ಆ್ಯಟಿಟ್ಯೂಡ್ ತೋರಿಸಿದ ಜಯಶ್ರೀಗೆ ಕಠಿಣ ಶಿಕ್ಷೆ ಕೊಟ್ಟ ಬಿಗ್ ಬಾಸ್; ಎಲಿಮಿನೇಷನ್​ಗೆ ಮತ್ತಷ್ಟು ಹತ್ತಿರ

‘ಬಿಗ್ ಬಾಸ್’ ಒಟಿಟಿಯಲ್ಲಿ ಜಯಶ್ರೀ ಅವರು ಜಗಳ ಆಡುವ ಮೂಲಕವೇ ಹೈಲೈಟ್ ಆಗುತ್ತಿದ್ದಾರೆ. ನಂದಿನಿ ಜತೆ ಜಯಶ್ರೀ ಸಾಕಷ್ಟು ಕಿರಿಕ್ ಮಾಡಿಕೊಂಡಿದ್ದರು. ಕ್ಯಾಪ್ಟನ್ಸಿ ಟಾಸ್ಕ್​ ವೇಳೆಯೂ ಜಯಶ್ರೀ ಕೆಲ ಕಿರಿಕ್ ಮಾಡಿಕೊಂಡಿದ್ದಾರೆ.

ಆ್ಯಟಿಟ್ಯೂಡ್ ತೋರಿಸಿದ ಜಯಶ್ರೀಗೆ ಕಠಿಣ ಶಿಕ್ಷೆ ಕೊಟ್ಟ ಬಿಗ್ ಬಾಸ್; ಎಲಿಮಿನೇಷನ್​ಗೆ ಮತ್ತಷ್ಟು ಹತ್ತಿರ
ಜಯಶ್ರೀ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 26, 2022 | 3:32 PM

‘ಬಿಗ್ ಬಾಸ್ ಒಟಿಟಿ’ (Bigg Boss OTT) ದಿನಕಳೆದಂತೆ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಈಗಾಗಲೇ ಮೂರುವಾರ ಪೂರ್ಣಗೊಳಿಸಿರುವ ಸ್ಪರ್ಧಿಗಳು ನಾಲ್ಕನೇ ವಾರಕ್ಕೆ ಅಣಿ ಆಗುತ್ತಿದ್ದಾರೆ. ಈ ಮಧ್ಯೆ ದೊಡ್ಮನೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ತಿಳಿದು ತಿಳಿದು ತಪ್ಪು ಮಾಡಿದ ಜಯಶ್ರೀ ಆರಾಧ್ಯಗೆ (Jayashree Aradhya) ಬಿಗ್ ಬಾಸ್ ಶಿಕ್ಷೆ ನೀಡಿದ್ದಾರೆ. ಇದಕ್ಕೆ ವೀಕ್ಷಕರ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ತಪ್ಪಿನಿಂದಾಗಿ ಅವರು ಕಳಪೆ ಪಟ್ಟ ಕೂಡ ಸ್ವೀಕರಿಸುವಂತಾಗಿದೆ.

‘ಬಿಗ್ ಬಾಸ್’ ಒಟಿಟಿಯಲ್ಲಿ ಜಯಶ್ರೀ ಅವರು ಜಗಳ ಆಡುವ ಮೂಲಕವೇ ಹೈಲೈಟ್ ಆಗುತ್ತಿದ್ದಾರೆ. ನಂದಿನಿ ಜತೆ ಜಯಶ್ರೀ ಸಾಕಷ್ಟು ಕಿರಿಕ್ ಮಾಡಿಕೊಂಡಿದ್ದರು. ಕ್ಯಾಪ್ಟನ್ಸಿ ಟಾಸ್ಕ್​ ವೇಳೆಯೂ ಜಯಶ್ರೀ ಕೆಲ ಕಿರಿಕ್ ಮಾಡಿಕೊಂಡಿದ್ದಾರೆ. ಅವರು ಮಾಡಿದ ತಪ್ಪಿನಿಂದಾಗಿ ಮನೆಯವರಿಗೆ ತೊಂದರೆ ಉಂಟಾಗಿದೆ.

‘ಬಿಗ್ ಬಾಸ್’ ಈ ವಾರ ಕ್ಯಾಪ್ಟನ್ಸಿಗೆ ಒಂದು ಟಾಸ್ಕ್ ನೀಡಿದರು. ತಿರುಗುವ ಚಕ್ರದ ಮೇಲೆ ಒಂದು ಕುರ್ಚಿ ಇರುತ್ತದೆ. ಅದರ ಮೇಲೆ ಕುಳಿತು ಕೊಳ್ಳಬೇಕು. ಮನಸ್ಸಿನಲ್ಲೇ ಸಮಯ ಎಣಿಸಬೇಕು. 15 ನಿಮಿಷನ್ನು ಸರಿಯಾಗಿ ಕೌಂಟ್ ಮಾಡುವ ಸ್ಪರ್ಧಿ ಗೆಲ್ಲುತ್ತಾನೆ. ಈ ಟಾಸ್ಕ್​ ವೇಳೆ ಸ್ಪರ್ಧೆಯಲ್ಲಿ ಇದ್ದವರ ಚಿತ್ತವನ್ನು ಬೇರೆಡೆ ಸೆಳೆಯಲು ಅವಕಾಶ ನೀಡಲಾಗಿತ್ತು. ಎಲ್ಲರೂ ಕಿರುಚಾಡಿ, ಕೂಗಾಡಿ ಸ್ಪರ್ಧೆಗೆ ಇಳಿದವರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಿದ್ದರು.

