AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಕೇಶ್​ ಅಡಿಗ ಜತೆ ಇರೋದೇ ಸ್ಫೂರ್ತಿ ಗೌಡಗೆ ಮುಳುವಾಯ್ತಾ? ನಟಿಗೆ ಕಾಡುತ್ತಿದೆ ಭಯ

ರಾಕೇಶ್​ ಜತೆ ಸ್ಫೂರ್ತಿ ಕ್ಲೋಸ್ ಆಗಿರುತ್ತಾರೆ. ಈಗ ಈ ವಿಚಾರದಲ್ಲಿ ಸ್ಫೂರ್ತಿಗೆ ಒಂದು ಅನುಮಾನ ಕಾಡೋಕೆ ಶುರುವಾಗಿದೆ.

ರಾಕೇಶ್​ ಅಡಿಗ ಜತೆ ಇರೋದೇ ಸ್ಫೂರ್ತಿ ಗೌಡಗೆ ಮುಳುವಾಯ್ತಾ? ನಟಿಗೆ ಕಾಡುತ್ತಿದೆ ಭಯ
ರಾಕೇಶ್​-ಸ್ಫೂರ್ತಿ
TV9 Web
| Edited By: |

Updated on: Aug 15, 2022 | 8:04 PM

Share

ರಾಕೇಶ್ ಅಡಿಗ (Rakesh Adiga) ಹಾಗೂ ಸ್ಫೂರ್ತಿ ಗೌಡ ನಡುವೆ ಏನೋ ಇದೆ ಎಂಬ ವಿಚಾರ ಚರ್ಚೆ ಆಗುತ್ತಿದೆ. ನೋಡುವವರ ಕಣ್ಣಿನಲ್ಲಿ ಇದು ನಾನಾ ರೀತಿಯ ಬಣ್ಣ ಪಡೆದುಕೊಳ್ಳುತ್ತಿದೆ. ಇಬ್ಬರೂ ಗುಡ್ ಫ್ರೆಂಡ್ಸ್​ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ಇದನ್ನು ಮನೆಯಲ್ಲಿ ಇರುವ ಮಂದಿ ಬೇರೆಯದೇ ರೀತಿಯಲ್ಲಿ ಕನೆಕ್ಟ್ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ಸ್ಫೂರ್ತಿ ಗೌಡಗೆ (Spoorthi Gowda) ಭಯ ಶುರುವಾಗಿದೆ. ಈ ಕಾರಣಕ್ಕೆ ಅವರು ರಾಕೇಶ್ ಅವರಿಂದ ದೂರ ಉಳಿಯಲು ಪ್ಲ್ಯಾನ್ ಮಾಡುತ್ತಿದ್ದಾರೆ.

ರಾಕೇಶ್ ಹಾಗೂ ಸ್ಫೂರ್ತಿ ಗೌಡ ಮನೆಯಲ್ಲಿ ಕ್ಲೋಸ್ ಆಗಿದ್ದಾರೆ. ಈ ಬಗ್ಗೆ ಅನೇಕರು ಕಣ್ಣಿಟ್ಟಿದ್ದಾರೆ. ಸೋನು ಗೌಡ ಅವರಿಗೂ ರಾಕೇಶ್​ ಮೇಲೆ ಆಕರ್ಷಣೆ ಇದೆ. ಸೋನು ಗೌಡ ಅವರಿಗೆ ಉರಿಸಬೇಕು ಎಂಬ ಕಾರಣಕ್ಕೂ ರಾಕೇಶ್​ ಜತೆ ಸ್ಫೂರ್ತಿ ಕ್ಲೋಸ್ ಆಗಿರುತ್ತಾರೆ. ಈಗ ಈ ವಿಚಾರದಲ್ಲಿ ಸ್ಫೂರ್ತಿಗೆ ಒಂದು ಅನುಮಾನ ಕಾಡೋಕೆ ಶುರುವಾಗಿದೆ. ರಾಕೇಶ್​ಗೆ ಕ್ಲೋಸ್ ಆಗುತ್ತಿರುವ ವಿಚಾರ ಅವರಿಗೆ ಮುಳುವಾಗುವ ಸೂಚನೆ ಸಿಕ್ಕಿದೆ.

ವಾರಾಂತ್ಯದಲ್ಲಿ ಸುದೀಪ್ ಜತೆ ಮಾತನಾಡುವಾಗ ಜಯಶ್ರೀ ಅವರು ಈ ಬಗ್ಗೆ ಮಾತನಾಡಿದ್ದರು. ‘ಸ್ಫೂರ್ತಿ ಸದಾ ರಾಕೇಶ್​ ಜತೆ ಇರುತ್ತಾರೆ’ ಎಂದು ಆರೋಪಿಸಿದ್ದರು. ಈ ವಿಚಾರದಲ್ಲಿ ಸ್ಫೂರ್ತಿಗೆ ಬೇಸರ ಆಗಿದೆ. ಈ ಕಾರಣಕ್ಕೆ ರಾತ್ರಿ ವೇಳೆ ಈ ವಿಚಾರದ ಬಗ್ಗೆ ಅವರು ಚರ್ಚೆ ಮಾಡಿದ್ದಾರೆ. ‘ನೀವು ಯಾಕೆ ಆ ರೀತಿ ಹೇಳಿದಿರಿ’ ಎಂದು ಜಯಶ್ರೀಗೆ ಪ್ರಶ್ನೆ ಮಾಡಿದರು ಸ್ಫೂರ್ತಿ. ಇದಕ್ಕೆ ಉತ್ತರಿಸಿದ ಜಯಶ್ರೀ, ‘ನನಗೆ ಏನು ಅನಿಸಿತೋ ಅದನ್ನು ಹೇಳಿದ್ದೀನಿ’ ಎಂದರು. ಇದರಿಂದ ಸ್ಫೂರ್ತಿಗೆ ತಮ್ಮ ತಪ್ಪು ಅರಿವಾಗಿದೆ.

ಇದನ್ನೂ ಓದಿ: ‘ಮಿಸ್ಟೇಕ್ ಮಾಡ್ಕೋಬೇಡ’: ‘ಬಿಗ್ ಬಾಸ್​’ ಮನೆಯಲ್ಲಿ ಜೋರಾಯ್ತು ರಾಕೇಶ್​-ಸ್ಫೂರ್ತಿ ಕುರಿತ ಗುಸುಗುಸು

ಈ ಘಟನೆ ನಡೆದ ಮರುದಿನವೇ ಸ್ಫೂರ್ತಿ ಬದಲಾಗಿದ್ದಾರೆ. ‘ರಾಕೇಶ್​ಗೆ ಅಣ್ಣ ಎಂದು ಕರೆಯುತ್ತೇನೆ’ ಎಂಬುದಾಗಿ ಘೋಷಿಸಿದರು. ಈ ವಿಚಾರ ಕೇಳಿ ರೂಪೇಶ್ ಅವರು ಅಚ್ಚರಿ ಹೊರಹಾಕಿದರು. ‘ನಿಮ್ಮಿಬ್ಬರ ಜೋಡಿ ಚೆನ್ನಾಗಿ ಹೊಂದುತ್ತದೆ’ ಎಂದು ಘೋಷಿಸಿದರು.

Follow Us
TV9 Web
TV9 Web

TV9 Kannada

Read More
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