‘ಮುಂದಿನ ವಾರ ಸೋನು ಗೌಡ, ಉದಯ್ ಮನೆಯಿಂದ ಹೊರಹೋಗ್ತಾರೆ’; ಸುದೀಪ್ ಹೀಗೆ ಹೇಳಿದ್ದೇಕೆ?

ಬಿಗ್ ಬಾಸ್​ನಲ್ಲಿ ‘ಸೂಪರ್ ಸಂಡೆ ವಿತ್ ಸುದೀಪ​’ ಎಪಿಸೋಡ್ ಭಾನುವಾರ ನಡೆದಿದೆ. ಈ ವೇಳೆ ಸುದೀಪ್ ಎಲ್ಲರಿಗೂ ಒಂದು ಪ್ರಶ್ನೆ ಕೇಳಿದರು.

‘ಮುಂದಿನ ವಾರ ಸೋನು ಗೌಡ, ಉದಯ್ ಮನೆಯಿಂದ ಹೊರಹೋಗ್ತಾರೆ’; ಸುದೀಪ್ ಹೀಗೆ ಹೇಳಿದ್ದೇಕೆ?
ಸೋನು-ಸುದೀಪ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 22, 2022 | 2:41 PM

‘ಬಿಗ್ ಬಾಸ್ ಒಟಿಟಿ’ (Bigg Boss OTT) ಎರಡು ವಾರಗಳನ್ನು ಪೂರೈಸಿದೆ. ಇನ್ನು ಒಂದು ತಿಂಗಳ ಕಾಲ ಈ ರಿಯಾಲಿಟಿ ಶೋ ನಡೆಯಲಿದೆ. ಆ ಬಳಿಕ ‘ಬಿಗ್ ಬಾಸ್​ ಕನ್ನಡ ಸೀಸನ್ 9’ ಆರಂಭ ಆಗಲಿದೆ. ಒಟಿಟಿಯಿಂದ ಟಿವಿ ಸೀಸನ್​ಗೆ ಯಾರು ಯಾರು ಹೋಗುತ್ತಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ಸದ್ಯ ವಾರಕ್ಕೆ ಇಬ್ಬರಂತೆ ಮನೆಯಿಂದ ಎಲಿಮಿನೇಟ್ ಆಗುತ್ತಿದ್ದಾರೆ. ಈ ವಾರ ಯಾರು ಮನೆಯಿಂದ ಹೊರ ಹೋಗಲಿದ್ದಾರೆ ಎಂಬ ಕುತೂಹಲ ಮೂಡಿದೆ. ಅದಕ್ಕೂ ಮೊದಲೇ ಕಿಚ್ಚ ಸುದೀಪ್ (Kichcha Sudeep) ಅವರು ಅಚ್ಚರಿಯ ಘೋಷಣೆ ಮಾಡಿದ್ದಾರೆ. ಒಳ್ಳೆಯ ಪರ್ಫಾರ್ಮೆನ್ಸ್​ ನೀಡುತ್ತಿರುವ ಸೋನು ಮನೆಯಿಂದ ಹೊರ ಹೋಗಲಿದ್ದಾರೆ ಎಂದು ಘೋಷಣೆ ಮಾಡಿದ್ದರೆ! ಅವರು ಹೀಗೆ ಹೇಳುವುದಕ್ಕೂ ಒಂದು ಕಾರಣ ಇದೆ.

ಬಿಗ್ ಬಾಸ್​ನಲ್ಲಿ ‘ಸೂಪರ್ ಸಂಡೆ ವಿತ್ ಸುದೀಪ​’ ಎಪಿಸೋಡ್ ಭಾನುವಾರ ನಡೆದಿದೆ. ಈ ವೇಳೆ ಸುದೀಪ್ ಎಲ್ಲರಿಗೂ ಒಂದು ಪ್ರಶ್ನೆ ಕೇಳಿದರು. ಒಂದು ತಿಂಗಳ ನಂತರ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಆರಂಭ ಆಗಲಿದೆ. ಈಗ ಇರುವ ಸ್ಪರ್ಧಿಗಳ ಪೈಕಿ ಯಾರು ಟಿವಿ ಸೀಸನ್​ಗೆ ಆಯ್ಕೆ ಆಗುತ್ತಾರೆ ಎಂದು ಸ್ಪರ್ಧಿಗಳ ಎದುರು ಸುದೀಪ್ ಪ್ರಶ್ನೆ ಇಟ್ಟರು. ಇದಕ್ಕೆ ಎಲ್ಲಾ ಸ್ಪರ್ಧಿಗಳು ತಮ್ಮ ತಮ್ಮ ಆಯ್ಕೆಯನ್ನು ಹೇಳಿದರು. ಆರ್ಯವರ್ಧನ್ ಗುರೂಜಿ ಕೂಡ ತಮ್ಮ ಆಯ್ಕೆ ಏನು ಎಂಬುದನ್ನು ತಿಳಿಸಿದರು.

