‘ಇನ್ನು ಯಾವುದೇ ಆಟ ಆಡಲ್ಲ’; ಬಿಗ್ ಬಾಸ್ ಮನೆಯಿಂದ ಹೊರಹೋಗ್ತಾರಾ ಜಯಶ್ರೀ?

ಟಾಸ್ಕ್​ಗೆ ನಾನು ಕೂಡ ಬರುತ್ತೀನಿ ಎಂದರು ಜಯಶ್ರೀ. ಆದರೆ, ಈ ಟಾಸ್ಕ್​​ನಲ್ಲಿ ಅವರಿಗೆ ಅವಕಾಶ ನೀಡಿಲ್ಲ ನಂದು. ಈ ವಿಚಾರಕ್ಕೆ ಜಯಶ್ರೀ ಸಿಟ್ಟಾಗಿದ್ದಾರೆ.

‘ಇನ್ನು ಯಾವುದೇ ಆಟ ಆಡಲ್ಲ’; ಬಿಗ್ ಬಾಸ್ ಮನೆಯಿಂದ ಹೊರಹೋಗ್ತಾರಾ ಜಯಶ್ರೀ?
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 18, 2022 | 5:44 PM

‘ಬಿಗ್ ಬಾಸ್ ಒಟಿಟಿ’ಯಲ್ಲಿ (Bigg Boss OTT) ಸಾಕಷ್ಟು ಘಟನೆಗಳು ನಡೆಯುತ್ತಿವೆ. ಹಲವರ ಮಧ್ಯೆ ಟಾಸ್ಕ್​ ವಿಚಾರಕ್ಕೆ ಕಿರಿಕ್​ಗಳು ನಡೆಯುತ್ತಿವೆ. ಈ ಬಾರಿ ಜಯಶ್ರೀ ಆರಾಧ್ಯ (Jayashree Aradhya) ಅವರ ಸರದಿ. ಅವರು ‘ಬಿಗ್ ಬಾಸ್ ಒಟಿಟಿ’ಯಲ್ಲಿ ಅತ್ತಿದ್ದಾರೆ. ತಂಡದವರಿಂದಲೇ ಮೋಸ ಆಗಿದೆ ಎಂಬ ಆರೋಪ ಅವರ ಕಡೆಯಿಂದ ಬಂದಿದೆ. ತಂಡದ ಕ್ಯಾಪ್ಟನ್ ನಂದು ವಿರುದ್ಧವೇ ಜಯಶ್ರೀ ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಘಟನೆ ಬೆನ್ನಲ್ಲೇ ‘ಇನ್ನು ಯಾವುದೇ ಆಟ ಆಡಲ್ಲ’ ಎಂದು ಶಪಥ ಮಾಡಿದ್ದಾರೆ. ಇದರಿಂದ ಅವರಿಗೆ ತೊಂದರೆ ಎದುರಾಗಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ.

‘ಬಿಗ್ ಬಾಸ್​’ನಲ್ಲಿ ಈ ವಾರ ಎರಡು ಟೀಂ ಮಾಡಲಾಗಿತ್ತು. ಒಂದು ಟೀಂಗೆ ನಂದು ನಾಯಕಿ. ಮತ್ತೊಂದು ಟೀಂಗೆ ಸೋಮಣ್ಣ ಕ್ಯಾಪ್ಟನ್ ಆಗಿದ್ದರು. ಒಂದು ಟಾಸ್ಕ್​ನಲ್ಲಿ ನಂದು, ಜಶ್ವಂತ್ ಹಾಗೂ ಚೈತ್ರಾ ಟಾಸ್ಕ್​ ಆಡಲು ಇಳಿದರು. ಈ ಟಾಸ್ಕ್​ಗೆ ನಾನು ಕೂಡ ಬರುತ್ತೀನಿ ಎಂದರು ಜಯಶ್ರೀ. ಆದರೆ, ಈ ಟಾಸ್ಕ್​​ನಲ್ಲಿ ಅವರಿಗೆ ಅವಕಾಶ ನೀಡಿಲ್ಲ ನಂದು. ಈ ವಿಚಾರಕ್ಕೆ ಜಯಶ್ರೀ ಸಿಟ್ಟಾಗಿದ್ದಾರೆ.

‘ಎಲ್ಲದೂ ನಿಮ್ಮದೇ ನಿರ್ಧಾರ ಎಂದಾದರೆ, ಟೀಂ ಎಂದು ಏಕೆ ಇಟ್ಟುಕೊಂಡಿದ್ದೀರಾ? ನನ್ನನ್ನು ಏಕೆ ಬಿಟ್ಟಿದ್ದೀರಾ? ಹೀಗೆ ಅಂತಾದರೆ ನಾನು ಇನ್ಮುಂದೆ ಆಟ ಆಡಲ್ಲ’ ಎಂದು ಘೋಷಿಸಿದರು ಜಯಶ್ರೀ. ಈ ಚರ್ಚೆ ಎಲ್ಲಿಂದ ಎಲ್ಲಿಗೋ ತಲುಪಿತು. ಜಯಶ್ರೀ ಮಾತನ್ನು ಕೇಳಿ ಕ್ಯಾಪ್ಟನ್ ನಂದು ಸಿಟ್ಟಾದರು. ಮುಂದಿನ ಟಾಸ್ಕ್​​ಗೆ ಅವಕಾಶ ನೀಡುವ ಭರವಸೆ ಕೊಟ್ಟರೂ ಜಯಶ್ರೀ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಕೊನೆಗೂ ಅವರ ಮನಸ್ಸು ಬದಲಾಯಿತು.

ಇದನ್ನೂ ಓದಿ: ಹೊರಗೆ ಟ್ರೋಲ್ ಆಗಿದ್ದ ಸೋನುಗೆ ಆ ಒಂದು ಕಾರಣಕ್ಕೆ ಬಿಗ್ ಬಾಸ್​​ನಲ್ಲಿ ಸಿಕ್ತು ಸಖತ್ ಮರ್ಯಾದೆ

ಈ ಬಾರಿಯ ನಾಮಿನೇಷನ್ ಲಿಸ್ಟ್​ನಲ್ಲಿ ಜಯಶ್ರೀ ಇದ್ದಾರೆ. ಅವರಿಗೆ ತಮ್ಮ ಸಾಮರ್ಥ್ಯವನ್ನು ಪ್ರೂವ್ ಮಾಡಿಕೊಳ್ಳೋಕೆ ಒಂದು ಅವಕಾಶ ಬೇಕಿದೆ. ಆದರೆ, ಚಿಕ್ಕ ವಿಚಾರಕ್ಕೆ ದೊಡ್ಡದಾಗಿ ಜಗಳ ಆಡಿದ್ದರಿಂದ ಅವರಿಗೆ ಜನರಿಂದ ವೋಟ್ ಬೀಳುತ್ತದೆಯೋ ಅಥವಾ ಇಲ್ಲವೋ ಎಂಬ ಅನುಮಾನ ಮೂಡಿದೆ. ಒಂದೊಮ್ಮೆ ಕಡಿಮೆ ವೋಟ್ ಬಿದ್ದರೆ ಜಯಶ್ರೀ ಮನೆಯಿಂದ ಹೊರಹೋಗುವುದು ಖಚಿತವಾಗಲಿದೆ.

Published On - 3:01 pm, Thu, 18 August 22

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