AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಲೀನ್ ಶೇವ್ ಲುಕ್​ನಲ್ಲಿ ‘ಬಿಗ್ ಬಾಸ್’ ವೇದಿಕೆ ಏರಿದ ಸುದೀಪ್; ಇದಕ್ಕಿದೆ ಪ್ರಮುಖ ಕಾರಣ

ಕಿಚ್ಚನ ಲುಕ್​ಅನ್ನು ಕಲರ್ಸ್ ಸೂಪರ್ ಟಿವಿ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಕ್ಲೀನ್ ಶೇವ್ ಲುಕ್​ನಲ್ಲಿ ‘ಬಿಗ್ ಬಾಸ್’ ವೇದಿಕೆ ಏರಿದ ಸುದೀಪ್; ಇದಕ್ಕಿದೆ ಪ್ರಮುಖ ಕಾರಣ
sudeep
TV9 Web
| Edited By: |

Updated on: Aug 20, 2022 | 3:55 PM

Share

ನಟ ಕಿಚ್ಚ ಸುದೀಪ್ (Kichcha Sudeep) ಅವರು ಆರಂಭದಿಂದಲೂ ಕನ್ನಡದಲ್ಲಿ ಬಿಗ್ ಬಾಸ್ ನಡೆಸಿಕೊಡುತ್ತಾ ಬರುತ್ತಿದ್ದಾರೆ. ಅವರ ಖಡಕ್ ನಿರೂಪಣೆ ವೀಕ್ಷಕರಿಗೆ ಸಖತ್ ಇಷ್ಟವಾಗುತ್ತದೆ. ಈ ಬಾರಿ ‘ಬಿಗ್ ಬಾಸ್ ಒಟಿಟಿ’ಯ (Bigg Boss OTT) ನಿರೂಪಣೆ ಜವಾಬ್ದಾರಿ ಸುದೀಪ್ ಹೆಗಲು ಏರಿದೆ. ಪ್ರತಿವಾರದ ನಿರೂಪಣೆ ಜತೆಗೆ ಸುದೀಪ್ ಲುಕ್, ಸುದೀಪ್ ಧರಿಸುವ ಬಟ್ಟೆ ಎಲ್ಲವೂ ಹೈಲೈಟ್ ಆಗುತ್ತದೆ. ಈ ಬಾರಿ ಸುದೀಪ್ ಅವರು ಹೊಸ ಲುಕ್​ನಲ್ಲಿ ಬಿಗ್ ಬಾಸ್ ವೇದಿಕೆ ಏರಿದ್ದಾರೆ. ಅವರ ಹೊಸ ಲುಕ್​ಅನ್ನು ವಾಹಿನಿಯವರು ರಿವೀಲ್ ಮಾಡಿದ್ದಾರೆ. ಕ್ಲೀನ್​ ಶೇವ್​ನಲ್ಲಿ ಸುದೀಪ್ ಮಿಂಚಿದ್ದಾರೆ. ಅವರ ಹೊಸ ಗೆಟಪ್ ಕಂಡು ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಸುದೀಪ್​ಗೆ ಇಷ್ಟು ದಿನ ಗಡ್ಡ ಇತ್ತು. ‘ವಿಕ್ರಾಂತ್ ರೋಣ’ ಸಿನಿಮಾದಲ್ಲೂ ಅವರಿಗೆ ಅದೇ ರೀತಿಯ ಲುಕ್ ಇತ್ತು. ಅದನ್ನೇ ಸುದೀಪ್ ಮುಂದುವರಿಸಿದ್ದರು. ಈಗ ಅವರು ಏಕಾಏಕಿ ಕ್ಲೀನ್​ ಶೇವ್ ಮಾಡಿಸಿದ್ದಾರೆ. ಕಿಚ್ಚನ ಹೊಸ ಗೆಟಪ್ ಫ್ಯಾನ್ಸ್​ಗೆ ಸಖತ್ ಖುಷಿ ನೀಡಿದೆ.

ಸುದೀಪ್ ಅವರು ಇಷ್ಟು ದಿನ ‘ವಿಕ್ರಾಂತ್ ರೋಣ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಇದ್ದರು. ಹಲವು ನಗರಗಳಿಗೆ ತೆರಳಿ ಸಿನಿಮಾ ಪ್ರಚಾರ ಮಾಡಿದ್ದರು. ಈ ಕಾರಣಕ್ಕೆ ಅವರು ‘ಕಬ್ಜ’ ಚಿತ್ರದ ಶೂಟಿಂಗ್​ನಲ್ಲಿ ಭಾಗಿ ಆಗಲು ಸಾಧ್ಯವಾಗಿರಲಿಲ್ಲ. ಈಗ ‘ವಿಕ್ರಾಂತ್ ರೋಣ’ ತೆರೆಕಂಡು ಯಶಸ್ಸು ಗಳಿಸಿದೆ. ಈ ಕಾರಣದಿಂದ ಅವರು ‘ಕಬ್ಜ’ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕಾಗಿ ಸುದೀಪ್ ಕ್ಲೀನ್ ಶೇವ್ ಅವತಾರ ತಾಳಿದ್ದಾರೆ ಎನ್ನಲಾಗುತ್ತಿದೆ. ಉಪೇಂದ್ರ ನಟನೆಯ ಈ ಚಿತ್ರ ರೆಟ್ರೋ ಶೈಲಿಯಲ್ಲಿ ಮೂಡಿ ಬರುತ್ತಿದೆ. ಈ ಕಾರಣದಿಂದಲೂ ಸಿನಿಮಾ ಕುತೂಹಲ ಹುಟ್ಟಿಸಿದೆ.

