ಮುಖ ತೋರಿಸದೇ ಫೇಮಸ್​ ಆದ ಭಾಸ್ಕರ್​; ಕಿಚ್ಚ ಸುದೀಪ್​ ಬದುಕಿನಲ್ಲೂ ಇದ್ದಾನೆ ಅಂಥ ಒಬ್ಬ ವ್ಯಕ್ತಿ

Vikrant Rona | Kichcha Sudeep: ‘ವಿಕ್ರಾಂತ್​ ರೋಣ’ ಸಿನಿಮಾದಲ್ಲಿ ಭಾಸ್ಕರ್​ ಎಂಬ ಪಾತ್ರ ಹೈಲೈಟ್​ ಆಗಿದ್ದು, ಆತನ ಕುರಿತು ಹಲವು ಮೀಮ್ಸ್​ ವೈರಲ್​ ಆಗಿವೆ. ಈ ಬಗ್ಗೆ ಸುದೀಪ್​ ಮಾತನಾಡಿದ್ದಾರೆ.

TV9kannada Web Team

| Edited By: Madan Kumar

Aug 03, 2022 | 9:37 AM

ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡಿರುವ ‘ವಿಕ್ರಾಂತ್​ ರೋಣ’ (Kichcha Sudeep) ಚಿತ್ರದ ಅನೇಕ ಪಾತ್ರಗಳು ಜನಮನ ಗೆದ್ದಿವೆ. ಕಿಚ್ಚ ಸುದೀಪ್​, ನೀತಾ ಅಶೋಕ್​, ಜಾಕ್ವೆಲಿನ್​ ಫರ್ನಾಂಡಿಸ್​, ನಿರೂಪ್​ ಭಂಡಾರಿ ಮಾತ್ರವಲ್ಲದೇ ಭಾಸ್ಕರ್​ (Vikrant Rona Bhaskar) ಎಂಬ ಪಾತ್ರ ಕೂಡ ಫೇಮಸ್​ ಆಗಿದೆ. ಇಡೀ ಸಿನಿಮಾದಲ್ಲಿ ಈ ಪಾತ್ರ ತೆರೆ ಮೇಲೆ ಬರುವುದೇ ಇಲ್ಲ! ಆದರೂ ಕೂಡ ಎಲ್ಲರ ಗಮನ ಸೆಳೆದಿದೆ. ಕಿಚ್ಚ ಸುದೀಪ್​ ಅವರ ನಿಜಜೀವನದಲ್ಲೂ ಅಂಥ ಒಬ್ಬ ವ್ಯಕ್ತಿ ಇದ್ದಾನೆ. ಆ ಬಗ್ಗೆ ಅವರು ಮಾತನಾಡಿದ್ದಾರೆ. ಹೆಣ್ಮಕ್ಕನ್ನು ಹೊಂದಿರುವ ಪ್ರತಿ ತಂದೆಗೂ ಭಾಸ್ಕರ್​ ರೀತಿಯ ವ್ಯಕ್ತಿಗಳ ಬಗ್ಗೆ ತಿಳಿದಿರುತ್ತದೆ ಎಂದು ಸುದೀಪ್​ ಹೇಳಿದ್ದಾರೆ. ಇತ್ತೀಚೆಗೆ ರಾಜಮೌಳಿ ಕೂಡ ಭಾಸ್ಕರ್​ ಪಾತ್ರದ ಬಗ್ಗೆ ಟ್ವೀಟ್​ ಮಾಡಿದ್ದರು. ‘ವಿಕ್ರಾಂತ್ ರೋಣ’ (Vikrant Rona) ಚಿತ್ರಕ್ಕೆ ಅನೂಪ್​ ಭಂಡಾರಿ ನಿರ್ದೇಶನ ಮಾಡಿದ್ದು, ಜಾಕ್​ ಮಂಜು ಬಂಡವಾಳ ಹೂಡಿದ್ದಾರೆ.

Follow us on

Click on your DTH Provider to Add TV9 Kannada