AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಕ್ಯಾರೆಕ್ಟರ್​ನ ಹಾಳು ಮಾಡಿದ್ದೀರಿ’; ಅರ್ಜುನ್​-ರೂಪೇಶ್ ನಡುವೆ ನಡೆಯಿತು ದೊಡ್ಡ ಜಗಳ

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ನೀಡುವ ದಿನಸಿಗಳಿಗೆ ಮಿತಿ ಇದೆ. ಹೀಗಾಗಿ, ಯಾರಾದರೂ ಆಹಾರವನ್ನು ವೇಸ್ಟ್ ಮಾಡಿದರೆ ದೊಡ್ಡದೊಡ್ಡ ಜಗಳಗಳೇ ಏರ್ಪಡುತ್ತವೆ. ರೂಪೇಶ್ ಹಾಗೂ ಅರ್ಜುನ್ ಮಧ್ಯೆ ಜಗಳ ಆಗೋಕೂ ಇದೇ ವಿಚಾರ ಕಾರಣ ಆಗಿದೆ.

‘ನನ್ನ ಕ್ಯಾರೆಕ್ಟರ್​ನ ಹಾಳು ಮಾಡಿದ್ದೀರಿ’; ಅರ್ಜುನ್​-ರೂಪೇಶ್ ನಡುವೆ ನಡೆಯಿತು ದೊಡ್ಡ ಜಗಳ
ರೂಪೇಶ್​-ಅರ್ಜುನ್
TV9 Web
| Edited By: |

Updated on:Aug 16, 2022 | 6:54 PM

Share

‘ಬಿಗ್ ಬಾಸ್​ ಒಟಿಟಿ’ (Bigg Boss OTT) ರಂಗು ದಿನ ಕಳೆದಂತೆ ಹೆಚ್ಚುತ್ತಿದೆ. ಎಲ್ಲಾ ಸ್ಪರ್ಧಿಗಳ ವಿವಿಧ ಮುಖ ಅನಾವರಣಗೊಳ್ಳುತ್ತಿದೆ. ಹಲವು ಕಾರಣದಿಂದ ಎರಡು ಸ್ಪರ್ಧಿಗಳ ಮಧ್ಯೆ ಜಗಳಗಳು ಏರ್ಪಡುತ್ತಿವೆ. ಯಾರು ಯಾರ ವಿರುದ್ಧ ಯಾವಾಗ ತಿರುಗಿ ಬೀಳುತ್ತಾರೆ ಎಂಬುದನ್ನು ಊಹಿಸಲು ಪ್ರೇಕ್ಷಕರಿಗೆ ಸಾಧ್ಯವಾಗುತ್ತಿಲ್ಲ. ಈಗ ರೂಪೇಶ್ ಶೆಟ್ಟಿ (Roopesh Shetty) ಹಾಗೂ ಮನೆಯ ಕ್ಯಾಪ್ಟನ್ ಅರ್ಜುನ್ ಮಧ್ಯೆ ಜಟಾಪಟಿ ಏರ್ಪಟ್ಟಿದೆ. ‘ಅರ್ಜುನ್ ಅವರು ನನ್ನ ಕ್ಯಾರೆಕ್ಟರ್ ಹಾಳು ಮಾಡಿದ್ದಾರೆ’ ಎಂಬ ಆರೋಪವನ್ನು ರೂಪೇಶ್ ಶೆಟ್ಟಿ ಮಾಡಿದ್ದಾರೆ. ಇಬ್ಬರ ಜಗಳ ತಾರಕಕ್ಕೇರಿದೆ. ಹೊಸ ಪ್ರೋಮೋವನ್ನು ಕಲರ್ಸ್ ಸೂಪರ್​ ವಾಹಿನಿಯು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಬಿಗ್ ಬಾಸ್ ಮನೆಯಲ್ಲಿ ಊಟದ ವಿಚಾರಕ್ಕೆ ಸಾಕಷ್ಟು ಜಗಳಗಳು ಏರ್ಪಟ್ಟಿವೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ನೀಡುವ ದಿನಸಿಗಳಿಗೆ ಮಿತಿ ಇದೆ. ಹೀಗಾಗಿ, ಯಾರಾದರೂ ಆಹಾರವನ್ನು ವೇಸ್ಟ್ ಮಾಡಿದರೆ ದೊಡ್ಡದೊಡ್ಡ ಜಗಳಗಳೇ ಏರ್ಪಡುತ್ತವೆ. ರೂಪೇಶ್ ಹಾಗೂ ಅರ್ಜುನ್ ಮಧ್ಯೆ ಜಗಳ ಆಗೋಕೂ ಇದೇ ವಿಚಾರ ಕಾರಣ ಆಗಿದೆ. ಇಬ್ಬರೂ ಮಿತಿಮೀರಿ ಕಿತ್ತಾಡಿಕೊಂಡಿದ್ದಾರೆ.

