AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾನ್ಯಾ, ಜಶ್ವಂತ್ ಬಗ್ಗೆ ಕೆಟ್ಟದಾಗಿ ಮಾತನಾಡಿ ಸಿಕ್ಕಿ ಬಿದ್ದ ಉದಯ್ ಸೂರ್ಯ

‘ಬಿಗ್ ಬಾಸ್ ಒಟಿಟಿ’ಯಲ್ಲಿ ಉದಯ್ ಸೂರ್ಯ ಅವರು ಎಲ್ಲರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಅವರು ಎಲ್ಲರ ಜತೆಯೂ ಒಳ್ಳೆಯ ರೀತಿಯಲ್ಲಿ ಇರಲು ಹೋಗಿ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ.

ಸಾನ್ಯಾ, ಜಶ್ವಂತ್ ಬಗ್ಗೆ ಕೆಟ್ಟದಾಗಿ ಮಾತನಾಡಿ ಸಿಕ್ಕಿ ಬಿದ್ದ ಉದಯ್ ಸೂರ್ಯ
ಸಾನ್ಯಾ-ಉದಯ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Aug 27, 2022 | 6:30 AM

Share

‘ಬಿಗ್ ಬಾಸ್ ಒಟಿಟಿ’ಯಲ್ಲಿ (Bigg Boss OTT) ಆಗಸ್ಟ್ 26ರ ಎಪಿಸೋಡ್​ನಲ್ಲಿ ದೊಡ್ಡ ಜಗಳ ನಡೆದಿದೆ. ಉದಯ್ ಸೂರ್ಯ್ ಅವರು ಎಲ್ಲರ ಬಳಿಯೂ ತೆರಳಿ ನಾನಾ ರೀತಿಯಲ್ಲಿ ಮಾತನಾಡಿದ್ದರು. ಜಶ್ವಂತ್ ಬೋಪಣ್ಣ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಸಾನ್ಯಾ ಹಾಗೂ ರೂಪೇಶ್​, ಸಾನ್ಯಾ ಹಾಗೂ ಜಶ್ವಂತ್ ಫ್ರೆಂಡ್​ಶಿಪ್ ಬಗ್ಗೆ ನಾನಾ ರೀತಿಯ ಅರ್ಥ ಕಲ್ಪಿಸಿದ್ದರು. ಈಗ ಈ ಎಲ್ಲಾ ವಿಚಾರಗಳು ಉದಯ್​ ಸೂರ್ಯಗೆ (Uday Surya) ಮುಳುವಾಗಿದೆ. ಮನೆಯಲ್ಲಿ ಅವರು ಬಾಯಿಗೆ ಬಂದಂತೆ ಬೈಸಿಕೊಂಡಿದ್ದಾರೆ.

‘ಬಿಗ್ ಬಾಸ್ ಒಟಿಟಿ’ಯಲ್ಲಿ ಉದಯ್ ಸೂರ್ಯ ಅವರು ಎಲ್ಲರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಅವರು ಎಲ್ಲರ ಜತೆಯೂ ಒಳ್ಳೆಯ ರೀತಿಯಲ್ಲಿ ಇರಲು ಹೋಗಿ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ. ಈಗ ಹಲವು ವಿಚಾರಗಳು ಅವರಿಗೆ ಮುಳುವಾಗಿದೆ.

ಒಳ ಉಡುಪಿನ ವಿಚಾರಕ್ಕೆ ಸಂಬಂಧಿಸಿ ಸಾನ್ಯಾ ಹಾಗೂ ಉದಯ್ ನಡುವೆ ಒಂದು ಹಾಸ್ಯಮಯ ಸಂಭಾಷಣೆ ನಡೆದಿತ್ತು. ಆ ಸಂದರ್ಭದಲ್ಲಿ ಉದಯ್​ಗೆ ಚೈತ್ರಾ ಕ್ಲೋಸ್ ಇದ್ದರು. ಹಾಸ್ಯದ ರೀತಿಯಲ್ಲಿ ನಡೆದ ಒಳ ಉಡುಪಿನ ವಿಚಾರವನ್ನು ಅಶ್ಲೀಲ ಅರ್ಥ ಬರುವ ರೀತಿಯಲ್ಲಿ ಚೈತ್ರಾ ಎದುರು ಬಣ್ಣಿಸಿದ್ದರು ಉದಯ್. ಇದು ಚೈತ್ರಾಗೆ ಇಷ್ಟವಾಗಿಲ್ಲ. ‘ಗರ್ಲ್​ಫ್ರೆಂಡ್ ನಂದು ಇದ್ದಾಗ ಜಶ್ವಂತ್ ಒಂದು ರೀತಿಯಲ್ಲಿ ಇರುತ್ತಾನೆ. ಅವಳು ಇಲ್ಲದ್ದಾಗ ಸಾನ್ಯಾ ಬಳಿ ಬೇರೆ ರೀತಿಯಲ್ಲಿ ಇರುತ್ತಾನೆ. ಕ್ಯಾಮೆರಾ ಇಲ್ಲದಿದ್ದರೆ ಇಲ್ಲಿ ಬೇರೆಯದೇ ಆಗುತ್ತಿತ್ತು. ಸಾನ್ಯಾಳನ್ನು ಬೀಳಿಸಿಕೊಳ್ಳಬೇಕು ಎಂಬುದು ರೂಪೇಶ್​ಗೆ ಇದೆ’ ಎಂಬುದನ್ನೂ ಚೈತ್ರಾ ಎದುರು ಉದಯ್ ಹೇಳಿದ್ದರು.

