ವಿಶಾಲ್​​ರನ್ನು ನೋಡಿದರೆ ನನ್ನ ತಮ್ಮನನ್ನು ನೋಡಿದ ಹಾಗಾಗುತ್ತದೆ, ಅದನ್ನು ಅಪ್ಪು ಬಳಿಯೂ ಹೇಳಿದ್ದೆ: ಶಿವರಾಜ್​ ಕುಮಾರ್

Puneeth Rajkumar: ನಟ ಶಿವರಾಜ್​ ಕುಮಾರ್ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪುನೀತ್ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರು: ನಟ ಶಿವರಾಜ್​ ಕುಮಾರ್ ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಅಪ್ಪು ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಮಾತನಾಡುತ್ತಾ ಅವರು, ಎಲ್ಲಾ ನಟರಲ್ಲೂ ಪುನೀತ್ ಕಾಣಿಸುತ್ತಾನೆ ಎಂದಿದ್ದಾರೆ. ‘‘ಕಷ್ಟದ ಸಮಯದಲ್ಲಿ ಚಿತ್ರರಂಗ ಹಾಗೂ ಹೊರಗಡೆಯಿಂದ ಎಲ್ಲರೂ ಬಂದು ಸಹಕರಿಸಿದ್ದನ್ನು ಎಂದಿಗೂ ಮರೆಯೋದಿಲ್ಲ. ಧ್ರುವ, ಯಶ್, ಸುದೀಪ್,  ವಿಜಯ್, ಗಣೇಶ್ ಹೀಗೆ ಎಲ್ಲರಲ್ಲೂ ನನ್ನ ತಮ್ಮನನ್ನೇ ಕಾಣುತ್ತೇನೆ’’ ಎಂದಿದ್ದಾರೆ. ಮುಂದುವರೆದು ಮಾತನಾಡಿದ ಅವರು, ‘‘ವಿಶಾಲ್​ಗೆ ಹೇಳುತ್ತಿದ್ದೆ, ನಿಮ್ಮನ್ನು ನೋಡಿದರೆ ನನ್ನ ತಮ್ಮನನ್ನು ನೋಡಿದ ಹಾಗೆಯೇ ಆಗುತ್ತದೆ ಅಂತ. ಅದನ್ನು ಅಪ್ಪು ಬಳಿಯೂ ಹೇಳಿದ್ದೆ’’ ಎಂದು ಶಿವರಾಜ್ ಕುಮಾರ್ ನುಡಿದಿದ್ದಾರೆ.‌

‘‘ಕಷ್ಟದ ಸಮಯದಲ್ಲಿ ಎಲ್ಲರೂ ಬಂದು ನಾವಿದ್ದೇವೆ ಎಂದಾಗ ಮನಸ್ಸಿಗೆ ನೆಮ್ಮದಿಯಾಗುತ್ತದೆ. ಅಷ್ಟೊಂದು ಪ್ರೀತಿಯನ್ನು ಅಪ್ಪು ಗಳಿಸಿದ್ದಾನೆ’’ ಎಂದು ಶಿವರಾಜ್‌ಕುಮಾರ್ ನುಡಿದಿದ್ದಾರೆ. ಪುನೀತ್ ಕುರಿತು ಮಾತನಾಡುತ್ತಾ, ಕಾರ್ಯಕ್ರಮದಲ್ಲಿ ಶಿವಣ್ಣ ಭಾವುಕರಾದರು.

ಇದನ್ನೂ ಓದಿ:

ಪುನೀತ್​ ತೋರಿದ್ದ ಪ್ರೀತಿ-ಕಾಳಜಿ ನೆನೆದು ನುಡಿ ನಮನ ಸಲ್ಲಿಸಿದ ‘ಶಕ್ತಿಧಾಮ’ ಮಕ್ಕಳು

‘ನನ್ನ ತಮ್ಮನಿಗೆ ನನ್ನದೇ ದೃಷ್ಟಿ ಬಿತ್ತೇನೋ ಅನಿಸುತ್ತಿದೆ’; ‘ಪುನೀತ ನಮನ’ದಲ್ಲಿ ಅಳುತ್ತಲೇ ಮಾತನಾಡಿದ ಶಿವಣ್ಣ

Click on your DTH Provider to Add TV9 Kannada