‘ನಾನು ಪ್ರೀತಿಯಲ್ಲಿ ಕೊಲ್ತೀನಿ’; ಸ್ವೀಟ್ ಆಗಿ ಎಚ್ಚರಿಕೆ ಕೊಟ್ಟ ಸಾನ್ಯಾ ಅಯ್ಯರ್

‘ನಾನು ಚಾಕು ತಂದುಬಿಟ್ಟಿದ್ದೀನಿ. ಏನು ಮಾಡ್ಲಿ ಈಗ? ಚಾಕುವಿನಿಂದ ನಿನಗೆ ಚುಚ್ಚಲೇ’ ಎಂದು ಕೇಳಿದರು ಸಾನ್ಯಾ. ‘ಚಾಕುವಿನಿಂದ ಚುಚ್ಚಿ. ಏನೂ ತೊಂದರೆ ಇಲ್ಲ’ ಎಂದರು ಜಶ್ವಂತ್. ಇದಕ್ಕೆ ಸಾನ್ಯಾ ಕೊಟ್ಟ ಉತ್ತರ ಮಜವಾಗಿತ್ತು.

‘ನಾನು ಪ್ರೀತಿಯಲ್ಲಿ ಕೊಲ್ತೀನಿ’; ಸ್ವೀಟ್ ಆಗಿ ಎಚ್ಚರಿಕೆ ಕೊಟ್ಟ ಸಾನ್ಯಾ ಅಯ್ಯರ್
ಸಾನ್ಯಾ ಅಯ್ಯರ್
Follow us
TV9 Web
| Updated By: ವಿವೇಕ ಬಿರಾದಾರ

Updated on:Aug 17, 2022 | 7:12 AM

ನಟಿ ಸಾನ್ಯಾ ಅಯ್ಯರ್ (Sanya Iyer)  ಅವರು ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಧಾರಾವಾಹಿಗಳಲ್ಲಿ ನಟಿಸಿರುವ ಅವರು ಈಗ ದೊಡ್ಮನೆಯಲ್ಲಿ ಮಿಂಚುತ್ತಿದ್ದಾರೆ. ಅವರು ಹಲವು ಕಡೆಗಳಲ್ಲಿ ಕ್ಯೂಟ್​ ಆಗಿ ಕಾಣಿಸಿಕೊಳ್ಳುತ್ತಾರೆ. ಕಾಂಟ್ರವರ್ಸಿ, ಜಗಳ ಎಂದಾಗ ಅವರು ದೂರ ಉಳಿಯಲು ಪ್ರಯತ್ನಿಸುತ್ತಾರೆ. ಈ ಕಾರಣಕ್ಕೂ ಅವರು ಅನೇಕರಿಗೆ ಇಷ್ಟವಾಗುತ್ತಾರೆ. ಈಗ ಅವರು ಬಿಗ್ ಬಾಸ್ (Bigg Boss OTT)​ ಮನೆಯಲ್ಲಿ ಜಶ್ವಂತ್ ಬೋಪಣ್ಣಗೆ ಸ್ವೀಟ್ ಎಚ್ಚರಿಕೆ ನೀಡಿದ್ದಾರೆ.

ಜಶ್ವಂತ್ ಹಾಗೂ ಸಾನ್ಯಾ ಬಿಗ್ ಬಾಸ್ ಮನೆಯ ಕಿಚನ್​ನಲ್ಲಿ ಇದ್ದರು. ಈ ಸಂದರ್ಭದಲ್ಲಿ ಒಂದು ಡಬ್ಬಿಯ ಮುಚ್ಚಳ ತೆಗೆಯಲು ಜಶ್ವಂತ್ ಪ್ರಯತ್ನಿಸುತ್ತಿದ್ದರು. ಆದರೆ, ಮುಚ್ಚಳ ತೆಗೆಯಲು ಆಗುತ್ತಿರಲಿಲ್ಲ. ಈ ವೇಳೆ ಚಾಕು ತರುವಂತೆ ಸಾನ್ಯಾ ಬಳಿ ಕೋರಿದರು. ಸಾನ್ಯಾ ಚಾಕು ತರುವ ಮೊದಲೇ ಜಶ್ವಂತ್ ಅವರು ಬಾಕ್ಸ್​​ನ ಮುಚ್ಚಳ ತೆಗೆದಿದ್ದರು.

‘ನಾನು ಚಾಕು ತಂದುಬಿಟ್ಟಿದ್ದೀನಿ. ಏನು ಮಾಡ್ಲಿ ಈಗ? ಚಾಕುವಿನಿಂದ ನಿನಗೆ ಚುಚ್ಚಲೇ’ ಎಂದು ಕೇಳಿದರು ಸಾನ್ಯಾ. ‘ಚಾಕುವಿನಿಂದ ಚುಚ್ಚಿ. ಏನೂ ತೊಂದರೆ ಇಲ್ಲ’ ಎಂದರು ಜಶ್ವಂತ್. ‘ನಾನು ಚಾಕುವಿನಿಂದ ಚುಚ್ಚಲ್ಲ. ನಾನು ಪ್ರೀತಿಯಲ್ಲಿ ಕೊಲ್ತೀನಿ’ ಎಂದು ನಕ್ಕರು ಸಾನ್ಯಾ.

ಸಾನ್ಯಾ ಹಾಗೂ ರೂಪೇಶ್ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗಿದ್ದಾರೆ. ಇವರಿಬ್ಬರ ಮಧ್ಯೆ ಪ್ರೀತಿ ಇದೆ ಎಂದು ಕೆಲವರು ಊಹಿಸಿದ್ದರು. ಆದರೆ, ಇದನ್ನು ಸಾನ್ಯಾ ಆಗಲಿ ರೂಪೇಶ್ ಆಗಲಿ ಒಪ್ಪಿಕೊಂಡಿಲ್ಲ. ನಮ್ಮಿಬ್ಬರ ನಡುವೆ ಇರೋದು ಗೆಳೆತನ ಮಾತ್ರ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಲ್ಲಿ ಸೋನು ಗೌಡ ಅವರನ್ನು ಅನುಕರಿಸಿದ ರಾಕೇಶ್ ಅಡಿಗ

ಈ ವಾರ ಸೋನು ಶ್ರೀನಿವಾಸ್ ಗೌಡ, ನಂದು, ಅಕ್ಷತಾ, ಸ್ಫೂರ್ತಿ ಗೌಡ, ಸಾನ್ಯಾ ಅಯ್ಯರ್, ಜಯಶ್ರೀ, ಸೋಮಣ್ಣ, ರಾಕೇಶ್​ ಅಡಿಗ, ಆರ್ಯವರ್ಧನ್ ಗುರೂಜಿ ಮೇಲೆ ನಾಮಿನೇಷನ್​ ತೂಗುಗತ್ತಿ ಇದೆ.

Published On - 6:59 am, Wed, 17 August 22