‘ಬಿಗ್ ಬಾಸ್’ ಮನೆಯಿಂದ ಸ್ಫೂರ್ತಿ ಗೌಡ ಔಟ್​; ಎಲಿಮಿನೇಷನ್​ಗೆ ಕಾರಣವಾಯ್ತು ಆ ಒಂದು ವಿಚಾರ

ಮೊದಲು ರಾಕೇಶ್ ಸೇಫ್ ಎಂದು ಸುದೀಪ್ ಘೋಷಿಸಿದರು. ನಂತರ ಆರ್ಯವರ್ಧನ್, ಸಾನ್ಯಾ, ಸೋಮಣ್ಣ, ನಂದಿನಿ, ಸೋನು ಶ್ರೀನಿವಾಸ್ ಗೌಡ, ಜಯಶ್ರೀ, ಅಕ್ಷತಾ ಸೇಫ್ ಎಂದು ಸುದೀಪ್ ಘೋಷಿಸಿದರು.

‘ಬಿಗ್ ಬಾಸ್’ ಮನೆಯಿಂದ ಸ್ಫೂರ್ತಿ ಗೌಡ ಔಟ್​; ಎಲಿಮಿನೇಷನ್​ಗೆ ಕಾರಣವಾಯ್ತು ಆ ಒಂದು ವಿಚಾರ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 20, 2022 | 8:43 PM

‘ಬಿಗ್ ಬಾಸ್ ಒಟಿಟಿ’ (Bigg Boss OTT Kannada) ಎರಡನೇ ವಾರ ಪೂರ್ಣಗೊಳ್ಳುತ್ತಾ ಬಂದಿದೆ. ವೀಕೆಂಡ್ ಎಪಿಸೋಡ್​ನಲ್ಲಿ ಒಬ್ಬರನ್ನು ಎಲಿಮಿನೇಟ್ ಮಾಡಲಾಗಿದೆ. ಈ ವಾರ ಸ್ಫೂರ್ತಿ ಗೌಡ ಎಲಿಮಿನೇಷನ್ ಆಗಿದ್ದಾರೆ. ಒಟ್ಟು 9 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ ಇತ್ತು. ಆ ಪೈಕಿ ಸ್ಫೂರ್ತಿ ಗೌಡ ಹೊರ ಹೋಗಿದ್ದಾರೆ. ಅತಿ ಕಡಿಮೆ ವೋಟ್ ಪಡೆದು ಸ್ಫೂರ್ತಿ ಗೌಡ ಎಲಿಮಿನೇಟ್ ಆಗಿದ್ದಾರೆ. ಈ ಮೂಲಕ ಎರಡನೇ ಎಲಿಮಿನೇಷನ್ ಆಗಿದೆ.

ಈ ವಾರ ಸೋನು ಗೌಡ, ನಂದು, ಅಕ್ಷತಾ, ಸ್ಫೂರ್ತಿ ಗೌಡ, ಸಾನ್ಯಾ ಅಯ್ಯರ್, ಜಯಶ್ರೀ, ಸೋಮಣ್ಣ, ರಾಕೇಶ್​ ಅಡಿಗ, ಆರ್ಯವರ್ಧನ್ ಗುರೂಜಿ ಮೇಲೆ ನಾಮಿನೇಷನ್​ ತೂಗುಗತ್ತಿ ಇತ್ತು. ಎಲ್ಲರೂ ಉತ್ತಮವಾಗಿ ಗೇಮ್ ಆಡಿದ್ದಾರೆ. ಆದಾಗ್ಯೂ ಸ್ಫೂರ್ತಿ ಗೌಡ ನೀಡಿದ ಪರ್ಫಾರ್ಮೆನ್ಸ್ ಜನರಿಗೆ ಸಾಕಾಗಿಲ್ಲ.

ಮೊದಲು ರಾಕೇಶ್ ಸೇಫ್ ಎಂದು ಸುದೀಪ್ ಘೋಷಿಸಿದರು. ನಂತರ ಆರ್ಯವರ್ಧನ್, ಸಾನ್ಯಾ, ಸೋಮಣ್ಣ, ನಂದಿನಿ, ಸೋನು ಶ್ರೀನಿವಾಸ್ ಗೌಡ, ಜಯಶ್ರೀ, ಅಕ್ಷತಾ ಸೇಫ್ ಎಂದು ಸುದೀಪ್ ಘೋಷಿಸಿದರು. ಸ್ಫೂರ್ತಿ ಹೊರ ಹೋಗುತ್ತಿರುವ ಬಗ್ಗೆ ಅವರು ಮಾಹಿತಿ ಹಂಚಿಕೊಂಡರು.

ಸ್ಫೂರ್ತಿ ಗೌಡ ಅವರು ಈ ವಾರದ ಟಾಸ್ಕ್​ನಲ್ಲಿ ಉತ್ತಮ ಪ್ರದರ್ಶನ ತೋರಿಸಿಲ್ಲ. ಚಿಕ್ಕ ವಿಚಾರಕ್ಕೆ ದೊಡ್ಡದಾಗಿ ಕೂಗಾಡಿದ್ದರು. ಅಲ್ಲದೆ, ‘ಬಿಗ್ ಬಾಸ್ ಮನೆಯಲ್ಲಿ ತಮಗೆ ಉಳಿದುಕೊಳ್ಳಲು ಆಸಕ್ತಿ ಇಲ್ಲ’ ಎಂಬುದನ್ನು ಪದೇಪದೇ ಹೇಳಿದ್ದರು. ಈ ವಿಚಾರಕ್ಕೆ ಅವರಿಗೆ ಕಡಿಮೆ ವೋಟ್ ಬಿದ್ದಿದೆ.

ಇದನ್ನೂ ಓದಿ: ನಾಮಿನೇಟ್ ಆಗದೇ ಇದ್ದರೂ ಬಿಗ್ ಬಾಸ್ ಮನೆಯಿಂದ ಅರ್ಜುನ್ ಔಟ್​; ಏನಿದು ಟ್ವಿಸ್ಟ್?

ಬಿಗ್ ಬಾಸ್ ಮನೆಯಲ್ಲಿ ಎರಡೇ ವಾರಕ್ಕೆ ನಾಲ್ಕು ಜನರು ಎಲಿಮಿನೇಟ್ ಆಗಿದ್ದಾರೆ. ಮೊದಲ ವಾರದಲ್ಲಿ ಕಿರಣ್ ಅವರು ಕಡಿಮೆ ವೋಟ್ ಪಡೆದು ಎಲಿಮಿನೇಟ್ ಆದರೆ, ಲೋಕೇಶ್ ಗಾಯಗೊಂಡು ಹೊರ ನಡೆದರು. ಈ ವಾರ ಗಾಯದ ಸಮಸ್ಯೆಯಿಂದ ಅರ್ಜುನ್ ರಮೇಶ್ ಹೊರ ಹೋದರೆ, ಸ್ಫೂರ್ತಿ ಕಡಿಮೆ ಮತ ಪಡೆದು ಔಟ್ ಆಗಿದ್ದಾರೆ.

Published On - 8:37 pm, Sat, 20 August 22

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