ಉಲ್ಟಾ-ಪಲ್ಟಾ ಆಯ್ತು ಸ್ಫೂರ್ತಿ ಗೌಡ ಲೆಕ್ಕಾಚಾರ; ಎಲ್ಲವನ್ನೂ ಬಿಟ್ಟು ಮನೆಗೆ ಹೋಗ್ತೀನಿ ಎಂದ ನಟಿ

‘ಬಿಗ್ ಬಾಸ್’ ಮನೆಯಲ್ಲಿ ಸಮಯ ಕಳೆಯುವುದು ಸುಲಭದ ಮಾತಲ್ಲ. ಈ ಜಗತ್ತು ತುಂಬಾನೇ ಭಿನ್ನ. ಕುಟುಂಬದಿಂದ ದೂರ ಇರಬೇಕು. ಈ ಕಾರಣದಿಂದ ದೊಡ್ಮನೆಯಲ್ಲಿ ಉಳಿಯೋಕೆ ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ.

ಉಲ್ಟಾ-ಪಲ್ಟಾ ಆಯ್ತು ಸ್ಫೂರ್ತಿ ಗೌಡ ಲೆಕ್ಕಾಚಾರ; ಎಲ್ಲವನ್ನೂ ಬಿಟ್ಟು ಮನೆಗೆ ಹೋಗ್ತೀನಿ ಎಂದ ನಟಿ
ರಾಕೇಶ್​-ಸ್ಫೂರ್ತಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 18, 2022 | 8:17 PM

‘ಬಿಗ್ ಬಾಸ್ ಒಟಿಟಿ’ಯಲ್ಲಿ ಸ್ಫೂರ್ತಿ ಗೌಡ (Spoorthi Gowda) ಅವರು ಯಶಸ್ವಿಯಾಗಿ ಎರಡನೇ ವಾರವನ್ನು ಪೂರ್ಣಗೊಳಿಸುತ್ತಿದ್ದಾರೆ. ಈ ವಾರ ಬಿಗ್ ಬಾಸ್ ಒಟಿಟಿಯಿಂದ ಯಾರು ಹೊರಹೋಗುತ್ತಾರೆ ಅನ್ನೋದು ಸದ್ಯದ ಕುತೂಹಲ. 9 ಸ್ಪರ್ಧಿಗಳ ಮೇಲೆ ನಾಮಿನೇಷನ್​ ತೂಗುಗತ್ತಿ ಇದೆ. ಸ್ಫೂರ್ತಿ ಗೌಡ ಅವರ ಮೇಲೂ ನಾಮಿನೇಷನ್ ತೂಗುಗತ್ತಿ ಇದೆ. ಈ ಮಧ್ಯೆ ಅವರ ಲೆಕ್ಕಾಚಾರ ಉಲ್ಟಾ-ಪಲ್ಟಾ ಆಗಿದೆ. ಈ ಕಾರಣದಿಂದ ಅವರು ಮನೆಯಿಂದ ಹೊರಹೋಗುವ ಆಲೋಚನೆಯಲ್ಲಿ ಇದ್ದಾರೆ.

‘ಬಿಗ್ ಬಾಸ್’ ಮನೆಯಲ್ಲಿ ಸಮಯ ಕಳೆಯುವುದು ಸುಲಭದ ಮಾತಲ್ಲ. ಹೊರ ಜಗತ್ತಿಗೆ ಹೋಲಿಸಿದರೆ, ಈ ಜಗತ್ತು ತುಂಬಾನೇ ಭಿನ್ನ. ಇಲ್ಲಿ ಮೊಬೈಲ್​ ಬಳಕೆ ಮಾಡುವಂತಿಲ್ಲ. ಹೊರಗಿನ ಜಗತ್ತಿನ ಜತೆ ಸಂಪರ್ಕ ಇರುವುದಿಲ್ಲ. ಕುಟುಂಬದಿಂದ ದೂರ ಇರಬೇಕು. ಈ ಕಾರಣದಿಂದ ದೊಡ್ಮನೆಯಲ್ಲಿ ಉಳಿಯೋಕೆ ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಸ್ಫೂರ್ತಿ ಗೌಡ ಕೂಡ ಬಿಗ್ ಬಾಸ್ ಮನೆಯಲ್ಲಿ ಕಷ್ಟ ಪಡುತ್ತಿದ್ದಾರೆ. ಅವರಿಗೆ ಮನೆ ಕಷ್ಟ ಎನಿಸಿದೆ.

