ಬೊಂಬೆ ಹೇಳುತೈತೆ ಹಾಡಿನ ಮುಖಾಂತರ ಪುನೀತ್​ಗೆ ನಮನ ಸಲ್ಲಿಸಿದ 50ಕ್ಕೂ ಹೆಚ್ಚು ಪುಟಾಣಿಗಳು; ವಿಡಿಯೋ ನೋಡಿ

Puneeth Rajkumar: ನಟ ಪುನೀತ್ ರಾಜ್​ಕುಮಾರ್ ಅವರಿಗೆ ಚಿಕ್ಕಮಗಳೂರಿನ ಗಾಂತವ್ಯ ಡಾನ್ಸ್ ಅಕಾಡೆಮಿಯ 50ಕ್ಕೂ ಹೆಚ್ಚು ಪುಟಾಣಿಗಳು ದೀಪ ನಮನ ಸಲ್ಲಿಸಿದ್ದಾರೆ.

ಬೊಂಬೆ ಹೇಳುತೈತೆ ಹಾಡಿನ ಮುಖಾಂತರ ಪುನೀತ್​ಗೆ ನಮನ ಸಲ್ಲಿಸಿದ 50ಕ್ಕೂ ಹೆಚ್ಚು ಪುಟಾಣಿಗಳು; ವಿಡಿಯೋ ನೋಡಿ
ಪುನೀತ್ ರಾಜ್​ಕುಮಾರ್​ಗೆ ದೀಪ ನಮನ ಸಲ್ಲಿಸಿದ ಪುಟಾಣಿಗಳು
Follow us
| Updated By: shivaprasad.hs

Updated on:Nov 17, 2021 | 9:56 AM

ಚಿಕ್ಕಮಗಳೂರು: ನಟ ಪುನೀತ್ ರಾಜ್​ಕುಮಾರ್ ಅಗಲಿಕೆಯ ನೋವಿನಿಂದ ನಾಡು ಇನ್ನೂ ಹೊರಬಂದಿಲ್ಲ. ವಿವಿಧ ಕಾರ್ಯಕ್ರಮಗಳ ಮೂಲಕ ಪುನೀತ್​ಗೆ ಶ್ರದ್ಧಾಂಜಲಿ ಸಲ್ಲಿಸಿ, ನಮನ ಸಲ್ಲಿಸಲಾಗುತ್ತಿದೆ. ರಾಜ್ಯದ ಹಲವೆಡೆ ಪುನೀತ್ ಅಭಿಮಾನಿಗಳು ಸಾಮಾಜಿಕ ಕಾರ್ಯಗಳು, ನೇತ್ರದಾನ ಮೊದಲಾದವುಗಳ ಮೂಲಕ ಬಹಳ ಅರ್ಥಪೂರ್ಣವಾಗಿ ನಮನ ಸಲ್ಲಿಸುತ್ತಿದ್ದಾರೆ. ಮಕ್ಕಳಿಗೆ ಅತ್ಯಂತ ನೆಚ್ಚಿನ ನಟರಾಗಿದ್ದ ಪುನೀತ್​ಗೆ ಅಪಾರ ಪುಟಾಣಿ ಅಭಿಮಾನಿ ಬಳಗವಿದೆ. ಅವರ ನೃತ್ಯವನ್ನು ನೋಡಿ, ತಾವೂ ನೃತ್ಯ ಮಾಡಬೇಕು ಎಂದು ಕನಸು ಕಂಡ ಮಕ್ಕಳ ಸಂಖ್ಯೆಯೂ ದೊಡ್ಡದು. ಇಂತಹ ಪುಟಾಣಿ ಅಪ್ಪು ಅಭಿಮಾನಿಗಳು ಚಿಕ್ಕಮಗಳೂರಿನಲ್ಲಿ ಪುನೀತ್​ಗೆ ವಿಶೇಷ ರೀತಿಯಲ್ಲಿ ನಮನ ಸಲ್ಲಿಸಿದ್ದಾರೆ.

ಚಿಕ್ಕಮಗಳೂರು ನಗರದ ಗಾಂತವ್ಯ ಡ್ಯಾನ್ಸ್ ಅಕಾಡೆಮಿಯ ಮಕ್ಕಳು ಪುನೀತ್​ಗೆ ದೀಪ ಬೆಳಗಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಜೊತೆಗೆ ‘ಬೊಂಬೆ ಹೇಳುತೈತೆ, ನೀನೇ ರಾಜಕುಮಾರ’ ಹಾಡಿನ ಮುಖಾಂತರ ಪುನೀತ್​ಗೆ ನಮನವನ್ನು ಪುಟಾಣಿಗಳು ಸಲ್ಲಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಪುಟಾಣಿಗಳು ಪುನೀತ್ ರಾಜ್​ಕುಮಾರ್ ಭಾವಚಿತ್ರದ ಎದುರು ದೀಪ ಬೆಳಗಿಸಿ ಹಾಡಿನೊಂದಿಗೆ ಹೆಜ್ಜೆ ಹಾಕುತ್ತಾ, ತಮ್ಮ ನೆಚ್ಚಿನ ಡಾನ್ಸರ್, ನಟ ಅಪ್ಪುಗೆ ಭಾವುಕ ನಮನ ಸಲ್ಲಿಸಿದ್ದಾರೆ.

