Kichcha Sudeep: ಹೈದರಾಬಾದ್​​ನಲ್ಲಿ ‘ವಿಕ್ರಾಂತ್​ ರೋಣ’ ಸಕ್ಸಸ್​ ಮೀಟ್​; ತೆಲುಗು ಸ್ನೇಹಿತರಿಗೆ, ಪ್ರೇಕ್ಷಕರಿಗೆ ಕಿಚ್ಚನ ಧನ್ಯವಾದ

TV9 Digital Desk

| Edited By: ಮದನ್​ ಕುಮಾರ್​

Updated on:Aug 02, 2022 | 1:12 PM

Vikrant Rona Success Meet: ತೆಲುಗಿನಲ್ಲಿ ‘ವಿಕ್ರಾಂತ್​ ರೋಣ’ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಅದಕ್ಕಾಗಿ ಕಿಚ್ಚ ಸುದೀಪ್​ ಮತ್ತು ಇಡೀ ಚಿತ್ರತಂಡದವರು ಹೈದರಾಬಾದ್​ನಲ್ಲಿ ಸಕ್ಸಸ್​ ಮೀಟ್​ ಮಾಡಿದ್ದಾರೆ.

ಕನ್ನಡದ ‘ವಿಕ್ರಾಂತ್​ ರೋಣ’ ಸಿನಿಮಾ ಹೊರರಾಜ್ಯಗಳಲ್ಲೂ ಜಯಭೇರಿ ಬಾರಿಸಿದೆ. ಅದಕ್ಕಾಗಿ ಅಲ್ಲಿನ ಪ್ರೇಕ್ಷಕರಿಗೆ ಕಿಚ್ಚ ಸುದೀಪ್​ (Kichcha Sudeep) ಧನ್ಯವಾದ ತಿಳಿಸುತ್ತಿದ್ದಾರೆ. ಇಂದು (ಆಗಸ್ಟ್​ 2) ಹೈದರಾಬಾದ್​ನಲ್ಲಿ ‘ವಿಕ್ರಾಂತ್​ ರೋಣ’ ಸಿನಿಮಾದ ಸಕ್ಸಸ್​ ಮೀಟ್​ (Vikrant Rona Success Meet) ಮಾಡಲಾಗಿದೆ. ಈ ಚಿತ್ರಕ್ಕೆ ತೆಲುಗು ಚಿತ್ರರಂಗದ ಅನೇಕರು ಬೆಂಬಲ ನೀಡಿದ್ದಾರೆ. ರಾಜಮೌಳಿ, ರಾಮ್​ ಗೋಪಾಲ್​ ವರ್ಮಾ, ರಾಮ್​ ಚರಣ್​, ‘ಮೆಗಾ ಸ್ಟಾರ್​’ ಚಿರಂಜೀವಿ, ಅಕ್ಕಿನೇನಿ ನಾಗಾರ್ಜುನ ಸೇರಿದಂತೆ ಅನೇಕರಿಗೆ ಸುದೀಪ್​ ಥ್ಯಾಂಕ್ಸ್​ ಹೇಳಿದ್ದಾರೆ. ತೆಲುಗು ಪ್ರೇಕ್ಷಕರು ಈ ಚಿತ್ರಕ್ಕೆ ತೋರಿಸಿದ ಪ್ರೀತಿಗೆ ‘ವಿಕ್ರಾಂತ್​ ರೋಣ’ (Vikrant Rona) ತಂಡ ಫಿದಾ ಆಗಿದೆ. ನಿರ್ಮಾಪಕ ಜಾಕ್​ ಮಂಜು, ನಿರ್ದೇಶಕ ಅನೂಪ್​ ಭಂಡಾರಿ ಮುಂತಾದವರು ಸಕ್ಸಸ್​ ಮೀಟ್​ನಲ್ಲಿ ಭಾಗಿ ಆಗಿದ್ದಾರೆ.

Follow us on

Click on your DTH Provider to Add TV9 Kannada