ಇದನ್ನೂ ಓದಿ
Image
Sonu Srinivas Gowda: ರಾತ್ರಿ 2.15ಕ್ಕೆ ಸೋನು ಗೌಡ ಜತೆ ಮಾತಾಡಲು ಬಂದ ರಾಕೇಶ್; ವೈರಲ್​ ಹುಡುಗಿಯ ಪ್ರತಿಕ್ರಿಯೆ ಹೇಗಿತ್ತು?​
Image
Sonu Srinivas Gowda: ಮೂಡ್ ಇಲ್ಲ ಅಂದ್ರೆ ಸೋನು ಶ್ರೀನಿವಾಸ್​ ಗೌಡ 3 ದಿನ ಸ್ನಾನ ಮಾಡಲ್ಲ; ಎಲ್ಲರ ಎದುರು ಸತ್ಯ ಬಯಲು
Image
Sonu Srinivas Gowda: ‘ನೀವು ಹೀಗೆ ಮಾಡಿದ್ರೆ ಈ ಶೋ ನಡೆಯಲ್ಲ’: ಸುದೀಪ್​ ಕೋಪಕ್ಕೆ ಕಾರಣವಾಯ್ತು ಸೋನು ಗೌಡ ವರ್ತನೆ
Image
Sonu Srinivas Gowda: ‘ಸೋನು ಬಾತ್​ ರೂಮ್​ ಯಾಕೆ ಹುಡುಕಲಿಲ್ಲ?’: ವೇದಿಕೆ ಮೇಲೆ ಸುದೀಪ್​ ಕೇಳಿದ್ರು ನೇರ ಪ್ರಶ್ನೆ

ಇದನ್ನೂ ಓದಿ: ಬಿಗ್ ಬಾಸ್​ಗೆ ಅವಾಜ್ ಹಾಕಿದ ಸೋನು ಶ್ರೀನಿವಾಸ್ ಗೌಡ; ಕ್ಷಮೆ ಕೇಳಲು ಪಟ್ಟು ಹಿಡಿದ ವೈರಲ್ ಹುಡುಗಿ

ಈ ವಿಚಾರ ಕಳೆದ ವಾರದಿಂದ ಚರ್ಚೆ ಆಗುತ್ತಲೇ ಬರುತ್ತಿತ್ತು. ಈಗ ಚೈತ್ರಾ ಅವರು ಜಶ್ವಂತ್, ರೂಪೇಶ್, ಸಾನ್ಯಾ, ನಂದಿನಿ ಬಳಿ ಉದಯ್ ಹೇಳಿದ್ದ ವಿಚಾರವನ್ನು ಚರ್ಚೆ ಮಾಡಿದ್ದಾರೆ. ಉದಯ್ ನಡೆಗೆ ಎಲ್ಲರೂ ಕೋಪಗೊಂಡಿದ್ದಾರೆ. ಉದಯ್ ಅವರನ್ನು ಎದುರಿನಲ್ಲಿ ಕೂರಿಸಿಕೊಂಡೇ ಈ ವಿಚಾರ ಚರ್ಚೆ ಆಗಿದೆ. ಈ ಮೂಲಕ ರೆಡ್ ಹ್ಯಾಂಡ್ ಆಗಿ ಉದಯ್ ಸಿಕ್ಕಿ ಬಿದ್ದಿದ್ದಾರೆ. ಎಲ್ಲರೂ ಉದಯ್​ಗೆ ಛೀಮಾರಿ ಹಾಕಿದ್ದಾರೆ.

