ಹೊರಗೆ ಟ್ರೋಲ್ ಆಗಿದ್ದ ಸೋನುಗೆ ಆ ಒಂದು ಕಾರಣಕ್ಕೆ ಬಿಗ್ ಬಾಸ್​​ನಲ್ಲಿ ಸಿಕ್ತು ಸಖತ್ ಮರ್ಯಾದೆ

ಟಾಸ್ಕ್ ಆಡುವುದಕ್ಕೂ ಮುನ್ನ ಸೋನು ಗೌಡ ಗಾಯ ಮಾಡಿಕೊಂಡರು. ಸೋಮಣ್ಣ ಜತೆ ಕಬಡ್ಡಿ ಆಡೋಕೆ ಹೋಗಿ ಕೈ ಗಾಯ ಮಾಡಿಕೊಂಡರು. ಇದರಿಂದ ಅವರಿಗೆ ತೀವ್ರ ನೋವಾಗಿದೆ.

ಹೊರಗೆ ಟ್ರೋಲ್ ಆಗಿದ್ದ ಸೋನುಗೆ ಆ ಒಂದು ಕಾರಣಕ್ಕೆ ಬಿಗ್ ಬಾಸ್​​ನಲ್ಲಿ ಸಿಕ್ತು ಸಖತ್ ಮರ್ಯಾದೆ
ಸೋನು
TV9kannada Web Team

| Edited By: Rajesh Duggumane

Aug 16, 2022 | 9:47 PM

ಖಾಸಗಿ ವಿಡಿಯೋ ಲೀಕ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ಸಖತ್ ಟ್ರೋಲ್ ಆಗಿದ್ದರು. ಈ ವಿಚಾರದಲ್ಲಿ ಸೋನುಗೆ ಸಾಕಷ್ಟು ಟೀಕೆಗಳು ಬರುತ್ತಲೇ ಇವೆ. ಅವರು ‘ಬಿಗ್ ಬಾಸ್’ ಮನೆಗೆ ಹೋಗಿದ್ದಕ್ಕೆ ಈಗಲೂ ಸಾಕಷ್ಟು ಜನರು ಅಪಸ್ವರ ಎತ್ತಿದ್ದಾರೆ. ಅವರನ್ನು ಕಳುಹಿಸಬಾರದಿತ್ತು ಎಂಬ ಮಾತುಗಳು ಕೇಳಿ ಬಂತು. ದೊಡ್ಮನೆಯಲ್ಲಿ ಸೋನು ಶ್ರೀನಿವಾಸ್ ಪ್ರತಿ ಹಂತದಲ್ಲಿ ತಮ್ಮ ತನವನ್ನು ಪ್ರೂವ್ ಮಾಡೋಕೆ ಪ್ರಯತ್ನಿಸುತ್ತಿದ್ದಾರೆ. ಈಗ ‘ಬಿಗ್ ಬಾಸ್’ (Bigg Boss OTT Kannada) ಮನೆಯಲ್ಲಿ ಅವರು ಒಂದು ಕಾರಣಕ್ಕೆ ಮಿಂಚಿದ್ದಾರೆ. ಅವರಿಗೆ ಮನೆಯವರಿಂದ ಮೆಚ್ಚುಗೆ ಸಿಕ್ಕಿದೆ.

‘ಬಿಗ್ ಬಾಸ್’ನಲ್ಲಿ ಪ್ರತಿ ವಾರ ವಿವಿಧ ರೀತಿಯ ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ಈ ವಾರ ಎರಡು ತಂಡಗಳನ್ನಾಗಿ ಮಾಡಿ ಹಲವು ಫಿಸಿಕಲ್ ಟಾಸ್ಕ್​ಗಳನ್ನು ಕೊಡಲಾಗುತ್ತಿದೆ. ಒಂದು ತಂಡಕ್ಕೆ ಸೋಮಣ್ಣ ಮಾಚಿಮಾಡ ಕ್ಯಾಪ್ಟನ್ ಆದರೆ, ಮತ್ತೊಂದು ಟೀಂಗೆ ನಂದು ನಾಯಕಿ. ನಂದು ಟೀಂನಲ್ಲಿ ಸೋನು ಗೌಡ ಕೂಡ ಇದ್ದಾರೆ. ಅವರು ಟಾಸ್ಕ್​ಅನ್ನು ಅದ್ಭುತವಾಗಿ ಆಡಿ ತೋರಿಸಿದ್ದಾರೆ.

ಟಾಸ್ಕ್ ಆಡುವುದಕ್ಕೂ ಮುನ್ನ ಸೋನು ಗೌಡ ಗಾಯ ಮಾಡಿಕೊಂಡರು. ಸೋಮಣ್ಣ ಜತೆ ಕಬಡ್ಡಿ ಆಡೋಕೆ ಹೋಗಿ ಕೈ ಗಾಯ ಮಾಡಿಕೊಂಡರು. ಇದರಿಂದ ಅವರಿಗೆ ತೀವ್ರ ನೋವಾಗಿದೆ. ಕೈಗೆ ಹೊಲಿಗೆ ಕೂಡ ಹಾಕಲಾಗಿದೆ. ಆದರೂ ಅವರು ಟಾಸ್ಕ್ ಆಡಿದ್ದಾರೆ. ಫಿಸಿಕಲ್ ಟಾಸ್ಕ್​ ಆಗಿದ್ದರೂ ಅದನ್ನು ಆಡಿ ಗೆದ್ದಿದ್ದಾರೆ.

ಸೋನು ಶ್ರೀನಿವಾಸ್ ಗೌಡ ಅವರು ಟಾಸ್ಕ್ ಗೆಲ್ಲುತ್ತಿದ್ದಂತೆ ಮನೆ ಮಂದಿ ಎಲ್ಲರೂ ಅವರಿಗೆ ಮೆಚ್ಚುಗೆ ಸೂಚಿಸಿದರು. ನೋವಿನ ಮಧ್ಯೆಯೂ ಗೆದ್ದು ತೋರಿಸಿದ ಅವರನ್ನು ಎಲ್ಲರೂ ಕೊಂಡಾಡಿದ್ದಾರೆ. ಈ ಕಾರಣಕ್ಕೆ ಸೋನು ಹೈಲೈಟ್ ಆಗಿದ್ದಾರೆ. ‘ಇಂದಿನ ನಿಜವಾದ ಸ್ಟಾರ್ ನೀನು’ ಎಂದು ಮನೆ ಮಂದಿ ಅವರಿಗೆ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ‘ನಾನು ಸಖತ್ ಆಗಿ ಕಬಡ್ಡಿ ಆಡ್ತೀನಿ’ ಎಂದು ಬಿಗ್ ಬಾಸ್ ಮನೆಯಲ್ಲಿ ಗಾಯ ಮಾಡಿಕೊಂಡ ಸೋನು ಶ್ರೀನಿವಾಸ್ ಗೌಡ

ಇದನ್ನೂ ಓದಿ

ಹೊರಗೆ ಟ್ರೋಲ್ ಆಗುತ್ತಿದ್ದ ಸೋನು ಶ್ರೀನಿವಾಸ್ ಗೌಡ ಅವರು ಮನೆಯಲ್ಲಿ ತಮ್ಮ ನಿಜವಾದ ಸಾಮರ್ಥ್ಯವನ್ನು ತೋರಿಸಲು ಪ್ರಯತ್ನ ಮಾಡುತ್ತಿದ್ದಾರೆ. ಈ ಕಾರಣಕ್ಕೂ ಅವರು ಸಾಕಷ್ಟು ಹೈಲೈಟ್ ಆಗುತ್ತಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada