Puneeth Rajkumar: ಬಂಗಾರಪೇಟೆ ಪಾನಿಪುರಿಗೆ ಮನಸೋತಿದ್ದ ಪುನೀತ್ ರಾಜ್ಕುಮಾರ್
ಬಂಗಾರಪೇಟೆ ಪಾನಿಪುರಿ ಅಂದ್ರೆ ಇಂದು ದೇಶದಾದ್ಯಂತ ಹೆಸರು ಮಾಡಿದೆ. ‘ಪವರ್ ಸ್ಟಾರ್’ ಪುನಿತ್ ರಾಜ್ಕುಮಾರ್ ಬಂಗಾರಪೇಟೆಗೆ ಬಂದಾಗ ಒಮ್ಮೆ ಪಾನಿಪುರಿ ಸವಿದು ಮೆಚ್ವುಗೆ ವ್ಯಕ್ತಪಡಿಸಿದ್ದರು.

ಬಂಗಾರಪೇಟೆ ಪಾನಿಪುರಿ ಅಂದ್ರೆ ದೇಶದಾದ್ಯಂತ ಹೆಸರು ಮಾಡಿದೆ. ಈ ಬಗ್ಗೆ ಕೇಳಿದ್ದ ಪುನೀತ್ ರಾಜ್ಕುಮಾರ್ ಅವರು ಪಾನಿಪುರಿ ರುಚಿಗೆ ಮನಸೋತು ಶೂಟಿಂಗ್ ಮುಗಿದ ಬಳಿಕ ಒಂದು ದಿನ ಇಡೀ ಚಿತ್ರತಂಡಕ್ಕೂ ಪಾನಿಪುರಿ ಪಾರ್ಟಿ ಕೊಟ್ಟು ಖುಷಿಪಟ್ಟಿದ್ದರಂತೆ. ಅವತ್ತು ವಾಸವಿ ಪಾನಿಪುರಿ ಅಂಗಡಿಯ ವಾಸು ತುಂಬಾ ಖುಷಿಯಿಂದ ಪಾನಿಪುರಿ ಮಾಡಿ ಕೊಟ್ಟಿದ್ದರಂತೆ.
ಒಟ್ಟಾರೆ ಡಾ. ರಾಜ್ಕುಮಾರ್ ಅವರಂತೆಯೇ ತಿಂಡಿ ತಿನಿಸುಗಳನ್ನು ಇಷ್ಟ ಪಡುತ್ತಿದ್ದ ಪುನೀತ್ ರಾಜ್ಕುಮಾರ್ ಕೂಡ ಬೇರೆ ಬೇರೆ ಪ್ರದೇಶಗಳಿಗೆ ಹೋದಾಗ ಅಲ್ಲಿನ ವಿಶೇಷ ಆಹಾರ ಖಾದ್ಯಗಳನ್ನು ಸವಿಯುತ್ತಿದ್ದರು. ಅದು ಅವರ ಹವ್ಯಾಸ ಆಗಿತ್ತು. ಅದರಂತೆ ಕೋಲಾರಕ್ಕೆ ಬಂದು ಬಂಗಾರಪೇಟೆ ಪಾನಿಪುರಿಗೆ ಮನಸೋತಿದ್ದ ಪುನೀತ್ ರಾಜ್ಕುಮಾರ್ ಈಗ ನೆನಪು ಮಾತ್ರ.
ವರದಿ: ರಾಜೇಂದ್ರ ಸಿಂಹ
ಇದನ್ನೂ ಓದಿ:
ಪುನೀತ ನಮನ: ಕಣ್ಣೀರು ತರಿಸಿತು ಸುದೀಪ್ ಧ್ವನಿಯಲ್ಲಿ ಮೂಡಿಬಂದ ಪುನೀತ್ ವಿಡಿಯೋ
‘ಆರು ಕೋಟಿ ಜನರ ಪರವಾಗಿ ಪುನೀತ್ಗೆ ಅಂದು ಮುತ್ತು ಕೊಟ್ಟಿದ್ದೆ’: ಸಿಎಂ ಬೊಮ್ಮಾಯಿ ಭಾವುಕ ನುಡಿ
Published On - 11:03 pm, Tue, 16 November 21