ಇದನ್ನೂ ಓದಿ
Image
Jayashree Aradhya: ಬಿಗ್ ಬಾಸ್ ಮನೆಯಲ್ಲಿ ಮಾರಿ ಮುತ್ತು ಮೊಮ್ಮಗಳು: ವೇದಿಕೆ ಮೇಲೆ ಕಣ್ಣೀರಿಟ್ಟ ಜಯಶ್ರೀ
Image
Bigg Boss OTT Kannada: ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು ಇವರೇ..!
Image
Roopesh Shetty: ಬಿಗ್ ​ಬಾಸ್ ಮನೆಗೆ ಎಂಟ್ರಿಕೊಟ್ಟ ಕರಾವಳಿಯ ಸೂಪರ್ ಸ್ಟಾರ್: ಯಾರು ಗೊತ್ತಾ ಈ ರೂಪೇಶ್ ಶೆಟ್ಟಿ?
Image
Aryavardhan Guruji: ಜಿಂಗಲಕಾ ಲಕಾ ಲಕಾ: ‘ಬಿಗ್ ಬಾಸ್’ ಮನೆ ಸೇರಿದ ಈ ಆರ್ಯವರ್ಧನ್​ ಗುರೂಜಿ ಯಾರು?

ಜಯಶ್ರೀ ಬೇರೆಯದೇ ಮಾರ್ಗ ತುಳಿದರು. ಆರಂಭದಲ್ಲಿ ಅವರು ಕುಳಿತವರ ಮೇಲೆ ನೀರು ಎರಚಲು ಶುರುಮಾಡಿದರು. ನಂತರ ದಿಂಬುಗಳನ್ನು ಎಸೆದರು. ಕೊನೆಗೆ ಇನ್ನೂ ಒಂದು ಹಂತ ಮುಂದೆ ಹೋದರು. ಪರ್ಫ್ಯೂಮ್ ಬಾಟಲಿಗಳನ್ನು ತಂದು ಅದನ್ನು ಸ್ಪ್ರೇ ಮಾಡಲು ಶುರು ಮಾಡಿದರು. ನಂದಿನಿ ಸ್ಪರ್ಧೆಗೆ ಇಳಿದಾಗ ಪರ್ಫ್ಯೂಮ್ ಸ್ಪ್ರೇ ಮಾಡಿದರು. ಇದರಿಂದ ನಂದಿನ ಕಣ್ಣಿಗೆ ಉರಿ ಆಗಿದೆ. ಇದನ್ನು ಬಿಗ್ ಬಾಸ್ ಸಹಿಸಲಿಲ್ಲ. ಆಗಲೇ ಜಯಶ್ರೀಗೆ ಎಚ್ಚರಿಕೆ ನೀಡಿದರು. ಆದರೂ ಅವರ ಆ್ಯಟಿಟ್ಯೂಡ್ ಬದಲಾಗಲಿಲ್ಲ. ನೀರನ್ನು ಎರೆಚುವುದನ್ನು ಮುಂದುವರಿಸಿದರು. ನಂತರ ಬಿಗ್ ಬಾಸ್ ಶಿಕ್ಷೆ ಕೊಡುವ ಘೋಷಣೆ ಮಾಡಿದರು.

ಇದನ್ನೂ ಓದಿ: ‘ಇನ್ನು ಯಾವುದೇ ಆಟ ಆಡಲ್ಲ’; ಬಿಗ್ ಬಾಸ್ ಮನೆಯಿಂದ ಹೊರಹೋಗ್ತಾರಾ ಜಯಶ್ರೀ?

‘ಜಯಶ್ರೀ ಮಾಡಿದ ತಪ್ಪಿನಿಂದ ಬೇರೆಯವರಿಗೆ ತೊಂದರೆ ಆಗಿದೆ. ಈ ಕಾರಣದಿಂದ ಈ ವಾರದ  ಉಳಿದುಕೊಂಡರೆ ಮುಂದಿನ ವಾರದ ಎಲಿಮಿನೇಷನ್​ಗೆ ನೀವು ನೇರವಾಗಿ ನಾಮಿನೇಟ್ ಆಗುತ್ತಿದ್ದೀರಿ’ ಎಂದು ಬಿಗ್ ಬಾಸ್ ಘೋಷಿಸಿದರು. ಇದರಿಂದ ಜಯಶ್ರೀಗೆ ತೀವ್ರ ಹಿನ್ನಡೆ ಆಗಿದೆ. ಎಲಿಮಿನೇಷನ್​ಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