Sonu Srinivas Gowda: ‘ಹುಡುಗರನ್ನು ಮನೆಯಿಂದ ಹೊರಗೆ ಕಳಿಸಬೇಕು’; ಬಿಗ್ ಬಾಸ್ನಲ್ಲಿ ಸೋನು ಶ್ರೀನಿವಾಸ್ ಗೌಡ ಪ್ಲ್ಯಾನ್
Kichcha Sudeep | Bigg Boss Kannada OTT: ‘ಬಿಗ್ ಬಾಸ್ ಒಟಿಟಿ’ಯಲ್ಲಿ ಎರಡು ವಾರಗಳು ಕಳೆದಿವೆ. ಇನ್ನುಳಿದಿರುವುದು ನಾಲ್ಕು ವಾರಗಳು ಮಾತ್ರ. ಪ್ರತಿ ವಾರವೂ ಸ್ಪರ್ಧೆ ಕಠಿಣವಾಗುತ್ತಿದೆ.
ಜನಪ್ರಿಯ ‘ಬಿಗ್ ಬಾಸ್ ಒಟಿಟಿ’ (Bigg Boss Kannada OTT) ಶೋನಲ್ಲಿ ಹಲವು ಟ್ವಿಸ್ಟ್ಗಳು ಎದುರಾಗುತ್ತಿವೆ. ರೀಲ್ಸ್ ಬೆಡಗಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ಬೇರೆ ಬೇರೆ ರೀತಿಯಲ್ಲಿ ಹೈಲೈಟ್ ಆಗುತ್ತಿದ್ದಾರೆ. ಪ್ರತಿ ವಾರ ಅವರು ನಾಮಿನೇಟ್ ಆಗುತ್ತಿದ್ದರೂ ಕೂಡ ವೀಕ್ಷಕರಿಂದ ಅಗತ್ಯ ವೋಟ್ ಪಡೆಯುವ ಮೂಲಕ ಸೇಫ್ ಆಗುತ್ತಿದ್ದಾರೆ. ಎಲ್ಲರ ಜೊತೆಯಲ್ಲೂ ಅವರು ಬೆರೆಯುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ನೇರ-ನಡೆನುಡಿಯ ಕಾರಣದಿಂದಲೂ ಸೋನು ಗೌಡ ಸದ್ದು ಮಾಡುತ್ತಿದ್ದಾರೆ. ಎರಡು ವಾರಗಳ ಕಾಲ ನಡೆದ ನಾಮಿನೇಷನ್ ಮತ್ತು ಎಲಿಮಿನೇಷನ್ (Bigg Boss Elimination) ಬಗ್ಗೆ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ನಾವು ಈ ಮನೆಯಿಂದ ಹುಡುಗರನ್ನು ಹೊರಗೆ ಹಾಕಬೇಕು’ ಎಂದು ಅವರು ಹೇಳಿದ್ದಾರೆ. ಆ ರೀತಿ ಅವರು ಹೇಳಿದ್ದಕ್ಕೂ ಕಾರಣ ಇದೆ.
ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಚೆನ್ನಾಗಿ ಟಾಸ್ಕ್ ಮಾಡುತ್ತಿರುವುದು ಹುಡುಗಿಯರು. ಆದರೆ ಹೆಚ್ಚು ನಾಮಿನೇಟ್ ಆಗುತ್ತಿರುವುದು ಕೂಡ ಹುಡುಗಿಯರು. ಅಲ್ಲದೇ ಈವರೆಗೆ ಕಡಿಮೆ ವೋಟ್ ಪಡೆದು ಎಲಿಮಿನೇಟ್ ಆದ ಇಬ್ಬರು ಕೂಡ ಹುಡುಗಿಯರು. ಈ ವಿಚಾರವನ್ನು ಮನೆಯೊಳಗೆ ಪ್ರಸ್ತಾಪಿಸಿರುವ ಸೋನು ಗೌಡ ಅವರು, ಮುಂದಿನ ಬಾರಿ ಹುಡುಗರನ್ನು ಮನೆಯಿಂದ ಹೊರಹಾಕಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಕೇಶ್ ಅಡಿಗ ಮತ್ತು ಸೋನು ಶ್ರೀನಿವಾಸ್ ಗೌಡ ನಡುವೆ ಆಪ್ತತೆ ಬೆಳೆಯುತ್ತಿದೆ. ಒಬ್ಬರಿಗೊಬ್ಬರು ಸಲಹೆ-ಸಹಕಾರ ನೀಡುತ್ತ ಮುಂದೆ ಸಾಗುತ್ತಿದ್ದಾರೆ. ಸೋನು ಶ್ರೀನಿವಾಸ್ ಗೌಡ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಟ್ರೋಲ್ ಮಾಡುತ್ತಿದ್ದಾರೆ. ಬಗೆಬಗೆಯ ಮೀಮ್ಸ್ ಹರಿದಾಡುತ್ತಿವೆ. ಆದರೂ ಕೂಡ ಅವರು ‘ಬಿಗ್ ಬಾಸ್ ಒಟಿಟಿ’ ಆಟದಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ.
ಈಗ ‘ಬಿಗ್ ಬಾಸ್ ಒಟಿಟಿ’ಯಲ್ಲಿ ಎರಡು ವಾರಗಳು ಕಳೆದಿವೆ. ಇನ್ನುಳಿದಿರುವುದು ನಾಲ್ಕು ವಾರಗಳು ಮಾತ್ರ. ಪ್ರತಿ ವಾರವೂ ಸ್ಪರ್ಧೆ ಕಠಿಣವಾಗುತ್ತಿದೆ. ಈಗಾಗಲೇ ಲೋಕೇಶ್, ಅರ್ಜುನ್ ರಮೇಶ್, ಕಿರಣ್ ಯೋಗೇಶ್ವರ್, ಸ್ಫೂರ್ತಿ ಗೌಡ ಮನೆಯಿಂದ ಹೊರಹೋಗಿದ್ದಾರೆ. ಸದ್ಯ 12 ಜನರ ನಡುವೆ ಪೈಪೋಟಿ ನಡೆಯುತ್ತಿದೆ.
ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಮನೆಗೆ ಬರುವುದಕ್ಕಿಂತ ಮುಂಚೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫೇಮಸ್ ಆಗಿದ್ದರು. ಅದರ ಜೊತೆಗೆ ಅವರ ಖಾಸಗಿ ವಿಡಿಯೋ ವೈರಲ್ ಆಗಿದ್ದರಿಂದ ಅವರು ಸಿಕ್ಕಾಪಟ್ಟೆ ಟ್ರೋಲ್ಗೆ ಒಳಗಾಗಿದ್ದರು. ಆ ಬಗ್ಗೆ ದೊಡ್ಮನೆಯಲ್ಲಿ ಅವರು ಆರಂಭದಲ್ಲೇ ಸ್ಪಷ್ಟನೆ ನೀಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:56 pm, Sun, 21 August 22