ಇದನ್ನೂ ಓದಿ
Image
Sonu Srinivas Gowda: ರಾತ್ರಿ 2.15ಕ್ಕೆ ಸೋನು ಗೌಡ ಜತೆ ಮಾತಾಡಲು ಬಂದ ರಾಕೇಶ್; ವೈರಲ್​ ಹುಡುಗಿಯ ಪ್ರತಿಕ್ರಿಯೆ ಹೇಗಿತ್ತು?​
Image
Sonu Srinivas Gowda: ಮೂಡ್ ಇಲ್ಲ ಅಂದ್ರೆ ಸೋನು ಶ್ರೀನಿವಾಸ್​ ಗೌಡ 3 ದಿನ ಸ್ನಾನ ಮಾಡಲ್ಲ; ಎಲ್ಲರ ಎದುರು ಸತ್ಯ ಬಯಲು
Image
Sonu Srinivas Gowda: ‘ನೀವು ಹೀಗೆ ಮಾಡಿದ್ರೆ ಈ ಶೋ ನಡೆಯಲ್ಲ’: ಸುದೀಪ್​ ಕೋಪಕ್ಕೆ ಕಾರಣವಾಯ್ತು ಸೋನು ಗೌಡ ವರ್ತನೆ
Image
Sonu Srinivas Gowda: ‘ಸೋನು ಬಾತ್​ ರೂಮ್​ ಯಾಕೆ ಹುಡುಕಲಿಲ್ಲ?’: ವೇದಿಕೆ ಮೇಲೆ ಸುದೀಪ್​ ಕೇಳಿದ್ರು ನೇರ ಪ್ರಶ್ನೆ

‘ಸೊಮಣ್ಣ ಅವರ ಬಳಿ ಸಾಮರ್ಥ್ಯವಿದೆ. ಹೀಗಾಗಿ, ಅವರು ಹೋಗೋದು ಪಕ್ಕಾ. ರಾಕೇಶ್ ಕೂಡ ಟಿವಿ ಸೀಸನ್​ಗೆ ತೆರಳುತ್ತಾರೆ’ ಎಂದು ಗುರೂಜಿ ಹೇಳಿದರು. ಆದರೆ, ಇದಕ್ಕೆ ಕಾರಣ ನೀಡುವಾಗ ಬಾಯಿಗೆ ಬಂದಂತೆ ಮಾತನಾಡಿದರು. ‘ರಾಕೇಶ್ ವೀಕ್ ಇದ್ದವರ ಜತೆಗೆ ಕ್ಲೋಸ್ ಇರುತ್ತಾರೆ. ಅವರು ಸ್ಟ್ರಾಂಗ್ ಸ್ಪರ್ಧಿಗಳ ಜತೆಗೂ ಒಡನಾಟ ಬೆಳೆಸಬೇಕು. ವಿಚಿತ್ರ ಎಂದರೆ, ರಾಕೇಶ್ ಯಾರ ಜತೆ ಕ್ಲೋಸ್ ಇದ್ದಾರೋ ಅವರೇ ಬಿಗ್ ಬಾಸ್ ಮನೆಯಿಂದ ಹೊರಹೋಗುತ್ತಿದ್ದಾರೆ’ ಎಂದರು ಅವರು.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ಸೋಮಣ್ಣ ಜತೆ ರೂಪೇಶ್​-ಸಾನ್ಯಾ ಜಗಳ; ಸುದೀಪ್ ಯಾರ ಪರ ವಹಿಸಿದ್ರು?

ಈ ಮಾತನ್ನು ಕೇಳಿ ಸುದೀಪ್ ಹೊಟ್ಟೆ ಹುಣ್ಣಾಗುವಂತೆ ನಕ್ಕರು. ‘ರಾಕೇಶ್ ಅವರಿಗೆ ಆಪ್ತರಾದವರು ಬಿಗ್ ಬಾಸ್ ಮನೆಯಿಂದ ಹೊರ ಹೋಗ್ತಾರೆ ಎಂದಾದರೆ, ಮುಂದಿನ ವಾರ ಸೋನು ಗೌಡ ಹಾಗೂ ಉದಯ್ ಮನೆಯಿಂದ ಔಟ್ ಆಗ್ತಾರೆ’ ಎಂದು ಹೇಳುತ್ತಾ ಸುದೀಪ್ ನಕ್ಕರು. ಸೋನು ಹಾಗೂ ಉದಯ್ ಕೂಡ ಈ ಮಾತನ್ನು ಹಾಸ್ಯದ ರೂಪದಲ್ಲೇ ಸ್ವೀಕರಿಸಿದರು. ಇವರಿಬ್ಬರೂ ರಾಕೇಶ್​ ಜತೆ ಆಪ್ತವಾಗಿದ್ದಾರೆ.

Published On - 2:41 pm, Mon, 22 August 22