Vikrant Rona: ಒಟಿಟಿಗೆ ಎಂಟ್ರಿ ನೀಡಲು ಸಜ್ಜಾದ ‘ವಿಕ್ರಾಂತ್ ರೋಣ’; ಜೀ5 ಕಡೆಯಿಂದ ಸಿಕ್ತು ಅಪ್ಡೇಟ್
Vikrant Rona | Zee5 OTT: ‘ವಿಕ್ರಾಂತ್ ರೋಣ’ ಚಿತ್ರದ ಒಟಿಟಿ ಹಕ್ಕುಗಳನ್ನು ‘ಜೀ5’ ಸಂಸ್ಥೆ ಖರೀದಿಸಿದೆ. ‘ಗುಮ್ಮ ಬರ್ತಿದ್ದಾನೆ..’ ಎಂದು ಪೋಸ್ಟ್ ಮಾಡುವ ಮೂಲಕ ಒಟಿಟಿ ಪ್ರೀಮಿಯರ್ ಬಗ್ಗೆ ಮಾಹಿತಿ ನೀಡಲಾಗಿದೆ.
ಅನೂಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಲಾಭ ಮಾಡಿತು. ಈ ವರ್ಷ ಗೆಲುವಿನ ರುಚಿ ಕಂಡ ಕೆಲವೇ ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರ ಕೂಡ ಸ್ಥಾನ ಪಡೆದುಕೊಂಡಿದೆ. ಕಿಚ್ಚ ಸುದೀಪ್ (Kichcha Sudeep) ಅವರ ವೃತ್ತಿ ಜೀವನದಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾ ಡಿಫರೆಂಟ್ ಎನಿಸಿಕೊಂಡಿದೆ. ಜುಲೈ 28ರಂದು ಈ ಚಿತ್ರ ದೇಶಾದ್ಯಂತ ತೆರೆಕಂಡಿತು. ಸಸ್ಪೆನ್ಸ್ ಥ್ರಿಲ್ಲರ್ ಕಥೆಗೆ ಪ್ರೇಕ್ಷಕರು ತಲೆದೂಗಿದರು. ಈಗ ಈ ಸಿನಿಮಾ ಒಟಿಟಿ ಅಂಗಳಕ್ಕೆ ಕಾಲಿಡುತ್ತಿದೆ. ಈ ಬಗ್ಗೆ ‘ಜೀ5 ಕನ್ನಡ’ (Zee5 OTT) ಅಪ್ಡೇಟ್ ನೀಡಿದೆ. ಶೀಘ್ರದಲ್ಲೇ ‘ವಿಕ್ರಾಂತ್ ರೋಣ’ ಬರಲಿದೆ ಎಂದು ಸೋಶಿಯಲ್ ಮೀಡಿಯಾ ಮೂಲಕ ಅನೌನ್ಸ್ ಮಾಡಲಾಗಿದೆ. ಹೌದು, ಸೆಪ್ಟೆಂಬರ್ 2ರಂದು ಈ ಸಿನಿಮಾ ಒಟಿಟಿಯಲ್ಲಿ ಪ್ರದರ್ಶನ ಆರಂಭಿಸಲಿದೆ. ಅದಕ್ಕಾಗಿ ಕಿಚ್ಚ ಸುದೀಪ್ ಫ್ಯಾನ್ಸ್ ಕಾಯುತ್ತಿದ್ದಾರೆ.
ಕಿಚ್ಚ ಸುದೀಪ್, ಅನೂಪ್ ಭಂಡಾರಿ, ನೀತಾ ಅಶೋಕ್, ಮಿಲನಾ ನಾಗರಾಜ್, ಜಾಕ್ವೆಲಿನ್ ಫರ್ನಾಂಡಿಸ್, ಮಧುಸೂದನ್ ರಾವ್, ರವಿಶಂಕರ್ ಗೌಡ ಮುಂತಾದವರು ನಟಿಸಿರುವ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಮರ್ಡರ್ ಮಿಸ್ಟರಿ ಕಹಾನಿ ಇದೆ. ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ನೋಡಿ ಎಂಜಾಯ್ ಮಾಡುವ ಸಮಯ ಹತ್ತಿರ ಬಂದಿದೆ.
‘ವಿಕ್ರಾಂತ್ ರೋಣ’ ಸಿನಿಮಾ ಗೆಲ್ಲುವಲ್ಲಿ ಹಾಡುಗಳ ಪಾತ್ರ ಕೂಡ ಮಹತ್ವದ್ದಾಗಿದೆ. ಅಜನೀಶ್ ಬಿ. ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಎಲ್ಲ ಹಾಡುಗಳು ಗಮನ ಸೆಳೆದಿವೆ. ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ಕಿಚ್ಚ ಸುದೀಪ್ ಹೆಜ್ಜೆ ಹಾಕಿದ ‘ರಾ ರಾ ರಕ್ಕಮ್ಮ..’ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ‘ಹೇ ಫಕೀರಾ..’, ‘ಚಿಕ್ಕಿ ಬೊಂಬೆ..’ ಹಾಡುಗಳು ಕೂಡ ಹೈಲೈಟ್ ಆಗಿವೆ.
ಅದ್ದೂರಿ ಬಜೆಟ್ನಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾ ಮೂಡಿಬಂದಿದೆ. ಜಾಕ್ ಮಂಜು ಅವರು ನಿರ್ಮಾಣ ಮಾಡಿದ್ದು, ಬೃಹತ್ ಸೆಟ್ಗಳಲ್ಲಿ ಶೂಟಿಂಗ್ ಮಾಡಲಾಗಿದೆ. 3ಡಿ ಅವತರಣಿಕೆಯಲ್ಲಿ ರಿಲೀಸ್ ಆದ ಈ ಸಿನಿಮಾವನ್ನು ಥಿಯೇಟರ್ನಲ್ಲಿ ನೋಡಿ ಪ್ರೇಕ್ಷಕರು ಮೆಚ್ಚಿಕೊಂಡರು. ಒಟಿಟಿಯಲ್ಲಿ ಎಷ್ಟರಮಟ್ಟಿಗೆ ಜನಮನ ಗೆಲ್ಲಲಿದೆ ಎಂಬುದನ್ನು ಕಾದು ನೋಡಬೇಕು.
ಇದೇ September 2nd ಬರ್ತಿದ್ದಾನೆ ವಿಕ್ರಾಂತ್ ರೋಣ ನಿಮ್ಮ Zee5 ಅಲ್ಲಿ! Stay tuned@KicchaSudeep @anupsbhandari @nirupbhandari @Asli_Jacqueline @neethaofficial @AJANEESHB @williamdaviddop @shaliniartss @shivakumarart @AlwaysJani @ZeeStudios_ @ZeeKannada @RavishankarGow5 @vasukivaibhav#VR pic.twitter.com/MEpDbecYCt
— ZEE5 Kannada (@ZEE5Kannada) August 25, 2022
‘ವಿಕ್ರಾಂತ್ ರೋಣ’ ಚಿತ್ರದ ಒಟಿಟಿ ಹಕ್ಕುಗಳನ್ನು ‘ಜೀ5’ ಸಂಸ್ಥೆ ಖರೀದಿಸಿದೆ. ‘ಗುಮ್ಮ ಬರ್ತಿದ್ದಾನೆ..’ ಎಂದು ಪೋಸ್ಟ್ ಮಾಡುವ ಮೂಲಕ ಒಟಿಟಿ ಪ್ರೀಮಿಯರ್ ಬಗ್ಗೆ ಮಾಹಿತಿ ನೀಡಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.