‘ಲೂಸಾ ನೀನು?’; ಸೋನು ಶ್ರೀನಿವಾಸ್ ಗೌಡ ಅವತಾರಕ್ಕೆ ಉರಿದು ಬಿದ್ದ ಸಾನ್ಯಾ ಅಯ್ಯರ್
ಸೋನು ಕಿವಿಗೆ ಹೆಡ್ಫೋನ್ ಹಾಕಿಕೊಂಡರೆ, ಸಾನ್ಯಾ ಲೈನ್ಗಳನ್ನು ಹೇಳಿದರು. ಆದರೆ, ಒಂದೇ ಒಂದು ವಾಕ್ಯವನ್ನು ಸರಿಯಾಗಿ ಹೇಳಿಲ್ಲ ಸೋನು.
‘ಬಿಗ್ ಬಾಸ್ ಒಟಿಟಿ’ (Bigg Boss OTT) ಮನೆಯಲ್ಲಿ ಸಾಕಷ್ಟು ಘಟನೆಗಳು ನಡೆಯುತ್ತಿವೆ. ಹಲವರ ಮಧ್ಯೆ ಟಾಸ್ಕ್ ವಿಚಾರಕ್ಕೆ ಕಿರಿಕ್ಗಳು ನಡೆಯುತ್ತಿವೆ. ಈಗಾಗಲೇ ಹಲವರು ಕಣ್ಣೀರು ಹಾಕಿದ್ದಾರೆ. ಈ ಬಾರಿ ಸೋನು ಶ್ರೀನಿವಾಸ್ ಗೌಡ ಹಾಗೂ ಸಾನ್ಯಾ ಅವರ ಸರದಿ. ಇಬ್ಬರ ನಡುವೆ ಟಾಸ್ಕ್ ವಿಚಾರಕ್ಕೆ ದೊಡ್ಡ ಕಿರಿಕ್ ಆಗಿದೆ. ‘ಲೂಸಾ ನೀನು?’ ಎಂದು ಸೋನು ಶ್ರೀನಿವಾಸ್ ಗೌಡ (Sonu Srinivas Gowda) ವಿರುದ್ಧ ಸಾನ್ಯಾ ಅಯ್ಯರ್ ನೇರವಾಗಿ ಕೂಗಾಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಟೆಂಪರ್ ಕಳೆದುಕೊಂಡಿದ್ದಾರೆ. ಇಂದಿನ (ಆಗಸ್ಟ್ 17) ಎಪಿಸೋಡ್ನಲ್ಲಿ ಈ ವಿಚಾರ ಹೈಲೈಟ್ ಆಗಿದೆ.
ಎರಡು ಟೀಂ ಮಾಡಿ ಒಂದು ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ನ ಪ್ರಕಾರ ಒಂದು ಟೀಂನಿಂದ ಇಬ್ಬರು ಆಟಕ್ಕೆ ಇಳಿಯಬೇಕು. ಒಬ್ಬರ ಕಿವಿಗೆ ಹೆಡ್ಫೋನ್ ಹಾಕಿ ಸಾಂಗ್ ಹಾಕಲಾಗುತ್ತದೆ. ಎದುರು ಇದ್ದವರು ಬಿಗ್ ಬಾಸ್ ನೀಡಿದ ಲೈನ್ನ ಜೋರಾಗಿ ಹೇಳಬೇಕು. ಹೆಡ್ಫೋನ್ ಹಾಕಿಕೊಂಡವರು ಇದನ್ನು ಗೆಸ್ ಮಾಡಬೇಕು. ಈ ಆಟಕ್ಕೆ ಸೋನು ಹಾಗೂ ಸಾನ್ಯಾ ಇಳಿದಿದ್ದಾರೆ.
ಸೋನು ಶ್ರೀನಿವಾಸ್ ಗೌಡ ಕಿವಿಗೆ ಹೆಡ್ಫೋನ್ ಹಾಕಿಕೊಂಡರೆ, ಸಾನ್ಯಾ ಲೈನ್ಗಳನ್ನು ಹೇಳಿದರು. ಆದರೆ, ಒಂದೇ ಒಂದು ವಾಕ್ಯವನ್ನು ಸರಿಯಾಗಿ ಹೇಳಿಲ್ಲ ಸೋನು. ‘ಹೆಡ್ಫೋನ್ನಲ್ಲಿ ಸಾಂಗ್ ದೊಡ್ಡದಾಗಿ ಬರುತ್ತಿದೆ’ ಎಂದು ಕೂಗುವುದೊಂದೇ ಮಾಡುತ್ತಿದ್ದರು. ಇದರಿಂದ ಸಾನ್ಯಾ ಅಸಮಾಧಾನಗೊಂಡರು. ಇಬ್ಬರ ನಡುವೆ ಕಿರಿಕ್ ಆಯಿತು.
ಸೋನು ಶ್ರೀನಿವಾಸ್ ಗೌಡ ತನ್ನ ತಪ್ಪಿಲ್ಲ ಎಂದು ವಾದಿಸೋಕೆ ಶುರು ಮಾಡಿದರು. ಅಷ್ಟೇ ಅಲ್ಲ ಸಾನ್ಯಾ ಮೇಲೆ ತಪ್ಪನ್ನು ಎತ್ತಿ ಹಾಕಿದರು. ಈ ವಿಚಾರದಿಂದ ಸಾನ್ಯಾ ಸಿಕ್ಕಾಪಟ್ಟೆ ಅಪ್ಸೆಟ್ ಆದರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ‘ನೀನು ಲೂಸಾ’ ಎಂದು ಹೇಳುತ್ತಾ ಟೆಂಪರ್ ಕಳೆದುಕೊಂಡರು ಸಾನ್ಯಾ. ನಂತರ ಸಾನ್ಯಾ ಅಳೋಕೆ ಆರಂಭಿಸಿದರು.
ಇದನ್ನೂ ಓದಿ: ರಾತ್ರಿ 2.15ಕ್ಕೆ ಸೋನು ಗೌಡ ಜತೆ ಮಾತಾಡಲು ಬಂದ ರಾಕೇಶ್; ವೈರಲ್ ಹುಡುಗಿಯ ಪ್ರತಿಕ್ರಿಯೆ ಹೇಗಿತ್ತು?
ಆಗಸ್ಟ್ 16ರ ಎಪಿಸೋಡ್ನಲ್ಲಿ ಸೋನು ಶ್ರೀನಿವಾಸ್ ಗೌಡ ಅವರು ಸಖತ್ ಆಗಿ ಪರ್ಫಾರ್ಮೆನ್ಸ್ ನೀಡಿದ್ದರು. ಗಾಯಗೊಂಡಿದ್ದರೂ ಫಿಸಿಕಲ್ ಟಾಸ್ಕ್ನಲ್ಲಿ ಗೆದ್ದರು. ಈ ಬಗ್ಗೆ ಎಲ್ಲ ಕಡೆಗಳಿಂದ ಅವರಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಇಂದಿನ ಎಪಿಸೋಡ್ನಲ್ಲಿ ಅವರು ಮುಗ್ಗರಿಸಿದ್ದಾರೆ. ಈ ಬಾರಿ ಅವರು ಎಲಿಮಿನೇಷನ್ಗೆ ನಾಮಿನೇಟ್ ಆಗಿದ್ದಾರೆ. ಅವರು ಈ ಬಾರಿ ಮನೆಯಿಂದ ಹೊರಹೋಗುತ್ತಾರಾ ಅನ್ನೋದನ್ನು ನಾವು ಕಾದು ನೋಡಬೇಕಿದೆ.