ಬಿಗ್ ಬಾಸ್ಗೆ ಅವಾಜ್ ಹಾಕಿದ ಸೋನು ಶ್ರೀನಿವಾಸ್ ಗೌಡ; ಕ್ಷಮೆ ಕೇಳಲು ಪಟ್ಟು ಹಿಡಿದ ವೈರಲ್ ಹುಡುಗಿ
ದೊಡ್ಮನೆಯಲ್ಲಿ ಯಾರಾದರೂ ತಪ್ಪು ಮಾಡಿದರೆ ‘ಬಿಗ್ ಬಾಸ್’ ಆ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ‘ಬಿಗ್ ಬಾಸ್’ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ ಅವರು ಅನೇಕ ಬಾರಿ ಕಿವಿಮಾತು ಹೇಳಿಸಿಕೊಂಡಿದ್ದಾರೆ.

‘ಬಿಗ್ ಬಾಸ್ ಒಟಿಟಿ ಸೀಸನ್ 1’ನಲ್ಲಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ರಾಕೇಶ್ ಅಡಿಗ ಜತೆ ಕ್ಲೋಸ್ ಆಗಿದ್ದಾರೆ. ಈ ವಿಚಾರ ಬಿಗ್ ಬಾಸ್ (Bigg Boss) ಮನೆಯಲ್ಲಿ ಹೈಲೈಟ್ ಆಗುತ್ತಿದೆ. ಈಗ ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ಗೆ ಅವಾಜ್ ಹಾಕಿದ್ದಾರೆ. ಈ ವಿಚಾರ ಆಗಸ್ಟ್ 26ರ ಎಪಿಸೋಡ್ನಲ್ಲಿ ಸಾಕಷ್ಟು ಹೈಲೈಟ್ ಆಗಿದೆ. ಅವರು ಈ ರೀತಿ ಹೇಳೋಕೂ ಒಂದು ಕಾರಣ ಇದೆ.
ದೊಡ್ಮನೆಯಲ್ಲಿ ಯಾರಾದರೂ ತಪ್ಪು ಮಾಡಿದರೆ ‘ಬಿಗ್ ಬಾಸ್’ ಆ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ‘ಬಿಗ್ ಬಾಸ್’ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ ಅವರು ಅನೇಕ ಬಾರಿ ಕಿವಿಮಾತು ಹೇಳಿಸಿಕೊಂಡಿದ್ದಾರೆ. ಆಗಸ್ಟ್ 26ರ ಎಪಿಸೋಡ್ನಲ್ಲೂ ಈ ಬಗ್ಗೆ ಸೋನುಗೆ ಎಚ್ಚರಿಕೆ ನೀಡಲಾಗಿದೆ. ‘ಸೋನು ಮೈಕ್ ಅನ್ನು ಸರಿಯಾಗಿ ಧರಿಸಿ’ ಎಂದು ಬಿಗ್ ಬಾಸ್ ಘೋಷಿಸಿದರು. ಇದಕ್ಕೆ ಸೋನು ಸಿಟ್ಟಾಗಿದ್ದಾರೆ.
‘ನೋಡಿ ಬಿಗ್ ಬಾಸ್ ಮೈಕ್ ಅನ್ನು ಸರಿಯಾಗಿ ಧರಿಸಿದ್ದೇನೆ. ನೀವು ಏಕೆ ಪದೇಪದೇ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದೀರಾ? ಉದ್ದೇಶ ಪೂರ್ವಕವಾಗಿಯೇ ನೀವು ಹೇಳುತ್ತಿದ್ದೀರಾ ಅಥವಾ ಬೇರೆಯವರಿಗೆ ಹೇಳುವುದನ್ನು ನನಗೆ ಹೇಳುತ್ತಿದ್ದೀರಿ ಎನಿಸುತ್ತದೆ. ನೀವು ಕ್ಷಮೆ ಕೇಳಬೇಕು’ ಎಂದು ಬಿಗ್ ಬಾಸ್ಗೆ ಸೋನು ಶ್ರೀನಿವಾಸ್ ಗೌಡ ಹೇಳಿದ್ದಾರೆ.
ಇದನ್ನೂ ಓದಿ: ‘ನಿಜವಾದ ಪ್ರೀತಿಯಲ್ಲಿ ನಂಬಿಕೆ ಇರಬೇಕು’; ಇದು ಸೋನು ಶ್ರೀನಿವಾಸ್ ಗೌಡ ಪಾಠ
ಕಳೆದ ಸೀಸನ್ ಅಲ್ಲಿ ಶುಭಾ ಪೂಂಜಾ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 8’ ಸಂದರ್ಭದಲ್ಲಿ ಬಿಗ್ ಬಾಸ್ಗೆ ಅವಾಜ್ ಹಾಕಿದ ಉದಾಹರಣೆ ಸಾಕಷ್ಟಿದೆ. ಈ ಬಾರಿ ಸೋನು ಶ್ರೀನಿವಾಸ್ ಗೌಡ ಅವರು ಅದೇ ರೀತಿ ಆಡುತ್ತಿದ್ದಾರೆ. ಕಳೆದ ಬಾರಿ ಈ ವಿಚಾರ ವೀಕೆಂಡ್ನಲ್ಲೂ ಚರ್ಚೆ ಆಗಿತ್ತು. ಈಗ ಆಗಸ್ಟ್ 27ರಂದು ಕಿಚ್ಚ ಸುದೀಪ್ ಬರಲಿದ್ದಾರೆ. ಸೋನು ಅವರು ಹೇಳಿದ ಮಾತು ಚರ್ಚೆಗೆ ಬರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
Published On - 9:06 pm, Fri, 26 August 22