ಈ ಬಾರಿ ಕಳಪೆ ತಮಗೆ ಬರಬಹುದು ಎಂಬ ಭಯ ಸ್ಫೂರ್ತಿ ಅವರನ್ನು ಕಾಡುತ್ತಿದೆ. ಈ ಕಾರಣಕ್ಕೆ ಅವರು ಜಯಶ್ರೀ ಜತೆಗೆ ಈ ವಿಚಾರ ಮಾತನಾಡಿದ್ದಾರೆ. ‘ನಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಲ್ಲ. ಎಲ್ಲರೂ ನನ್ನನ್ನು ಕಳಪೆ ಎಂದು ಹೇಳಿದರೆ ನಾನು ಜೈಲಿಗೆ ಹೋಗಲ್ಲ’ ಎಂದರು. ಇದಕ್ಕೆ ಜಯಶ್ರೀ ಕೊಟ್ಟ ಉತ್ತರ ನೋಡಿ ಸ್ಫೂರ್ತಿ ಲೆಕ್ಕಾಚಾರ ತಲೆಕೆಳಗಾದಂತೆ ಆಯಿತು.

ಇದನ್ನೂ ಓದಿ
Image
‘ನಾನು ಸಖತ್ ಆಗಿ ಕಬಡ್ಡಿ ಆಡ್ತೀನಿ’ ಎಂದು ಬಿಗ್ ಬಾಸ್ ಮನೆಯಲ್ಲಿ ಗಾಯ ಮಾಡಿಕೊಂಡ ಸೋನು ಶ್ರೀನಿವಾಸ್ ಗೌಡ
Image
ಗರ್ಲ್​​ಫ್ರೆಂಡ್ ವಿಚಾರಕ್ಕೆ ಬಂದ ಸೋನು ಗೌಡ ವಿರುದ್ಧ ಸೇಡು ತೀರಿಸಿಕೊಂಡ ಜಶ್ವಂತ್
Image
‘ಪ್ಲೀಸ್ ದಯವಿಟ್ಟು ಬಿಟ್ಟುಬಿಡಿ’; ಮನೆಗೆ ಬಂದ ಅತಿಥಿ ಕಂಡು ಕಿರುಚಾಡಿದ ಸಾನ್ಯಾ ಅಯ್ಯರ್
Image
‘ಕಾಫಿ ನಾಡು ಚಂದು ಬಿಗ್ ಬಾಸ್‌ಗೆ ಹೋಗಬೇಕು’ ಅಭಿಯಾನ ಶುರು; ಸ್ವತಃ ಬೆಂಬಲ ನೀಡಿದ ವೈರಲ್ ಸಿಂಗರ್!

‘ಕಳಪೆ ಅನ್ನೋದು ಮನೆಯವರ ನಿರ್ಧಾರ. ಅದರಿಂದ ತಪ್ಪಿಸಿಕೊಳ್ಳೋಕೆ ಸಾಧ್ಯವೇ ಇಲ್ಲ. ಕಳಪೆ ಎಂದು ಬಂದರೆ ಹೊರಗೆ ಕೂರೋಕೆ ಸಾಧ್ಯವಿಲ್ಲ’ ಎಂಬ ಉತ್ತರ ಜಯಶ್ರೀ ಕಡೆಯಿಂದ ಬಂತು. ಆ ಮಾತನ್ನು ಕೇಳಿ ಸ್ಫೂರ್ತಿ ತುಂಬಾನೇ ಬೇಸರಗೊಂಡರು.

ಇದನ್ನೂ ಓದಿ: ‘ಇನ್ನು ಯಾವುದೇ ಆಟ ಆಡಲ್ಲ’; ಬಿಗ್ ಬಾಸ್ ಮನೆಯಿಂದ ಹೊರಹೋಗ್ತಾರಾ ಜಯಶ್ರೀ?

ಇನ್ನು, ಬಿಗ್ ಬಾಸ್ ಮನೆಯಲ್ಲಿ ಸಮಯ ಕಳೆಯೋಕೆ ಸ್ಫೂರ್ತಿ ಬಳಿ ಸಾಧ್ಯವಾಗುತ್ತಿಲ್ಲ. ‘ದಿನ ಕಳೆದಂತೆ ನಾನು ಡೌನ್ ಆಗುತ್ತಿದ್ದೇನೆ ಅನಿಸಿತು. ಹೀಗಾಗಿ, ಮನೆಯಿಂದ ಹೊರ ಹೋಗಬೇಕು ಅನಿಸುತ್ತಿದೆ’ ಎಂದಿದ್ದಾರೆ ಸ್ಫೂರ್ತಿ. ಈ ವಾರ ಅವರು ನಾಮಿನೇಟ್ ಆಗಿದ್ದಾರೆ. ಅವರು ಮನೆಯಿಂದ ಹೊರ ಹೋದರು ಯಾವುದೇ ಅಚ್ಚರಿ ಇಲ್ಲ ಎಂಬ ಮಾತು ಕೇಳಿ ಬಂದಿದೆ.

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್