ವಿಧಾನಸೌಧದ ವಿದ್ಯುತ್ ದೀಪಾಲಂಕಾರ ನೋಡಲು ತಂಡೋಪತಂಡವಾಗಿ ಬಂದ ಜನ
ವಿಧಾನಸೌಧದ ವಿದ್ಯುತ್ ದೀಪಾಲಂಕಾರ ನೋಡಲು ತಂಡೋಪತಂಡವಾಗಿ ಬಂದ ಜನ
ಬೆಂಗಳೂರಿನಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಕಾರಣವೇನು? DCM ಹೇಳಿದ್ದಿಷ್ಟು
ಬೆಂಗಳೂರಿನಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಕಾರಣವೇನು? DCM ಹೇಳಿದ್ದಿಷ್ಟು
ದರ್ಶನ್ ಬಿಡುಗಡೆ ಆಗದಿದ್ದರೆ ಸರ್ಕಾರಕ್ಕೆ ನಷ್ಟ: ಲಾಜಿಕ್ ಮುಂದಿಟ್ಟ ಉಮೇಶ್
ದರ್ಶನ್ ಬಿಡುಗಡೆ ಆಗದಿದ್ದರೆ ಸರ್ಕಾರಕ್ಕೆ ನಷ್ಟ: ಲಾಜಿಕ್ ಮುಂದಿಟ್ಟ ಉಮೇಶ್
ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿದ ಶರಣಬಸವಪ್ಪ ಅಪ್ಪ ಅಂತ್ಯಕ್ರಿಯೆ
ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿದ ಶರಣಬಸವಪ್ಪ ಅಪ್ಪ ಅಂತ್ಯಕ್ರಿಯೆ
ತಿರುಪತಿ ತಿಮ್ಮಪ್ಪನ ದಾಸೋಹಕ್ಕೆ 7 ಟನ್ ತರಕಾರಿ ಕಳುಹಿಸಿದ ಸ್ನೇಹಿತರು
ತಿರುಪತಿ ತಿಮ್ಮಪ್ಪನ ದಾಸೋಹಕ್ಕೆ 7 ಟನ್ ತರಕಾರಿ ಕಳುಹಿಸಿದ ಸ್ನೇಹಿತರು
ಎಕ್ಸ್​​ಪ್ರೆಸ್​ವೇನಲ್ಲಿ ಬೈಕ್​ ಸ್ಟಂಟ್, ಎರಡೂ ಬೈಕ್​ ಮುಖಾಮುಖಿ ಡಿಕ್ಕಿ
ಎಕ್ಸ್​​ಪ್ರೆಸ್​ವೇನಲ್ಲಿ ಬೈಕ್​ ಸ್ಟಂಟ್, ಎರಡೂ ಬೈಕ್​ ಮುಖಾಮುಖಿ ಡಿಕ್ಕಿ
ರಾಜಣ್ಣ ಪರ ಸಿದ್ದರಾಮಯ್ಯ ಮನವೊಲಿಸಿದ್ರೂ ಕೇಳಿಲ್ವಂತೆ ಹೈಕಮಾಂಡ್!
ರಾಜಣ್ಣ ಪರ ಸಿದ್ದರಾಮಯ್ಯ ಮನವೊಲಿಸಿದ್ರೂ ಕೇಳಿಲ್ವಂತೆ ಹೈಕಮಾಂಡ್!
ಮಕ್ಕಳನ್ನು ಕಚ್ಚಿದ್ದಕ್ಕೆ, ನಾಯಿಯ ಬೈಕ್​​ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ
ಮಕ್ಕಳನ್ನು ಕಚ್ಚಿದ್ದಕ್ಕೆ, ನಾಯಿಯ ಬೈಕ್​​ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ
ಚಿನ್ನಯ್ಯನಪಾಳ್ಯ ನಿಗೂಢ ಸ್ಫೋಟ: ಭಯಾನಕ ದೃಶ್ಯದ ಸಿಸಿಟಿವಿ ವಿಡಿಯೋ ಇಲ್ಲಿದೆ
ಚಿನ್ನಯ್ಯನಪಾಳ್ಯ ನಿಗೂಢ ಸ್ಫೋಟ: ಭಯಾನಕ ದೃಶ್ಯದ ಸಿಸಿಟಿವಿ ವಿಡಿಯೋ ಇಲ್ಲಿದೆ
ಇದ್ದಕ್ಕಿದ್ದಂತೆ ದೊಡ್ಡ ಸ್ಫೋಟವಾಯ್ತು ಎಂದ ಸ್ಥಳೀಯರು: ವಿಡಿಯೋ ನೋಡಿ
ಇದ್ದಕ್ಕಿದ್ದಂತೆ ದೊಡ್ಡ ಸ್ಫೋಟವಾಯ್ತು ಎಂದ ಸ್ಥಳೀಯರು: ವಿಡಿಯೋ ನೋಡಿ