ರೂಪೇಶ್ ಅವರು ತಾವು ಹಾಕಿಕೊಂಡಿದ್ದ ಚಪಾತಿಯನ್ನು ಕಸದಬುಟ್ಟಿಗೆ ಎಸೆದಿದ್ದರು. ಇದನ್ನು ನೋಡಿದ ಅರ್ಜುನ್ ಅವರು ‘ಚಪಾತಿಯನ್ನು ಕಸದ ಬುಟ್ಟಿಗೆ ಎಸೆದವರು ಯಾರು’ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ರೂಪೇಶ್​ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ‘ಅದನ್ನು ತಿನ್ನೋಕೆ ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕೆ ನಾನೇ ಅದನ್ನು ಎಸೆದೆ’ ಎಂದಿದ್ದಾರೆ. ಈ ಮಾತನ್ನು ಕೇಳಿ ಅರ್ಜುನ್ ಕೋಪಗೊಂಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೇಲಿ ಯಾರಾದ್ರು ಸಿಕ್ಕಿದ್ರೆ ಬಿಡಲ್ಲ: ಕಿಚ್ಚ ಕಾಲೆಳೆದಿದ್ದಕ್ಕೆ ನೇರ ಉತ್ತರ ಕೊಟ್ಟ ರೂಪೇಶ್

‘ಜಗತ್ತಿನಲ್ಲಿ ಎಷ್ಟೋ ಜನಕ್ಕೆ ತಿನ್ನೋಕೆ ಇಲ್ಲ. ಹೀಗಿರುವಾಗ ನೀವು ಸಿಕ್ಕ ಆಹಾರವನ್ನು ವೇಸ್ಟ್​ ಮಾಡಿದ್ದೀರಲ್ಲ’ ಎಂದು ಅರ್ಜುನ್ ಕೂಗಾಡಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ಮುಂದುವರಿದಿದೆ. ಕೆಲ ಸ್ಪರ್ಧಿಗಳು ರೂಪೇಶ್ ಅವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ಆದರೆ, ರೂಪೇಶ್ ಸಮಾಧಾನಗೊಳ್ಳಲೇ ಇಲ್ಲ. ‘ಕ್ಯಾರೆಕ್ಟರ್ ಹಾಳು ಮಾಡಿ, ನಂತರ ಸುಮ್ಮನಿರು ಅಂದರೆ ಹೇಗೆ ಇರೋದು’ ಎಂದು ರೂಪೇಶ್ ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಇವರಿಬ್ಬರ ಜಗಳ ಹೇಗೆ ಕೊನೆ ಆಯಿತು ಎಂಬುದನ್ನು ನೋಡಲು ಪೂರ್ತಿ ಎಪಿಸೋಡ್ ವೀಕ್ಷಿಸಬೇಕು.

Published On - 4:40 pm, Tue, 16 August 22

Follow Us
TV9 Web
TV9 Web

TV9 Kannada

Read More
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