ಅಪ್ಪು ಸಮಾಧಿ ಬಳಿ ಶಾಸಕ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾದ ಪೋಸ್ಟರ್ ಲಾಂಚ್

ಪುನೀತ್ ರಾಜ್​ಕುಮಾರ್ ಸಮಾಧಿಗೆ ನಮನ ಸಲ್ಲಿಸಿ ಬನಾರಸ್ ಸಿನಿಮಾ ತಂಡ ಸುದ್ದಿಗೋಷ್ಠಿ ನಡೆಸಿದೆ. ಬನಾರಸ್ ಸಿನಿಮಾದ ಪೋಸ್ಟರ್ ಲಾಂಚ್ ಅನ್ನು ಪುನೀತ್ ರಾಜ್​ಕುಮಾರ್ ಮಾಡಬೇಕಿತ್ತು.

ಅಪ್ಪು ಸಮಾಧಿ ಬಳಿ ಶಾಸಕ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾದ ಪೋಸ್ಟರ್ ಲಾಂಚ್
ಅಪ್ಪು ಸಮಾಧಿ ಬಳಿ ಬನಾರಸ್ ಸಿನಿಮಾದ ಪೋಸ್ಟರ್ ಲಾಂಚ್ ಆಗಿದೆ
Follow us
| Updated By: sandhya thejappa

Updated on:Nov 17, 2021 | 12:52 PM

ಬೆಂಗಳೂರು: ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ನಟಿಸಿರುವ ಬನಾರಸ್ ಸಿನಿಮಾದ ಪೊಸ್ಟರ್ ಲಾಂಚ್ ಆಗಿದೆ. ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಬಳಿ ಚಿತ್ರತಂಡ ಪೋಸ್ಟರ್ ಲಾಂಚ್ ಮಾಡಿದೆ. ಜಮೀರ್ ಪುತ್ರ ಝೈದ್ ಖಾನ್ ಬನಾರಸ್ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದು, ಈ ಚಿತ್ರವನ್ನು ಜಯತೀರ್ಥ ನಿರ್ದೇಶಿಸಿದ್ದಾರೆ. ಚಿತ್ರದ ನಾಯಕಿಯಾಗಿ ಸೋನಲ್ ಮಂಥಾರಿಯಾ ನಟಿಸಿದ್ದಾರೆ. ಇಂದು (ನ.17) ಅಪ್ಪು ಸಮಾಧಿಗೆ ಹೂವಿನ ಹಾರ ಹಾಕಿ, ಪೋಟೋಗೆ ಪೂಜೆ ಸಲ್ಲಿಸಿ ಸಿನಿಮಾದ ಪೋಸ್ಟರ್​ನ ಲಾಂಚ್ ಮಾಡಿದ್ದಾರೆ.

ಪುನೀತ್ ರಾಜ್​ಕುಮಾರ್ ಸಮಾಧಿಗೆ ನಮನ ಸಲ್ಲಿಸಿ ಬನಾರಸ್ ಸಿನಿಮಾ ತಂಡ ಸುದ್ದಿಗೋಷ್ಠಿ ನಡೆಸಿದೆ. ಬನಾರಸ್ ಸಿನಿಮಾದ ಪೋಸ್ಟರ್ ಲಾಂಚ್ ಅನ್ನು ಪುನೀತ್ ರಾಜ್​ಕುಮಾರ್ ಮಾಡಬೇಕಿತ್ತು. ಆದರೆ ಅಪ್ಪು ಆಗಲಿಕೆ ಕಾರಣದಿಂದ ಇದು ಸಾಧ್ಯವಾಗಿಲ್ಲ. ಇದೀಗ ಅಪ್ಪು ಅಗಲಿಕೆಯ ನಂತರ ಸಮಾಧಿ ಬಳಿ ಪೋಸ್ಟರ್ ಲಾಂಚ್ ಮಾಡಲಾಗಿದೆ. ಪೊಸ್ಟರ್ ಲಾಂಚ್​ನಲ್ಲಿ ನಿರ್ದೇಶಕ ಜಯತೀರ್ತ, ನಿರ್ದೇಶಕ ಎ ಹರ್ಷ, ಹಾಸ್ಯ ನಟ ಸುಜಯ್ ಶಾಸ್ತ್ರಿ ಭಾಗಿಯಾಗಿದ್ದರು.

‘ಬೆಲ್​ ಬಾಟಂ’ ಸಿನಿಮಾ ಮೂಲಕ ದೊಡ್ಡ ಗೆಲುವು ಪಡೆದ ನಿರ್ದೇಶಕ ಜಯತೀರ್ಥ ಅವರು ‘ಬನಾರಸ್​’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಪ್ರತಿಷ್ಠಿತ ಲಹರಿ ಮ್ಯೂಸಿಕ್​, ಟಿ-ಸಿರೀಸ್​ ಸಂಸ್ಥೆಗಳು ಜಂಟಿಯಾಗಿ ‘ಬನಾರಸ್​’ ಚಿತ್ರದ ಆಡಿಯೋ ಹಕ್ಕುಗಳನ್ನು ದಾಖಲೆ ಮೊತ್ತಕ್ಕೆ ಖರೀದಿ ಮಾಡಿವೆ. ಇದು ಝೈದ್​ ಖಾನ್​ ಪಾಲಿಗೆ ಹೆಮ್ಮ ತರುವಂಥ ವಿಚಾರವಾಗಿದೆ.

ಬಹುಪಾಲು ಚಿತ್ರೀಕರಣ ಕಾಶಿಯಲ್ಲಿ ನಡೆದಿದೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ ಈ ಚಿತ್ರ ಮುಡಿಬರಲಿದೆ. ಎಲ್ಲ ಭಾಷೆಯ ಆಡಿಯೋ ಹಕ್ಕುಗಳು ಸೇಲ್​ ಆಗಿವೆ. ‘ಬನಾರಸ್​’ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್​ ಬಿ. ಲೋಕನಾಥ್​ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಇದನ್ನೂ ಓದಿ

Suriya: ನಟ ಸೂರ್ಯ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ; ಕಾರಣವೇನು? ಇಲ್ಲಿದೆ ಮಾಹಿತಿ

ಬೊಂಬೆ ಹೇಳುತೈತೆ ಹಾಡಿನ ಮುಖಾಂತರ ಪುನೀತ್​ಗೆ ನಮನ ಸಲ್ಲಿಸಿದ 50ಕ್ಕೂ ಹೆಚ್ಚು ಪುಟಾಣಿಗಳು; ವಿಡಿಯೋ ನೋಡಿ

Published On - 12:36 pm, Wed, 17 November 21