ಇದನ್ನೂ ಓದಿ: ಮೊಬೈಲ್ ನಂಬರ್ ಆಗಾಗ ಬದಲಿಸೋಕೆ ನನಗೆ ಸುದೀಪ್​​ ಸ್ಫೂರ್ತಿ ಎಂದ ರಿಷಬ್ ಶೆಟ್ಟಿ

ಸದ್ಯ ಕಿಚ್ಚನ ಲುಕ್​ಅನ್ನು ಕಲರ್ಸ್ ಸೂಪರ್ ಟಿವಿ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಮೊದಲಿಗಿಂತ ಈಗ ನೀವು ಮತ್ತಷ್ಟು ಯಂಗ್ ಆಗಿದ್ದೀರಿ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ‘ಲವರ್ ಬಾಯ್ ಕಿಚ್ಚ’ ಎಂದು ಕಮೆಂಟ್ ಮಾಡಿದ್ದಾರೆ. ಒ  ಟ್ಟಿನಲ್ಲಿ ಅವರ ಹೊಸ ಲುಕ್ ಫ್ಯಾನ್ಸ್​ಗೆ ಸಖತ್ ಇಷ್ಟವಾಗಿದೆ.

Follow Us
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಟ್ರಾಲಿ ಬ್ಯಾಗ್​ನಲ್ಲಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು ವಶಕ್ಕೆ 
ಟ್ರಾಲಿ ಬ್ಯಾಗ್​ನಲ್ಲಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು ವಶಕ್ಕೆ 
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಕೆಎನ್ ರಾಜಣ್ಣ ನಡೆ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಕೆಎನ್ ರಾಜಣ್ಣ ನಡೆ
ಸಿಎಂ ಡಿಕೆಶಿ ಆರೋಗ್ಯದಲ್ಲಿ ಕೊಂಚ ಏರುಪೇರು: ವೈದ್ಯರು ದೌಡು, ಏನಾಯ್ತು?
ಸಿಎಂ ಡಿಕೆಶಿ ಆರೋಗ್ಯದಲ್ಲಿ ಕೊಂಚ ಏರುಪೇರು: ವೈದ್ಯರು ದೌಡು, ಏನಾಯ್ತು?
ಬಿಗ್​​ಬಾಸ್​: ತಾಂಡವ್ ‘ಖಾಲಿ ಪಲಾವ್, ಗಗನ್ ‘ಕೊಳೆತ ಟೊಮ್ಯಾಟೊ’
ಬಿಗ್​​ಬಾಸ್​: ತಾಂಡವ್ ‘ಖಾಲಿ ಪಲಾವ್, ಗಗನ್ ‘ಕೊಳೆತ ಟೊಮ್ಯಾಟೊ’
ರಸ್ತೆ ಕಾಮಗಾರಿ ಗುದ್ದಲಿ ಪೂಜೆ ವೇಳೆ MLC-MLA ನಡುವೆ ಮಾತಿನ ಚಕಮಕಿ
ರಸ್ತೆ ಕಾಮಗಾರಿ ಗುದ್ದಲಿ ಪೂಜೆ ವೇಳೆ MLC-MLA ನಡುವೆ ಮಾತಿನ ಚಕಮಕಿ
ಆ್ಯಕ್ಟಿವಿಟಿ ಮಾಡದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕನಿಂದ ಅಮಾನವೀಯ ಹಲ್ಲೆ
ಆ್ಯಕ್ಟಿವಿಟಿ ಮಾಡದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕನಿಂದ ಅಮಾನವೀಯ ಹಲ್ಲೆ
ಆರೋಪಗಳೆಲ್ಲ ಸುಳ್ಳು, ಹಣ ಕೂಡ ಅವರು ಕೊಟ್ಟದ್ದಲ್ಲ: ಪ್ರಜ್ವಲ್ ದೇವರಾಜ್
ಆರೋಪಗಳೆಲ್ಲ ಸುಳ್ಳು, ಹಣ ಕೂಡ ಅವರು ಕೊಟ್ಟದ್ದಲ್ಲ: ಪ್ರಜ್ವಲ್ ದೇವರಾಜ್
ಡಿಕೆಶಿ ಸರ್ಕಾರಕ್ಕೆ 100 ದಿನ: ದಿಲ್ಲಿಗೆ ಬರುವಂತೆ ಹೈಕಮಾಂಡ್ ಆಹ್ವಾನ
ಡಿಕೆಶಿ ಸರ್ಕಾರಕ್ಕೆ 100 ದಿನ: ದಿಲ್ಲಿಗೆ ಬರುವಂತೆ ಹೈಕಮಾಂಡ್ ಆಹ್ವಾನ