Sonu Srinivas Gowda: ‘ಸೋನು ಗೌಡ ಇದ್ದಲ್ಲಿ ಮಜಾ ಇರತ್ತೆ’; ಬಿಗ್​ ಬಾಸ್​ ಸ್ಪರ್ಧಿಗಳು ಹೀಗೆ ಹೇಳೋಕೆ ಕಾರಣ ಏನು?

Bigg Boss Kannada OTT: ‘ಸೋನು ಶ್ರೀನಿವಾಸ್​ ಗೌಡ ಮನರಂಜನೆಯ ಪ್ಯಾಕೇಜ್​ ಇದ್ದಂತೆ. ಅವಳ ರೀತಿ ಯಾರೂ ಇರೋಕೆ ಆಗಲ್ಲ’ ಎಂದು ಸ್ಪರ್ಧಿಗಳು ಹೇಳಿದ್ದಾರೆ.

Sonu Srinivas Gowda: ‘ಸೋನು ಗೌಡ ಇದ್ದಲ್ಲಿ ಮಜಾ ಇರತ್ತೆ’; ಬಿಗ್​ ಬಾಸ್​ ಸ್ಪರ್ಧಿಗಳು ಹೀಗೆ ಹೇಳೋಕೆ ಕಾರಣ ಏನು?
ಸೋನು ಶ್ರೀನಿವಾಸ್ ಗೌಡ
Follow us
TV9 Web
| Updated By: ಮದನ್​ ಕುಮಾರ್​

Updated on: Aug 21, 2022 | 10:11 PM

‘ವೂಟ್​ ಸೆಲೆಕ್ಟ್​’ ಮೂಲಕ ಪ್ರಸಾರ ಆಗುತ್ತಿರುವ ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಶೋ ಹಲವು ಕಾರಣಕ್ಕೆ ಸುದ್ದಿ ಆಗುತ್ತಿದೆ. ಎಲ್ಲ ಸ್ಪರ್ಧಿಗಳು ಒಂದೊಂದು ರೀತಿಯಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಒಬ್ಬೊಬ್ಬರ ತಂತ್ರಗಾರಿಕೆ ಒಂದೊಂದು ರೀತಿ ಇದೆ. ಸರಿ ತಪ್ಪು ಏನೇ ಇದ್ದರೂ ಅಂತಿಮವಾಗಿ ಜನರ ವೋಟ್​ ಮುಖ್ಯವಾಗುತ್ತದೆ. ವೈರಲ್​ ಹುಡುಗಿ ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಅವರು ಬಿಗ್​ ಬಾಸ್​ ಮನೆಯಲ್ಲಿ ಹವಾ ಮಾಡುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡಲಾಗುತ್ತಿದೆ ಎಂಬುದು ನಿಜ. ಆದರೆ ಮನೆಯೊಳಗೆ ಅವರ ಆಟದ ವೈಖರಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆ ಕಾರಣದಿಂದಲೇ ಅವರಿಗೆ ಜನರು ವೋಟ್​ ಮಾಡುತ್ತಿದ್ದಾರೆ. ಸೋನು ಶ್ರೀನಿವಾಸ್​ ಗೌಡ ಮಸ್ತ್​ ಮನರಂಜನೆ ನೀಡುತ್ತಾರೆ ಎಂಬುದನ್ನು ಬಿಗ್ ಬಾಸ್ (Bigg Boss Kannada)​ ಮನೆಯೊಳಗಿನ ಸ್ಪರ್ಧಿಗಳು ಕೂಡ ಒಪ್ಪಿಕೊಂಡಿದ್ದಾರೆ.

‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋ ಮುಗಿದ ಬಳಿಕ ಟಿವಿಯಲ್ಲಿ ‘ಬಿಗ್​ ಬಾಸ್​ ಕನ್ನಡ’ 9ನೇ ಸೀಸನ್​ ಆರಂಭ ಆಗಲಿದೆ. ಒಟಿಟಿಯಲ್ಲಿ ಇರುವ ಕೆಲವು ಸ್ಪರ್ಧಿಗಳು ಟಿವಿ ಆವೃತ್ತಿಗೂ ಎಂಟ್ರಿ ಪಡೆಯಲಿದ್ದಾರೆ. ಅಂಥ ಅರ್ಹತೆ ಯಾರಿಗೆಲ್ಲ ಇದೆ ಎಂದು ಈ ವಾರದ ಪಂಚಾಯಿತಿಯಲ್ಲಿ ಸುದೀಪ್​ ಪ್ರಶ್ನಿಸಿದರು. ಆಗ ಬಹುತೇಕರು ಸೋನು ಶ್ರೀನಿವಾಸ್​ ಗೌಡ ಹೆಸರನ್ನು ಹೇಳಿದರು.