ಈ ಕುರಿತ ವಿಡಿಯೋ ವರದಿ ಇಲ್ಲಿದೆ:

‘ಪುನೀತ ನಮನ’ದಲ್ಲಿ ನುಡಿನಮನ ಸಲ್ಲಿಸಿದ ಶಕ್ತಿಧಾಮದ ಮಕ್ಕಳು: ಶಕ್ತಿಧಾಮದ ಮೂಲಕ ಸಾವಿರಾರು ಮಕ್ಕಳಿಗೆ ಆಶ್ರಯದಾತರಾಗಿದ್ದ ಪುನೀತ್​ರನ್ನು ಸ್ಮರಿಸಿಕೊಂಡು ಮಕ್ಕಳು ನುಡಿನಮನ ಸಲ್ಲಿಸಿದ್ದಾರೆ. ಟಿವಿ9ನೊಂದಿಗೆ ಮಾತನಾಡಿದ ಮಕ್ಕಳು, ‘‘ಪುನೀತ್​ ರಾಜ್​ಕುಮಾರ್​ ಅವರು ಇಲ್ಲ ಎಂಬುದನ್ನು ನಮಗೆ ನಂಬೋಕೆ ಆಗುತ್ತಿಲ್ಲ. ಈಗಲೂ ಅವರು ನಮ್ಮ ಜೊತೆ ಇದ್ದಾರೆ ಅಂತಲೇ ಅನಿಸುತ್ತಿದೆ. ರಾಜ್​ಕುಮಾರ್ ರೀತಿಯೇ ಪುನೀತ್​ ಅವರ ವ್ಯಕ್ತಿತ್ವವಿತ್ತು. ಅವರಾಗಲಿ, ಶಿವಣ್ಣ ಅವರಾಗಲಿ ನಮ್ಮನ್ನು ಬೇರೆಯವರ ರೀತಿ ನೋಡಿಲ್ಲ. ಸ್ವಂತ ಮಕ್ಕಳ ರೀತಿಯೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಯಾವುದೋ ರೀತಿಯಲ್ಲಿ ನಮಗೆ ಅವರು ಆಶೀರ್ವಾದ ಮಾಡುತ್ತಿರುತ್ತಾರೆ. ಅವರ ನಗುವೇ ಎಲ್ಲರಿಗೂ ಸ್ಫೂರ್ತಿ’’ ಎಂದಿದ್ದಾರೆ.

‘‘ಅವರು ಶಕ್ತಿಧಾಮಕ್ಕೆ ಬಂದಾಗೆಲ್ಲ ನಾವು ಏನೇ ಕೇಳಿದರೂ ಅದನ್ನು ನೆರವೇರಿಸುತ್ತಿದ್ದರು. ಸಿನಿಮಾಗೆ ಕರೆದುಕೊಂಡು ಹೋಗುತ್ತಿದ್ದರು. ಪಾರ್ವತಮ್ಮ ರಾಜ್​ಕುಮಾರ್​ ಅವರ ಜನ್ಮದಿನದಂದು ನಮಗೆಲ್ಲ ಬಟ್ಟೆ ನೀಡಿದ್ದರು. ಪ್ರತಿ ಬಾರಿ ಬಂದಾಗೆಲ್ಲ ನಮಗೆ ಗಿಫ್ಟ್​ ತಂದುಕೊಡುತ್ತಿದ್ದರು’’ ಎಂದು ಮಕ್ಕಳು ಸ್ಮರಿಸಿಕೊಂಡಿದ್ದಾರೆ.

ಇದನ್ನೂ ಓದಿ:

ವಿಶಾಲ್​​ರನ್ನು ನೋಡಿದರೆ ನನ್ನ ತಮ್ಮನನ್ನು ನೋಡಿದ ಹಾಗಾಗುತ್ತದೆ, ಅದನ್ನು ಅಪ್ಪು ಬಳಿಯೂ ಹೇಳಿದ್ದೆ: ಶಿವರಾಜ್​ ಕುಮಾರ್

Puneeth Rajkumar: ಬಂಗಾರಪೇಟೆ ಪಾನಿಪುರಿಗೆ ಮನಸೋತಿದ್ದ ಪುನೀತ್​ ರಾಜ್​ಕುಮಾರ್​

Published On - 9:55 am, Wed, 17 November 21

ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