಿನಗಳ ಕಾಲ ತಮ್ಮ ಅನುಭವ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ಈಗ 12 ಜನರ ನಡುವೆ ಪೈಪೋಟಿ ಮುಂದುವರಿದಿದೆ.