‘ಸೋನು ಗೌಡ ಏನೂ ಮಾಡದಿದ್ದರೂ ಮನರಂಜನೆ ಸಿಗತ್ತೆ. ಅವಳು ಮಾತನಾಡಿದ್ರೇನೇ ಎಂಟರ್​ಟೇನ್ಮೆಂಟ್​ ಇರುತ್ತೆ’ ಎಂದು ರಾಕೇಶ್​ ಅಡಿಗ ಹೇಳಿದರು. ‘ಊಟದಲ್ಲಿನ ಗರಂ ಮಸಾಲಾ ಥರ ಸೋನು’ ಎಂದಿದ್ದಾರೆ ಸೋಮಣ್ಣ ಮಾಚಿಮಾಡ. ‘ಸೋನುಗೆ ಎಲ್ಲಿ ಏನು ಮಾತನಾಡಬೇಕು ಅಂತ ಗೊತ್ತಾಗಲ್ಲ. ಅದೇ ಅವರಿಗೆ ಪ್ಲಸ್​ ಆಗಿದೆ’ ಎಂಬುದು ಅಕ್ಷತಾ ಕುಕ್ಕಿ ಅಭಿಪ್ರಾಯ. ‘ಸೋನು ಆಲ್​ ರೌಂಡರ್​ ಇದ್ದಂತೆ. ಟಾಸ್ಕ್​ ಮಾಡೋಕೂ ಸೈ, ಎಂಟರ್​ಟೇನ್ಮೆಂಟ್​ ನೀಡೋಕೂ ಜೈ. ಅವಳು ಇದ್ದ ಕಡೆ ಮಜಾ ಮತ್ತು ಒಳ್ಳೆಯ ಮಸಾಲಾ ಇರತ್ತೆ’ ಎಂದು ಸಾನ್ಯಾ ಅಯ್ಯರ್​ ಹೇಳಿದ್ದಾರೆ.

ಇದನ್ನೂ ಓದಿ
Image
Sonu Srinivas Gowda: ರಾತ್ರಿ 2.15ಕ್ಕೆ ಸೋನು ಗೌಡ ಜತೆ ಮಾತಾಡಲು ಬಂದ ರಾಕೇಶ್; ವೈರಲ್​ ಹುಡುಗಿಯ ಪ್ರತಿಕ್ರಿಯೆ ಹೇಗಿತ್ತು?​
Image
Sonu Srinivas Gowda: ಮೂಡ್ ಇಲ್ಲ ಅಂದ್ರೆ ಸೋನು ಶ್ರೀನಿವಾಸ್​ ಗೌಡ 3 ದಿನ ಸ್ನಾನ ಮಾಡಲ್ಲ; ಎಲ್ಲರ ಎದುರು ಸತ್ಯ ಬಯಲು
Image
Sonu Srinivas Gowda: ‘ನೀವು ಹೀಗೆ ಮಾಡಿದ್ರೆ ಈ ಶೋ ನಡೆಯಲ್ಲ’: ಸುದೀಪ್​ ಕೋಪಕ್ಕೆ ಕಾರಣವಾಯ್ತು ಸೋನು ಗೌಡ ವರ್ತನೆ
Image
Sonu Srinivas Gowda: ‘ಸೋನು ಬಾತ್​ ರೂಮ್​ ಯಾಕೆ ಹುಡುಕಲಿಲ್ಲ?’: ವೇದಿಕೆ ಮೇಲೆ ಸುದೀಪ್​ ಕೇಳಿದ್ರು ನೇರ ಪ್ರಶ್ನೆ

‘ಸೋನು ಮನರಂಜನೆಯ ಪ್ಯಾಕೇಜ್​ ಇದ್ದಂತೆ. ಅವಳ ವ್ಯಕ್ತಿತ್ವವೇ ಹಾಗಿದೆ. ಅವಳ ರೀತಿ ಯಾರೂ ಇರೋಕೆ ಆಗಲ್ಲ’ ಎಂದು ನಂದು ಹೇಳಿದ್ದಾರೆ. ‘ಸೋನು ಒಳಗಡೆ ಒಂದು ಹೋರಾಟ ಇದೆ’ ಎಂಬುದು ಜಶ್ವಂತ್​ ಅನಿಸಿಕೆ. ಎಲ್ಲರಿಂದ ಈ ಪರಿ ಮೆಚ್ಚುಗೆ ಬಂದಿದ್ದಕ್ಕೆ ಸೋನು ಶ್ರೀನಿವಾಸ್​ ಗೌಡ ಹಿರಿ ಹಿರಿ ಹಿಗ್ಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ಪಕ್ಷದ ನಾಯಕರು ಒಂದೆಡೆ ಸೇರಿ ಊಟ ಮಾಡುವುದು ತಪ್ಪಲ್ಲ: ಸಿದ್ದರಾಮಯ್ಯ
ಪಕ್ಷದ ನಾಯಕರು ಒಂದೆಡೆ ಸೇರಿ ಊಟ ಮಾಡುವುದು ತಪ್ಪಲ್ಲ: ಸಿದ್ದರಾಮಯ್ಯ
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು
ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು
ಪಿಡಿಓಗಳು ಕುಬೇರರು ಅನ್ನೋದನ್ನು ಸಾಬೀತು ಮಾಡಿರುವ ಹಿರೇಮಠ
ಪಿಡಿಓಗಳು ಕುಬೇರರು ಅನ್ನೋದನ್ನು ಸಾಬೀತು ಮಾಡಿರುವ ಹಿರೇಮಠ
ಸಂಸತ್ತಿನ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ
ಸಂಸತ್ತಿನ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